ಬೆಂಗಳೂರು: ‘ಉಪ ಚುನಾವಣೆ ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾನು ಮತ್ತು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ (ಮಾರ್ಚ್ 31) ಹೋಗುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬಾಗಲಕೋಟೆಗೆ ಬುಧವಾರ ತೆರಳುತ್ತೇನೆ. ಆನಂತರ ಎರಡೂ ಕ್ಷೇತ್ರಗಳಿಗೆ ಮತ್ತೊಂದು ಸುತ್ತು ತೆರಳಿ ಪ್ರಚಾರ ಮಾಡುತ್ತೇನೆ. ಏಪ್ರಿಲ್ 5 ಮತ್ತು 6ರಂದು ಕೇರಳ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಈಸ್ಟರ್ ಹಾಗೂ ಗುಡ್ ಫ್ರೈಡೆ ಕಾರಣ ಕೇರಳ ಪ್ರವಾಸವನ್ನು 5ಕ್ಕೆ ಮುಂದೂಡಿದ್ದೇನೆ’ ಎಂದು ಹೇಳಿದರು.

ನುಡಿದಂತೆ ನಡೆವ ಕಾಂಗ್ರೆಸ್: ‘ಅಸ್ಸಾಂನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ಯೋಜನೆ ಘೋಷಣೆ ಮಾಡಿರುವ ಬಗ್ಗೆ ಕೇಳಿದಾಗ, ‘ಅವರು ಘೋಷಣೆ ಪ್ರಟಿಸಿದ ಬಳಿಕ ನಾನು ಭಾಷಣಗಳನ್ನು ಮಾಡಿ ಬಂದಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಭೂಮಿ ಹಕ್ಕು ಘೋಷಣೆ ಮಾಡಿದ್ದೇವೆ. ₹ 25 ಲಕ್ಷದವರೆಗೂ ಆರೋಗ್ಯ ಕಾರ್ಯಕ್ರಮ ಘೋಷಿಸಿದ್ದೇವೆ’ ಎಂದರು.

‘ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಕೇವಲ ತನ್ನ ಕಾರ್ಯಕರ್ತರಿಗೆ ₹1200 ಮಾಸಿಕ ನೀಡುತ್ತಿದೆ. ನಾವು ಎಲ್ಲ ಫಲಾನುಭವಿಗಳಿಗೂ ಯೋಜನೆ ನೀಡಲಿದ್ದೇವೆ. ಅಸ್ಸಾಂ ಮಾತ್ರವಲ್ಲ ದೇಶದ ಯಾವುದೇ ರಾಜ್ಯದಲ್ಲೇ ಆಗಲಿ ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರಂತೆ ಜನರ ಖಾತೆಗೆ ₹15 ಲಕ್ಷ ಹಾಕುತ್ತೇವೆ, ಅಚ್ಛೇ ದಿನ್ ತರುತ್ತೇವೆ ಎಂದು ಸುಳ್ಳು ಭರವಸೆ ನೀಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.