ಬೆಂಗಳೂರು: ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದ ಶೇ 60ರಷ್ಟು ಸದಸ್ಯರನ್ನು ಡಿಕೆಶಿ ಸಂಪುಟದಿಂದ ಹೊರಗಿಡಲು ಕಾಂಗ್ರೆಸ್ ನಿರ್ಧರಿಸಿದ್ದು, ಜೂನ್ 16ಕ್ಕೂ ಮುನ್ನ ನೂತನ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇಂದು(ಮೇ 30) ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ. ಬಳಿಕ, ರಾಜ್ಯಪಾಲರನ್ನು ಭೇಟಿಯಾಗಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಹಾಗಾಗಿ, ಡಿಕೆಶಿ ಯಾವಾಗ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಇಲ್ಲ.

ಮುಂದಿನ ಸಂಪುಟ ರಚನೆ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆಗೂ ಸಂಬಂಧವಿದೆ. ಹೊಸ ಸರ್ಕಾರ ರಚನೆ ಮತ್ತು ರಾಜ್ಯ ಘಟಕದ ಪುನಾರಚನೆಗೆ ಪಕ್ಷವು ಕಳೆದ 3–4 ತಿಂಗಳಿನಿಂದ ಯೋಜನೆ ರೂಪಿಸಿದೆ.

ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸುಮಾರು 20 ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳಪೆ ಸಾಧನೆ ಮತ್ತು ವಿವಾದಗಳಲ್ಲಿ ಸಿಲುಕಿರುವ ಸಚಿವರನ್ನು ಕೈಬಿಡುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ. ಶಿವಕುಮಾರ್ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರ ರಾಜೀನಾಮೆ ಬಳಿಕ ಅಹಿಂದ ನಾಯಕರೊಬ್ಬರಿಗೆ ಹುದ್ದೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಸತೀಶ ಜಾರಕಿಹೊಳಿ ಮತ್ತು ಸಂತೋಷ್ ಲಾಡ್ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿವೆ.

‘ಈ ಕುರಿತಂತೆ ಸಿದ್ದರಾಮಯ್ಯ ಅವರ ಜೊತೆ ಗಂಭೀರ ಚರ್ಚೆ ನಡೆದಿದೆ. ಸಾಮಾಜಿಕ ರಚನೆಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದು ಅತ್ಯಂತ ಪ್ರಮುಖ. ಇಲ್ಲವಾದರೆ, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಅದನ್ನೇ ಆಧರಿಸಿ ಮುಂದಿನ ಸ್ವೀಕರ್ ಮತ್ತು ಪರಿಷತ್ ಅಧ್ಯಕ್ಷರ ನೇಮಕದ ವಿಚಾರದಲ್ಲೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಯತೀಂದ್ರ ಸಿದ್ದರಾಮಯ್ಯನವರಿಗೆ ಸಂಪುಟದಲ್ಲಿ ಪವರ್ಫುಲ್ ಸಚಿವ ಸ್ಥಾನ ಖಚಿತ ಎಂದು ಇಬ್ಬರು ನಾಯಕರು ಹೇಳಿದ್ದಾರೆ.
.ಡಿಕೆಶಿ ಒಂದು ಬಾರಿಯ ಸಿಎಂ ಅಲ್ಲ, ದೀರ್ಘಾವಧಿ ಅಧಿಕಾರದಲ್ಲಿರುತ್ತಾರೆ: ಜ್ಯೋತಿಷಿ.ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯರನ್ನು ಪ್ರೇರೇಪಿಸಿದ್ದ ಹುಟ್ಟೂರಿನ ಆ ಘಟನೆಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.