ಹಲವು ತಿಂಗಳ ಸುದೀರ್ಘ ಚರ್ಚೆ, ಊಹಾಪೋಹದ ಬಳಿಕ ಬುಧವಾರ (ಜೂನ್ 3) ಲೋಕ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಅವರು ಏಳು ವರ್ಷಗಳ ಹಿಂದೆ ಮಾಡಿದ್ದ ಪ್ರತಿಜ್ಞೆ ಮುನ್ನಲೆಗೆ ಬಂದಿದೆ.
.ರಾಜಕೀಯ ರಣಾಂಗಣದಲ್ಲಿ ಡಿ.ಕೆ ಶಿವಕುಮಾರ್ Vs ದೇವೇಗೌಡ ಕುಟುಂಬ.
ಯಾವಾಗಲೂ ಗಡ್ಡ ಬೋಳಿಸಿಯೇ ಇರುತ್ತಿದ್ದ ಶಿವಕುಮಾರ್, 2019ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದರು. ಈ ವೇಳೆ ಅವರು ಗಡ್ಡ ಬಿಟ್ಟಿದ್ದರು.

2019ರ ಅಕ್ಟೋಬರ್ 23 ರಂದು ಅವರು ಜೈಲಿನಿಂದ ಹೊರಬಂದಾಗ, ಅವರ ನರೆತ ಗಡ್ಡವನ್ನು ನೋಡಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಆಶ್ಚರ್ಯಚಕಿತರಾಗಿದ್ದರು. ಶಪಥ ಈಡೇರುವವರೆಗೂ ಕ್ಲೀನ್ ಶೇವ್ ಮಾಡುವುದಿಲ್ಲ ಎಂದು ಜೈಲಿನಲ್ಲಿದ್ದಾಗಲೇ ಪ್ರತಿಜ್ಞೆ ಮಾಡಿದ್ದೇನೆ ಎಂದು ಅವರು ಹೇಳಿದ್ದರು.

ತಮ್ಮ ಈ ಹೊಸ ನೋಟದ ಬಗ್ಗೆ ಅವರು ಹೆಚ್ಚು ಮಾತನಾಡದಿದ್ದರೂ, 2022ರ ಜನವರಿಯಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಆ ನಿಗೂಢ ಪ್ರತಿಜ್ಞೆಯ ಬಗ್ಗೆ ಸುಳಿವು ನೀಡಿದ್ದರು. ಪತ್ರಕರ್ತರು ನೀವು ಯಾವಾಗ ಗಡ್ಡ ತೆಗೆಯುತ್ತೀರಿ ಎಂದು ಕೇಳಿದಾಗ, ‘ನಾನು ಈ ಗಡ್ಡವನ್ನು ತಿಹಾರ್ ಜೈಲಿನಲ್ಲಿ ಬೆಳೆಸಿದೆ. ನಾನು ನನ್ನ ಗಡ್ಡವನ್ನು ತೆಗೆಯಬೇಕಾದರೆ, ನೀವೆಲ್ಲಾ ಸೇರಿ ನನಗೆ ಮೋಕ್ಷ ನೀಡಬೇಕು’ ಎಂದು ಹೇಳಿದ್ದರು. ಆ ಮೂಲಕ ತಮ್ಮ ಕಣ್ಣು ಕರ್ನಾಟಕದ ಅತ್ಯುನ್ನತ ಹುದ್ದೆಯ ಮೇಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದರು.
. Video | ಡಿ.ಕೆ. ಶಿವಕುಮಾರ್ ಹುಟ್ಟೂರಲ್ಲಿ ಹಬ್ಬದ ಸಂಭ್ರಮ.
ನಾಳೆ ಅವರ ಕನಸು ನನಸಾಗಲಿದೆ.

ಕನಕಪುರ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳೆದು, 1980ರ ದಶಕದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶಿಸಿದ ಶಿವಕುಮಾರ್, ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ₹ 1,413 ಕೋಟಿ ಮೌಲ್ಯದ ಘೋಷಿತ ಆಸ್ತಿ ಹೊಂದಿರುವರ ಅವರು, ಈ ಹುದ್ದೆಯನ್ನು ಅಲಂಕರಿಸಲಿರುವ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.

64 ವರ್ಷದ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಂದ ತೀವ್ರವಾಗಿ ಪ್ರಭಾವಿತರಾಗಿದ್ದಾರೆ. ಕೃಷ್ಣ ಅವರಿಂದ ರಾಜಕೀಯ ಮಾತ್ರವಲ್ಲ, ಕೃಷ್ಣ ಅವರ ಫ್ಯಾಷನ್ ಮೇಲಿನ ಆಸಕ್ತಿಯಿಂದಲೂ ಶಿವಕುಮಾರ್ ಆಕರ್ಷಿತರಾಗಿದ್ದರು ಎಂದು ವರದಿಯಾಗಿದೆ.

ಶಿವಕುಮಾರ್ ಐಷಾರಾಮಿ ಫ್ಯಾಷನ್ ಬ್ರಾಂಡ್ಗಳನ್ನು ಧರಿಸುತ್ತಾರೆ. ಗೂಚಿ, ಲೂಯಿ ವಿಥಾನ್ ಸ್ಕಾರ್ಫ್ಗಳು, ಫೆರಗಾಮೊದ ವಸ್ತುಗಳು, ಕಾರ್ಟಿಯರ್, ರೋಲೆಕ್ಸ್ ವಾಚ್ಗಳು ಮತ್ತು ವಿಶಿಷ್ಟ ಸನ್ಗ್ಲಾಸ್ಗಳನ್ನು ಧರಿಸುವ ಮೂಲಕ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ.
.ಸರ್ವ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ.
ಎಂಟು ಬಾರಿ ಶಾಸಕರಾಗಿರುವ ಡಿಕೆಶಿ, ಐಷಾರಾಮಿ ಜೀವನಶೈಲಿಗೆ ಹೆಸರಾಗಿದ್ದರೂ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರವೃತ್ತಿಯುಳ್ಳವರಾಗಿದ್ದಾರೆ. ರಾಜ್ಯ ಮತ್ತು ದೇಶದ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಹಲವು ಸ್ವಾಮಿಜಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ.. ತಿಹಾರ್ ಜೈಲಿನಿಂದ ಬಂದ ತಕ್ಷಣವೇ ನಕಪುರ ಸಮೀಪದ ಕಬ್ಬಾಳಿನಲ್ಲಿರುವ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ನಾಯಕತ್ವದ ಬದಲಾವಣಗೆ ಬಗ್ಗೆ ಇತ್ತೀಚೆಗೆ ಚರ್ಚೆಗಳೂ ನಡೆದಾಲೂ, ಅವರ ಬೆಂಬಲಿಗರು ಅಲ್ಲಿಗೆ ಭೇಟಿ ನಿಡಿದ್ದರು.

ತುಮಕೂರಿನ ನೊಣವಿನಕೆರೆಯಲ್ಲಿರುವ ಐತಿಹಾಸಿಕ ಶ್ರೀ ಕಾಡಸಿದ್ಧೇಶ್ವರ ಮಠ, ಅಥವಾ ಅಜ್ಜಯ್ಯ ಮಠದ ಬಗ್ಗೆ ವಿಶೇಷ ನಂಬಿಕೆ ಹಾಗೂ ಭಕ್ತಿ ಇದೆ

ಗುವಾಹಟಿಯ ಕಾಮಾಕ್ಯ ದೇವಾಲಯಕ್ಕೆ ಶಿವಕುಮಾರ್ ಈ ಹಿಂದೆ ಭೇಟಿ ನೀಡಿದ್ದರು. ಜ್ಯೋತಿಷಿಗಳು ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರ ಸಲಹೆಯ ಮೇರೆಗೆ ಶಿವಕುಮಾರ್ ಕಾಮಾಕ್ಯಕ್ಕೆ ಭೇಟಿ ನೀಡಿದ್ದರು ಎಂದು ವರ್ಷಗಳಿಂದ ವರದಿಗಳು ಹೇಳಿವೆ.
.ಇಂದು ಡಿಕೆಶಿ ಪ್ರಮಾಣ: ‘ಕನಪುರದ ಬಂಡೆ' ಬಗೆಗಿನ ಕುತೂಹಲಕಾರಿ ಸುದ್ದಿಗಳು ಇಲ್ಲಿವೆ.
ಡಿ.ಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಒಂದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಲಿದ್ದಾರೆ ಎಂದು ಅವರ ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಗುರೂಜಿ ಹೇಳಿದ್ದಾರೆ. ಪ್ರಮುಖ ರಾಜಕೀಯ ಬೆಳವಣಿಗೆಗಳು, ಚುನಾವಣೆ ನಿರ್ಧಾರಗಳು ಮತ್ತು ನಾಯಕತ್ವದ ವಿಷಯಗಳ ಬಗ್ಗೆ ದ್ವಾರಕಾನಾಥ್ ಅವರ ಸಲಹೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಪ್ರಮಾಣ ವಚನ ಸ್ವೀಕಾರದ ಸಮಯವನ್ನು ಬುಧವಾರ ಮಧ್ಯಾಹ್ನ ನಿಖರವಾಗಿ 4.05 ಕ್ಕೆ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.

ನಾಳಿನ ಕಾರ್ಯಕ್ರಮಕ್ಕೆ ಹಲವು ಶ್ರೀಗಳು ಮತ್ತು ಆಧ್ಯಾತ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭಕ್ಕೆ ಎಲ್ಲಾ ಧರ್ಮಗಳ ಸುಮಾರು 23 ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ.
.ಕಠಿಣ ಸಮಯದಲ್ಲಿ ಹೆಗಲು ಕೊಟ್ಟು, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಡಿಕೆಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.