ಬೆಂಗಳೂರು: ಎಸ್.ಬಂಗಾರಪ್ಪನವರೇ ಗುರುತಿಸಿ ಸಚಿವರನ್ನಾಗಿ ಮಾಡಿದರೂ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಕೆಲವರು ತಪ್ಪಿಸಿದರು. ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

2004ರಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರು ಜೆಡಿಎಸ್ ಮೈತ್ರಿಗೆ ಮುಂದಾದರು. ಎನ್. ಧರ್ಮಸಿಂಗ್ ನೇತೃತ್ವ ಸರ್ಕಾರ ಬಂದಿತು. ಶಿವಕುಮಾರ್ಗೆ ಮಂತ್ರಿ ಸ್ಥಾನ ಕೊಡಬಾರದು ಎಂದು ದೇವೇಗೌಡರು ಷರತ್ತು ಹಾಕಿದರು. ಇದರಿಂದಾಗಿ, ಆಗ ಸಚಿವ ಸ್ಥಾನ ಸಿಗಲಿಲ್ಲ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿತು. ಪ್ರಭಾವಿಯಾಗಿದ್ದರೂ ಶಿವಕುಮಾರ್ಗೆ ಅವಕಾಶ ಸಿಗಲಿಲ್ಲ. ಸಿದ್ದರಾಮಯ್ಯನವರಿಗೂ ಮನಸ್ಸಿರಲಿಲ್ಲ.

ಆಗ ವಿಧಾನಸಭೆಗೆ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸ್ಥಾನಕ್ಕೆ, ಆಗ ಜೆಡಿಎಸ್ನಲ್ಲಿದ್ದ ಎನ್. ಚೆಲುವರಾಯಸ್ವಾಮಿ ಮಂಡ್ಯ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರೆಡಕ್ಕೂ ಉಪಚುನಾವಣೆ ನಡೆಯಬೇಕಿತ್ತು. ಇದೇ, ವೇಳೆ ಒಮ್ಮೆ ದೆಹಲಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಿವಕುಮಾರ್, ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

‘ಗ್ರಾಮಾಂತರ, ಮಂಡ್ಯ ಎರಡನ್ನೂ ಗೆಲ್ಲಿಸಿಕೊಂಡು ಬಾ, ಆಮೇಲೆ ನೋಡೋಣ’ ಎಂದಿದ್ದ ಸಿದ್ದರಾಮಯ್ಯ, ಅವರನ್ನು ಸಾಗಹಾಕಿದ್ದರು. ಗ್ರಾಮಾಂತರದಲ್ಲಿ ತನ್ನ ತಮ್ಮ ಡಿ.ಕೆ. ಸುರೇಶ್, ಮಂಡ್ಯದಲ್ಲಿ ರಮ್ಯಾ ಅವರನ್ನು ಶಿವಕುಮಾರ್ ಗೆಲ್ಲಿಸಿಕೊಂಡು ಬಂದ ಬಳಿಕವೇ ಸಂಪುಟ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.