ಬೆಂಗಳೂರು: ‘ನಾವು ಐಪಿಎಲ್ ಕ್ರಿಕೆಟ್ ಪಂದ್ಯಗಳ 300 ಟಿಕೆಟ್ ಕೇಳಿದ್ದು ಅವರಿಗೆ (ಬಿಸಿಸಿಐ) ದೊಡ್ಡದಾಯಿತೇ? ಬೇರೆ ರಾಜ್ಯಗಳಲ್ಲಿ ಶೇ 60ರಷ್ಟು ಟಿಕೆಟ್ ಅನ್ನು ಅಲ್ಲಿನ ಸರ್ಕಾರಕ್ಕೆ ಕೊಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗುಜರಾತಿನವರಿಗೆ ಹೆಚ್ಚು ಟಿಕೆಟ್ಗಳು ಬೇಕಾಗಿದ್ದವು. ವ್ಯಾಪಾರವೂ ಹೆಚ್ಚು ಆಗಬೇಕಿತ್ತು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಅಹಮದಾಬಾದಿಗೆ ಸ್ಥಳಾಂತರಿಸಲು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಷ್ಟಕ್ಕೂ ನನಗಾಗಿ ಟಿಕೆಟ್ ಕೇಳಿದ್ದೇನೆಯೇ? ಜನಪ್ರತಿನಿಧಿಗಳು ಮನವಿ ಮಾಡಿದ್ದಕ್ಕೆ ಕೇಳಿದೆ. ಈ ಹಿಂದೆ ಶಾಸಕರಿಗೆ ಎರಡು ಟಿಕೆಟ್ ನೀಡುತ್ತಿದ್ದರು. ಈಗ ಮೂರು ಟಿಕೆಟ್ ಕೊಡುವಂತೆ ಹೇಳಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಐಪಿಎಲ್ ಕ್ರಿಕೆಟ್ ಪಂದ್ಯಗಳ ಟಿಕೆಟ್ ಶಾಸಕ ವಿಜಯಾನಂದ ಕಾಶಪ್ಪನವರು, ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಕೆಲವು ಕೇಳಿದ್ದರು. ಈಗ ಅದನ್ನು ನನ್ನ ಮೇಲೆಯೇ ಹಾಕಿಕೊಂಡಿದ್ದೇನೆ. ಕರ್ನಾಟಕದ ಪ್ರತಿನಿಧಿಯಾಗಿ ಶಾಸಕರು ಏನು ಹೇಳುತ್ತಾರೊ ಅದನ್ನು ಮಾಡಿದ್ದೇನೆ. ಎಲ್ಲ ಪಕ್ಷದವರು ಸೇರಿ ಟಿಕೆಟ್ಗಾಗಿ ಬೇಡಿಕೆ ಇಟ್ದಿದ್ದರಲ್ಲವೇ? ಜೆಡಿಎಸ್ನವರಿಗೆ ಬೇಡವಾದರೆ, ತಮ್ಮ ಪಕ್ಷದ ಶಾಸಕರಿಗೆ ಟಿಕೆಟ್ ಬೇಡ ಎಂದು ವಾಪಸ್ ಕೊಡಲಿ’ ಎಂದರು.

‘ಹೈಕಮಾಂಡ್ ನಿರ್ದೇಶನ ಪಾಲಿಸುವೆ’

‘ಪಕ್ಷದ ಹೈಕಮಾಂಡ್ ನಾಯಕರು ಏನಾದರೂ ನಿರ್ದೇಶನ ನೀಡಿದರೆ ನಾನು ಅದನ್ನು ಪಾಲಿಸುವೆ. ತಮಿಳುನಾಡು ರಾಜಕೀಯ ವಿಚಾರ ನನಗೆ ಗೊತ್ತಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ‘ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬುದು ಸುಳ್ಳು. ಪಕ್ಷದ ನಾಯಕರ ನಿರ್ದೇಶನದಂತೆ ನಾನು ತಮಿಳುನಾಡಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮತ್ತು ಪ್ರಚಾರಕ್ಕೆ ಹೋಗಿದ್ದೆ. ಅದಾದ ನಂತರ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.