ಬೆಂಗಳೂರು: ‘ಆ ಹುಡುಗನಿಗೆ (ನಿಖಿಲ್ ಕುಮಾರಸ್ವಾಮಿ) ನಾನು ಉತ್ತರ ಕೊಡುವುದಿಲ್ಲ. ಆತನಿಗೆ ಉತ್ತರ ಕೊಡಲು ಸ್ಥಳೀಯ ನಾಯಕರಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘136 ಜನ ಶಾಸಕರಿದ್ದರೂ ಏನು ಹರಿದಿದ್ದೀರಿ’ ಎಂದು ಶಿವಕುಮಾರ್ ಅವರನ್ನು ಉದ್ದೇಶಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಗಿ ಮಂಗಳವಾರ ಪ್ರಶ್ನಿಸಿದ್ದರು.

ಈ ಬಗ್ಗೆ ಸುದ್ದಿಗಾರರು ಕೇಳಿದಾಗ ಗರಂ ಆದ ಶಿವಕುಮಾರ್, ‘ಅವರ ಸ್ಥಾನಮಾನ ಏನೆಂದು ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರಾದ ಮೇಲೆ ಉತ್ತರ ನೀಡಬಹುದು’ ಎಂದರು.

‘ರಾಜ್ಯಸಭಾ ಸದಸ್ಯ ಆಗಬೇಕಲ್ಲವೇ?’: ‘ನರೇಂದ್ರ ಮೋದಿ ಗೆದ್ದರೆ ದೇಶ ಬಿಡುತ್ತೇನೆಂದು ಈ ಹಿಂದೆ ದೇವೇಗೌಡರು ಹೇಳಿದ್ದರು. ಆಗ ನರೇಂದ್ರ ಮೋದಿಯವರು, ‘ಬೇಡ, ನಮ್ಮ ಮನೆಯಲ್ಲೇ ಜಾಗ ಕೊಡುತ್ತೇನೆ’ ಎಂದು ಅವರನ್ನು ಕರೆದಿದ್ದರು. ದೇವೇಗೌಡರ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಸಮಯಕ್ಕೆ ತಕ್ಕಂತೆ ಅವರು ಬದಲಾಗುತ್ತಾರೆ. ಈಗ ರಾಜ್ಯಸಭಾ ಸದಸ್ಯರಾಗಬೇಕಲ್ಲವೇ?’ ಎಂದು ದೇವೇಗೌಡರ ನಡೆಯನ್ನೂ ಶಿವಕುಮಾರ್ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.