ಬೆಂಗಳೂರು: ದೇಶದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿದ್ದ ಶಿವಕುಮಾರ್, ಈಗ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ವೇಳೆಗೆ ₹1,413 ಕೋಟಿ ಮೌಲ್ಯದಷ್ಟು ಆಸ್ತಿಯನ್ನು ಶಿವಕುಮಾರ್ ಘೋಷಿಸಿಕೊಂಡಿದ್ದರು. ಇದು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಅತಿ ಹೆಚ್ಚು ಆಸ್ತಿ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಈವರೆಗೆ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ (₹931 ಕೋಟಿ ಒಟ್ಟು ಆಸ್ತಿ) ಎನಿಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಎರಡನೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ (₹648 ಕೋಟಿ ಒಟ್ಟು ಆಸ್ತಿ) ಸ್ಥಾನದಲ್ಲಿದ್ದರು. ಈಗ ಚಂದ್ರಬಾಬು ನಾಯ್ಡು ಅವರನ್ನು ಎರಡನೇ ಮತ್ತು ವಿಜಯ್ ಅವರನ್ನು ಮೂರನೇ ಸ್ಥಾನಕ್ಕೆ ಸರಿಸಿ, ಮೊದಲ ಸ್ಥಾನಕ್ಕೆ ಶಿವಕುಮಾರ್ ಬಂದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಪೆಮಾ ಖಂಡು ₹332 ಕೋಟಿಯಷ್ಟು ಆಸ್ತಿ ಘೋಷಿಸಿಕೊಂಡಿದ್ದು, ಶ್ರೀಮಂತ ಮುಖ್ಯಮಂತ್ರಿಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ದೇಶದ ಮೊದಲ ಮೂವರು ಶ್ರೀಮಂತ ಮುಖ್ಯಮಂತ್ರಿಗಳು ದಕ್ಷಿಣ ಭಾರತದವರೇ ಆಗಿದ್ದಾರೆ.

2024ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಶಾಸಕ ಪರಾಗ್ ಶಾ ತಮ್ಮಲ್ಲಿ ₹3,383 ಕೋಟಿ ಆಸ್ತಿ ಎಂದು ಘೋಷಿಸಿಕೊಂಡಿದ್ದು, ಈಗ ದೇಶದ ಅತ್ಯಂತ ಶ್ರೀಮಂತ ಶಾಸಕ ಎನಿಸಿದ್ದಾರೆ. ಪರಾಗ್ ಶಾ ಆಯ್ಕೆಗೂ ಮುನ್ನ ಶಿವಕುಮಾರ್ ಅವರು ಆ ಸ್ಥಾನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.