ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.

ದೇಶದ ಸಿರಿವಂತ ಶಾಸಕರ ಕುರಿತು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಕಳೆದ ವರ್ಷ (2025ರಲ್ಲಿ) ವರದಿ ಬಿಡುಗಡೆ ಮಾಡಿತ್ತು.

ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ತಯಾರಿಸಲಾದ ವರದಿಯಲ್ಲಿನ ಮಾಹಿತಿ ಪ್ರಕಾರ, ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮಹಾರಾಷ್ಟ್ರದ ಘಾಟ್ಕೋಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪರಾಗ್ ಶಾ ಅಗ್ರಸ್ಥಾನದಲ್ಲಿದ್ದಾರೆ. ಅವರು 2024ರ ಚುನಾವಣೆಗೂ ಮುನ್ನ ಬರೋಬ್ಬರಿ ₹ 3,383 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು.
.DK Shivakumar Profile: ಛಲದೋಳ್ ಶಿವಕುಮಾರ.ಕಾಂಗ್ರೆಸ್ 'ಆಪತ್ಬಾಂಧವ', 'ಬಂಡೆ', 'ಟ್ರಬಲ್ ಶೂಟರ್' ಎಂದೇ ಚಿರಪರಿಚಿತ ಡಿಕೆಶಿ.
ರಾಮನಗರ ಜಿಲ್ಲೆಯ ಕನಕಪುರವನ್ನು ಪ್ರತಿನಿಧಿಸುವ ಡಿ.ಕೆ. ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದು, ತಮ್ಮ ಬಳಿ ₹ 1,413 ಕೋಟಿ ಮೊತ್ತದ ಆಸ್ತಿ ಇದೆ ಎಂದು 2023ರ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಮಾಣಪತ್ರ ಸಲ್ಲಿಸಿದ್ದರು. ಕರ್ನಾಟಕದವರೇ ಆದ ಕೆ.ಎಚ್. ಪುಟ್ಟಸ್ವಾಮಿ ಗೌಡ (ಗೌರಿಬಿದನೂರು ಕ್ಷೇತ್ರ – ₹ 1,267 ಕೋಟಿ), ಪ್ರಿಯಾ ಕೃಷ್ಣ (ಗೋವಿಂದರಾಜನಗರ ಕ್ಷೇತ್ರ – ₹ 1,267 ಕೋಟಿ) ನಂತರದ ಸ್ಥಾನಗಳಲ್ಲಿ ಇದ್ದಾರೆ.

ಮೂವರು ಸಿರಿವಂತರೂ ದಕ್ಷಿಣದವರೇ!
2025ರ ಎಡಿಆರ್ ವರದಿ ಪ್ರಕಾರ, ಡಿ.ಕೆ.ಶಿವಕುಮಾರ್ ಅವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಅವರ ಬಳಿ ಇರುವ ಒಟ್ಟು ಆಸ್ತಿಯಲ್ಲಿ ₹ 1,140 ಕೋಟಿ ಸ್ಥಿರಾಸ್ತಿಯಾಗಿದ್ದು, ಉಳಿದ ₹ 273 ಕೋಟಿ ಮೌಲ್ಯದ ಚರಾಸ್ತಿ ಸೇರಿವೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿರುವ ಡಿಕೆಶಿಗೆ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ರಾಜಭವನದಲ್ಲಿ ಜೂನ್ 3ರಂದು ಪ್ರಮಾಣವಚನ ಸಮಾರಂಭ ನಡೆಯಲಿದೆ.

ಆಂಧ್ರಪ್ರದೇಶದ ಎನ್. ಚಂದ್ರಬಾಬು ನಾಯ್ಡು ಅವರು ಶ್ರೀಮಂತ ಮುಖ್ಯಮಂತ್ರಿಗಳ ಸಾಲಿನಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. 2024ರ ವಿಧಾನಸಭೆ ಚುನಾವಣೆಗೂ ಮುನ್ನ ಅವರು ₹ 931 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಅವರನ್ನು ಡಿಕೆಶಿ ಹಿಂದಿಕ್ಕಲಿದ್ದಾರೆ.

₹ 648 ಮೊತ್ತದ ಆಸ್ತಿ ಹೊಂದಿರುವ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂವರೂ ದಕ್ಷಿಣ ಭಾರತದವರೇ ಎಂಬುದು ವಿಶೇಷ.
.ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಜೂನ್ 3ಕ್ಕೆ: ಕಾಂಗ್ರೆಸ್ ಅಧಿಕೃತ ಘೋಷಣೆ.ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ: ಡಿ.ಕೆ. ಶಿವಕುಮಾರ್ ಯಶೋಗಾಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.