ಬೆಂಗಳೂರು: ‘ಇ ಖಾತಾ ಮಾಡಿಕೊಡಲು ಲಂಚ ಕೇಳಿದವರ ಪಟ್ಟಿ ನೀಡಿದರೆ ಅಮಾನತು ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಇ–ಖಾತಾ ಮಾಡಿಕೊಡಲು ಲಂಚ ತೆಗೆದುಕೊಂಡು, ಲೂಟಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಆಗ ಪ್ರತಿಕ್ರಿಯಿಸಿದ ಶಿವಕುಮಾರ್, ‘ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮನೆ ಬಾಗಿಲಿಗೆ ಖಾತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೇ ಉತ್ತಮ ಯೋಜನೆ ಎಂದು ಪ್ರಶಸ್ತಿ ನೀಡಿದೆ. ₹ 10 ಸಾವಿರ ಲಂಚ ಕೇಳಿದವರು ಯಾರು ಎಂದು ಪಟ್ಟಿ ಕೊಟ್ಟರೆ ಅಮಾನತು ಮಾಡುತ್ತೇವೆ’ ಎಂದರು.

‘ಬೆಂಗಳೂರು ನಗರದಲ್ಲಿ 10 ಲಕ್ಷ ಖಾತೆ ವಿತರಣೆ ಮಾಡಿದ್ದೇವೆ. ಕಂದಾಯ ಇಲಾಖೆಯಿಂದ 1.11 ಕೋಟಿ ಖಾತೆ ವಿತರಿಸಲಾಗಿದೆ. ಕೆಲವೊಂದು ಸಮಯದಲ್ಲಿ ತಾಂತ್ರಿಕ ತೊಂದರೆ ಆಗಿದೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಪರಿಹಾರ ನೀಡಿ, ಸದನದಲ್ಲಿಯೇ ಈ ಬಗ್ಗೆ ತಿಳಿಸುತ್ತೇನೆ’ ಎಂದರು.

‘ಹಸಿರು ವಲಯ, ವಂಚನೆ ಪ್ರಕರಣ, ಸರ್ಕಾರಿ ಭೂಮಿ ಮುಂತಾದ ಪ್ರಕರಣಗಳಲ್ಲಿ ಇ– ಖಾತಾ ನೀಡಲು ತೊಂದರೆಯಾಗುತ್ತಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.