ದೊಡ್ಡಬಳ್ಳಾಪುರ: ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಸಮೀಪ ಐದು ದಿನಗಳ ಹಿಂದೆ ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರ ದೇವನಹಳ್ಳಿಯ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕಿಯದ್ದು ಎಂದು ಪತ್ತೆಹಚ್ಚಲಾಗಿದೆ.

ಮೃತರನ್ನು ಸರೋಜಾ(40) ಅವರದ್ದು ಎಂದು ಗುರುತಿಸಲಾಗಿದೆ.

ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಯಲಹಂಕ ತಾಲ್ಲೂಕಿನ ಮಾರಸಂದ್ರ ನಿವಾಸಿ ರಾಮಾಂಜಿನಪ್ಪ ಅವರೊಂದಿಗೆ ಸರೋಜಾ ಅವರಿಗೆ ವಿವಾಹೇತರ ಸಂಬಂಧ ಇತ್ತು.

ಮೇ 2ರಂದು ಗೆಳೆಯ ರಾಮಾಂಜಿನಪ್ಪ ಸರೋಜಾ ಅವರನ್ನು ಕಾರಿನಲ್ಲಿ ಕರೆದೊಯ್ದು ಮದುವೆಗೆ ಪೀಡಿಸಿದ್ದ. ಒಪ್ಪದ ಸರೋಜಾಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಮಾರನೇ ದಿನ ಬಿಡದಿ ಬಳಿ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಚಂದ್ರಕಾಂತ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇವನಹಳ್ಳಿಯಲ್ಲಿ ವಾಸವಾಗಿದ್ದ ಸರೋಜಾ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ.

ರಾಮಾಂಜಿನಪ್ಪ ಅವರಿಗೂ ಮದುವೆಯಾಗಿ, ಒಬ್ಬ ಮಗಳಿದ್ದಾಳೆ. ದಂಪತಿಯ ನಡುವೆ ಹೊಂದಾಣಿಕೆ ಇರಲಿಲ್ಲ. ರಾಮಾಂಜಿನಪ್ಪ, ಪತ್ನಿಯಿಂದ ಪ್ರತ್ಯೇಕವಾಗಿದ್ದರು. ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಸರೋಜಾ ಅವರೊಂದಿಗೆ ಅವರು ಗೆಳೆತನ ಬೆಳೆಸಿದ್ದರು. ಮುಂದೆ ಇದು ಇಬ್ಬರ ಮಧ್ಯೆ ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಹುಷಾರಿಲ್ಲ, ಆಸ್ಪತ್ರೆಗೆ ಹೋಗುವುದಾಗಿ ಗಂಡನಿಗೆ ಹೇಳಿದ ಸರೋಜಾ ಮೇ 2ರಂದು ಬಸ್ ಹತ್ತಿದ್ದರು. ಮಾರ್ಗ ಮಧ್ಯ ಬಸ್ ಇಳಿದು ರಾಮಾಂಜಿನಪ್ಪ ಅವರೊಂದಿಗೆ ದೊಡ್ಡಬಳ್ಳಾಪುರದತ್ತ ಪ್ರಯಾಣ ಬೆಳೆಸಿದ್ದರು.

ಕಾರಿನಲ್ಲಿ ಹೊರಟ ಇಬ್ಬರೂ ಮಾರಸಂದ್ರ ಮಾರ್ಗವಾಗಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಜಿಂಕೆಬಚ್ಚನಹಳ್ಳಿಯ ನಿರ್ಜನ ಪ್ರದೇಶಕ್ಕೆ ಬಂದಿದ್ದಾರೆ. ಮದುವೆ ಸಂಬಂಧ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಸರೋಜಾ ವಿವಾಹಕ್ಕೆ ನಿರಾಕರಿಸಿದ್ದರಿಂದ ಕಾರಿಗೆ ಬೆಂಕಿ ಹಚ್ಚಿದ ರಾಮಾಂಜಿನಪ್ಪ ಪರಾರಿಯಾಗಿದ್ದ.

ಈ ವೇಳೆ ರಾಮಾಂಜಿನಪ್ಪ ಅವರ ಬಟ್ಟೆಗೂ ಬೆಂಕಿ ತಗುಲಿತ್ತು. ದೂರದ ನೀಲಗಿರಿ ತೋಪಿನಲ್ಲಿ ಶರ್ಟ್, ಮೊಬೈಲ್ ಬಿಟ್ಟು ಪರಾರಿಯಾಗಿದ್ದರು. ಇತ್ತ ಕಾರಿನೊಂದಿಗೆ ಸರೋಜಾ ಸುಟ್ಟು ಕರಕಲಾಗಿದ್ದರು.

ರಾಮಾಂಜಿನಪ್ಪ ತಂದ ಕಾರು ಅವರ ಪಕ್ಕದ ಮನೆಯ ಸುರೇಶ್ ಎಂಬುವರಿಗೆ ಸೇರಿದ್ದು. ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಹೋಗಬೇಕು ಎಂದು ನೆಪ ಹೇಳಿ ಕಾರು ಪಡೆದುಕೊಂಡಿದ್ದರು. ಕಾರಿಗೆ ಬೆಂಕಿ ಬಿದ್ದ ತಕ್ಷಣವೇ ಅದರ ಮಾಲೀಕ ಸುರೇಶ್ ಮೊಬೈಲ್ಗೆ ‘ಕಾರಿಗೆ ಬೆಂಕಿ ತಗುಲಿದೆ’ ಎಂದು ಲೊಕೇಶನ್ ಸಹಿತ ಜಿಪಿಎಸ್ ಸಂದೇಶ ಹೋಗಿದೆ.

ಸ್ಥಳಕ್ಕೆ ಬಂದ ಸುರೇಶ್ ಪರಿಶೀಲನೆ ಮಾಡಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು, ಕಾರಿನ ಒಳಗಡೆ ಮಹಿಳೆ ಶವ ಪತ್ತೆಯಾಗಿತ್ತು. ರಾಮಾಂಜಿನಪ್ಪ ತನ್ನ ಕಾರು ದುರುಪಯೋಗಪಡಿಸಿಕೊಂಡ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಪೊಲೀಸರು ರಾಮಾಂಜಿನಪ್ಪ ಹುಡುಕಾಟ ಆರಂಭಿಸಿದ್ದರು. ಅದೇ ದಿನ ತಡರಾತ್ರಿ ಆತ ಬಿಡದಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಸ್ಥಳದಲ್ಲಿ ಮತದಾರರ ಗುರುತಿನ ಕಾರ್ಡ್ ಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರು ದೊಡ್ಡಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಎಸ್.ಪಿ ಚಂದ್ರಕಾಂತ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-4-414673041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.