ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಿಂದ ರೈಲು, ಬಸ್‌ನಲ್ಲಿ ಬರುತ್ತಿದ್ದ ಡ್ರಗ್ಸ್

Last Updated 20 ಅಕ್ಟೋಬರ್ 2022, 21:14 IST
ಅಕ್ಷರ ಗಾತ್ರ

ಬೆಂಗಳೂರು: ಅಸ್ಸಾಂನಿಂದ ಗಾಂಜಾ ತಂದು ಮಾರುತ್ತಿದ್ದ ಆರೋಪದಡಿ ಡೇವಿಡ್ (25) ಎಂಬುವವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ರೈಲು ಹಾಗೂ ಬಸ್ ಮೂಲಕ ಗಾಂಜಾ ಪೊಟ್ಟಣ ತರಿಸುತ್ತಿದ್ದನ್ನು ಪತ್ತೆ ಮಾಡಿದ್ದಾರೆ.

‘ಈಶಾನ್ಯ ರಾಜ್ಯದ ಆರೋಪಿ ಡೇವಿಡ್, ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಬೀದಿಬದಿ ಫಾಸ್ಟ್‌ಫುಡ್‌ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಇದರ ಜೊತೆಗೆ ಗಾಂಜಾ ಮಾರಲಾರಂಭಿಸಿದ್ದ. ಹೆಚ್ಚು ಹಣ ಬರುತ್ತಿದ್ದಂತೆ ಬೀದಿಬದಿ ವ್ಯಾಪಾರ ಬಿಟ್ಟು, ಗಾಂಜಾ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.

’ಅಸ್ಸಾಂ ಹಾಗೂ ಸುತ್ತಮುತ್ತ ಗಾಂಜಾ ಬೆಳೆಯಲಾಗುತ್ತದೆ. ಅದನ್ನು ಖರೀದಿಸುವ ಪೆಡ್ಲರ್‌ಗಳು, ರೈಲು ಹಾಗೂ ಬಸ್‌ ಮೂಲಕ ಅಕ್ರಮ ಸಾಗಣೆ ಮಾಡುತ್ತಾರೆ. ಅಂಥ ಪೆಡ್ಲರ್ ಜೊತೆ ಒಡನಾಟವಿಟ್ಟುಕೊಂಡಿದ್ದ ಡೇವಿಡ್, ಅವರ ಮೂಲಕವೇ ಪೊಟ್ಟಣದಲ್ಲಿ ಬೆಂಗಳೂರಿಗೆ ಗಾಂಜಾ ತರಿಸುತ್ತಿದ್ದ.’

‘ರೈಲಿನಲ್ಲಿ ಬರುತ್ತಿದ್ದ ಗಾಂಜಾ ಪೊಟ್ಟಣವನ್ನು ಆರೋಪಿ ಪಡೆದುಕೊಳ್ಳುತ್ತಿದ್ದ. ನಂತರ, ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಮಾರುತ್ತಿದ್ದ. ಈತನ ಕೃತ್ಯಕ್ಕೆ ಹಲವರು ಸಹಕರಿಸುತ್ತಿದ್ದ ಮಾಹಿತಿ ಇದ್ದು, ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಿದೆ‘ ಎಂದು ತಿಳಿಸಿದರು.

’ಎನ್‌ಡಿಪಿಎಸ್ ಪ್ರಕರಣದಲ್ಲಿ ಒಂದು ಬಾರಿ ಜೈಲಿಗೆ ಹೋಗಿದ್ದ ಡೇವಿಡ್, ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿದ್ದ. ಈತನ ಕೃತ್ಯವನ್ನು ಪತ್ತೆ ಮಾಡಿ ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT