ಬೆಂಗಳೂರು: ‘ರಾಜ್ಯದಲ್ಲಿ ಮೂರೂ ಪಕ್ಷಗಳಿಂದ ಜನ ನೊಂದಿದ್ದಾರೆ. ಈ ನೊಂದಿರುವವರು ಒಂದು ದಿನ ಗುಂಪಾದರೆ ಬದಲಾವಣೆ ಕೇಳುತ್ತಾರೆ. ತಮಿಳುನಾಡಿನಂತೆ ಒಂದು ದಿನ ಕರ್ನಾಟಕದಲ್ಲೂ ಆಗುತ್ತದೆ’ ಎಂದು ನಟ ದುನಿಯಾ ವಿಜಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ನಟ ವಿಜಯ್ ಗೆಲುವಿನ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಸ್ಟಾರ್ ಶಕ್ತಿಯೊಂದು ರಾಜಕೀಯ ಶಕ್ತಿಯಾಗಿ ಬೆಳೆಯುವುದು ಕಷ್ಟವಿದೆ. ತಮಿಳುನಾಡಿನಲ್ಲಿ ಬದಲಾವಣೆ ಬೇಕು ಎಂಬ ನಿರ್ಧಾರ ಮಾಡಬೇಕಾಗಿ ಬಂದಿತ್ತು. ನನಗೊಬ್ಬ ಹೊಸ ನಾಯಕ ಬೇಕು ಎಂಬ ಕ್ರಾಂತಿ ಅಲ್ಲಿ ಕಂಡಿದೆ’ ಎಂದರು.

‘ವೈಯಕ್ತಿಕವಾಗಿ ಕರ್ನಾಟಕದಲ್ಲೂ ಬದಲಾವಣೆ ಬೇಕು ಎಂದೆನಿಸಿದೆ. ಮೂರೂ ಪಕ್ಷಗಳು ಇಲ್ಲಿಯವರೆಗೆ ಮಾಡಿದ ಕೆಲಸಗಳಲ್ಲಿ ನನಗೆ ಕೆಲವು ಅಸಮಾಧಾನಗಳಿವೆ. ಇಂತಹವರಿಗೆ ಇರುವ ಒಂದೇ ದಾರಿ ಮತದಾನ. ಗುಡ್ಡಗಾಡು ಪ್ರದೇಶದಲ್ಲಿರುವ ವ್ಯಕ್ತಿಯಿಂದ ಹಿಡಿದು ಬೆಂಗಳೂರಿನಲ್ಲಿ ರುವವರಿಗೂ ಸಿಗಬೇಕಾದ ಎಲ್ಲಾ ಸೌಲಭ್ಯ ಸಿಗಬೇಕು. ಬದಲಾವಣೆ ಬೇಕು ಎಂದಾಗ ಜೆನ್–ಜಿಗಳೇ ಮುಖ್ಯ ಆಧಾರಸ್ತಂಭ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-4-84448275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.