ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೈಕೋರ್ಟ್‌ಗೆ ಅ.3ರಿಂದ ದಸರಾ ರಜೆ

Published : 1 ಅಕ್ಟೋಬರ್ 2024, 15:30 IST
Last Updated : 1 ಅಕ್ಟೋಬರ್ 2024, 15:30 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಇದೇ 3ರಿಂದ 10ರವರೆಗೆ ದಸರಾ ರಜೆ ಇರಲಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ, 11ರಂದು ವಿಜಯದಶಮಿ, 12 ಎರಡನೇ ಶನಿವಾರ, 13 ಭಾನುವಾರದ ರಜೆ ಇರುವುದರಿಂದ ಅಕ್ಟೋಬರ್ 14ರಿಂದ ಕೋರ್ಟ್‌ ಕಲಾಪಗಳು ಪುನರಾರಂಭ ಆಗಲಿವೆ.

ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಈ ದಸರಾ ರಜೆ ಅನ್ವಯ ಆಗಲಿದೆ. ರಜೆ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗಾಗಿ ಇದೇ 4 ಹಾಗೂ 9ರಂದು ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ಹಾಗೂ ಎರಡು ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT