ಬೆಂಗಳೂರು: ‘ಇ-ಖಾತಾ ಮಾಡಿಸುವುದು ಜನಸಾಮಾನ್ಯರಿಗೆ ದುಸ್ತರವಾಗಿದೆ. ಆ ಹೆಸರಿನಲ್ಲಿ ಮಾಫಿಯಾ ಸೃಷ್ಟಿಯಾಗಿದ್ದು, ಪಾಲಿಕೆ ಅಧಿಕಾರಿಗಳು ದಂಧೆಗೆ ಇಳಿದಿದ್ದಾರೆ. ತೆರಿಗೆ ಪಾವತಿಸಿದರೂ ಮನೆ ಹರಾಜು ಹಾಕಲು ನೋಟಿಸ್ ನೀಡುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.

ದಾಖಲೆಗಳು, ರಸೀದಿಗಳ ಕಟ್ಟು ಹಿಡಿದು ಉದಾಹರಣೆಗಳ ಸಹಿತ ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ನಗರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಪ್ರಮುಖವಾಗಿ ಇ-ಖಾತಾ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ದಂಧೆ, ರಸ್ತೆ ಗುಂಡಿಗಳ ಸಮಸ್ಯೆ, ಭ್ರಷ್ಟಾಚಾರ, ಮೂಲಸೌಕರ್ಯಗಳ ಕೊರತೆ, ಬಿಬಿಎಂಪಿ ದಿವಾಳಿಯಾಗಿದೆ ಎಂದು ಆರೋಪಿಸುತ್ತಲೇ ನಗರದ ಸ್ಥಿತಿಯನ್ನು ಎಳೆಎಳೆಯಾಗಿ ವಿವರಿಸಿದರು.

‘ನಮ್ಮ ಸರ್ಕಾರದಲ್ಲಿ ಲಂಚ ಪಡೆದ ಒಬ್ಬರನ್ನು ತೋರಿಸಿ’ ಎಂದು ಬೆಂಗಳೂರು ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ’ ಎಂದರು.

‘ಎಚ್ಬಿಆರ್ ಲೇಔಟ್ನಲ್ಲಿ ಬಿಡಿಎ ಹರಾಜಿನಲ್ಲಿ ಮೂಲೆ ನಿವೇಶನ ಪಡೆದಿದ್ದ ಮಾಲೀಕರೊಬ್ಬರು ಇ-ಖಾತಾ ಮಾಡಿಸಲು ಹೋದಾಗ, ಅಧಿಕಾರಿಗಳು ಅದನ್ನು ‘ಬಿ ಖಾತಾ’ ಎಂದು ವರ್ಗೀಕರಿಸಲು ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ₹15 ಸಾವಿರವನ್ನು ಅಧಿಕಾರಿಗಳು ‘ಫೋನ್ ಪೇ’ ಮೂಲಕ ಪಡೆದಿದ್ದಾರೆ. ಲಂಚ ಪಡೆದರೂ ಕೆಲಸ ಆಗದಿದ್ದಾಗ, ಹಣ ವಾಪಸ್ ಕೇಳಿದರೆ ಅಧಿಕಾರಿಗಳು ಮೊಂಡುತನ ಪ್ರದರ್ಶಿಸಿದ್ದಾರೆ. ಗ್ರಾಹಕರ ನ್ಯಾಯಾಲಯ ಮತ್ತು ಸಹಾಯವಾಣಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ದೇವನಹಳ್ಳಿ ಭಾಗದಲ್ಲೂ ಇ-ಖಾತಾ ಮಾಡಿಸಲು ₹50 ಸಾವಿರವರೆಗೆ ಲಂಚ ಪಡೆಯಲಾಗುತ್ತಿದೆ. ನಿವೃತ್ತ ಅಧಿಕಾರಿಯೊಬ್ಬರು ಖಾಸಗಿ ಕಚೇರಿ ತೆರೆದು ಈ ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

‘ಡಿ.ಕೆ. ಶಿವಕುಮಾರ್ ಅವರು ಘೋಷಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ನಗರದಲ್ಲಿ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ, ರಸ್ತೆ ಗುಂಡಿಗಳು ಜನರ ಪ್ರಾಣ ಹಿಂಡುತ್ತಿವೆ. ಉಪಮುಖ್ಯಮಂತ್ರಿ ನಗರ ಪ್ರದಕ್ಷಿಣೆ ಮಾಡಿದರೂ 15 ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಲಾಗಲಿಲ್ಲ. ನೆರೆಯ ರಾಜ್ಯದ ಮುಖ್ಯಮಂತ್ರಿ ಬೆಂಗಳೂರನ್ನು ಟೀಕಿಸುತ್ತಿದ್ದರೂ, ಸರ್ಕಾರ ಮೌನವಾಗಿದೆ. ಬೆಂಗಳೂರಿನ ಘನತೆ ಉಳಿಸಲು ಸರ್ಕಾರಕ್ಕೆ ಧೈರ್ಯವಿಲ್ಲವೇ ಎಂದು ಅಶೋಕ ಪ್ರಶ್ನಿಸಿದರು.

‘ತೆರಿಗೆ ಪಾವತಿಸಿದರೂ ಮನೆ ಹರಾಜು’

‘ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿಸುವ ಪ್ರಾಮಾಣಿಕ ನಾಗರಿಕರಿಗೂ ರಕ್ಷಣೆ ಇಲ್ಲದಂತಾಗಿದೆ. ಎಚ್ಬಿಆರ್ ಲೇಔಟ್ನಲ್ಲಿ ಮಗನ ಹೆಸರಿಗೆ ಖಾತೆ ವರ್ಗಾವಣೆಯಾಗಿ, ಮಗ ಸಕಾಲದಲ್ಲಿ ತೆರಿಗೆ ಪಾವತಿಸುತ್ತಿದ್ದರೂ, ಅಧಿಕಾರಿಗಳು ಹಳೆಯ ದಾಖಲೆಗಳ ಆಧಾರದಲ್ಲಿ ತಂದೆಯ ಹೆಸರಿಗೆ ಹರಾಜು ನೋಟಿಸ್ ನೀಡಿದ್ದಾರೆ. ಎರಡು ವರ್ಷ ತೆರಿಗೆ ಬಾಕಿ ಇದೆ ಎಂಬ ನೆಪವೊಡ್ಡಿ ಮನೆಗಳನ್ನು ಹರಾಜು ಹಾಕಲು ಮುಂದಾಗುತ್ತಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಇದು ಕೇವಲ ಒಂದು ಲೇಔಟ್ನ ಕಥೆಯಲ್ಲ, ನಗರದಾದ್ಯಂತ ಇಂತಹ ಮಾಫಿಯಾ ಕೆಲಸ ಮಾಡುತ್ತಿದೆ’ ಎಂದು ಅಶೋಕ ಕಿಡಿಕಾರಿದರು.

‘ಒ.ಸಿ ಇಲ್ಲದೆ ಪಾಳು ಬಿದ್ದಿವೆ 4 ಲಕ್ಷ ಕಟ್ಟಡಗಳು’: ನಗರದಲ್ಲಿ ಸ್ವಾಧೀನಾನುಭವ ಪತ್ರ (ಒ.ಸಿ) ನೀಡದೆ ಸಮಸ್ಯೆಯಾಗಿದೆ. 4 ಲಕ್ಷ ಕಟ್ಟಡಗಳು ಬಳಕೆಯಾಗದೆ ಪಾಳು ಬಿದ್ದಿವೆ. ಒ.ಸಿ ನೀಡಲು ಸಾಧ್ಯ ಇಲ್ಲ ಎಂದಾದರೆ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಏಕೆ’ ಎಂದು ಅವರು ಪ್ರಶ್ನಿಸಿದರು.

‘ಜಕ್ಕೂರಿನ ವೈಮಾನಿಕ ಶಾಲೆ ಮುಚ್ಚುವ ಹುನ್ನಾರ’: ‘ಜಕ್ಕೂರಿನ ವೈಮಾನಿಕ ಶಾಲೆಯ ಜಾಗದ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು ಬಿದ್ದಿದೆ. ಮೈಸೂರು ಮಹಾರಾಜರು ನೀಡಿದ ಜಾಗದಲ್ಲಿರುವ ಈ ಶಾಲೆಯನ್ನು ಸ್ಥಳಾಂತರಿಸಿ, ಅಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಸಂಚು ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಕೈಬಿಟ್ಟಿದ್ದ ಕ್ಲಬ್ ನಿರ್ಮಾಣದ ಯೋಜನೆಯನ್ನು ಈಗ ಮತ್ತೆ ಜೀವಂತಗೊಳಿಸಲಾಗುತ್ತಿದೆ’ ಎಂದು ಅಶೋಕ ಆರೋಪಿಸಿದರು.

ಸಚಿವ ಕೆ.ಜೆ. ಜಾರ್ಜ್ ಮಧ್ಯಪ್ರವೇಶಿಸಿ, ‘ವೈಮಾನಿಕ ಶಾಲೆಯ ಜಾಗದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸುವ ಬಗ್ಗೆ ಕಾರಣಗಳ ಸಹಿತ ಮುಖ್ಯಮಂತ್ರಿಗೆ ನಾನು ಪತ್ರ ಬರೆದಿದ್ದೇನೆ. ಈ ವಿಷಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದ್ದು ನಿಜ. ಆದರೆ, ಆ ನಿರ್ಣಯ ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.