ಬೆಂಗಳೂರು: ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ‘ಸಮಗ್ರ ಪ್ರಗತಿ ಪತ್ರ’ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಆದ್ಯತೆ ನೀಡಲು ಮುಂದಾಗಿರುವ ಇಲಾಖೆ, ಅಂಕಪಟ್ಟಿಗಷ್ಟೇ ಮಕ್ಕಳ ಪ್ರಗತಿ ಸೀಮಿತಗೊಳಿಸುವ ಬದಲು ಅವರ ಸರ್ವತೋಮುಖ ಬೆಳವಣಿಗೆಯನ್ನು ಬಿಂಬಿಸಲು ‘ಸಮಗ್ರ ಪ್ರಗತಿ ಪತ್ರ’ ಯೋಜನೆ ರೂಪಿಸಿದೆ. 2026–27ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲಾಗುತ್ತಿದೆ.

ಎಲ್ಕೆಜಿ, ಯುಕೆಜಿಯಿಂದ ಆರಂಭಗೊಂಡು ಪದವಿಪೂರ್ವ ಕಾಲೇಜಿನವರೆಗಿನ ವಿದ್ಯಾರ್ಥಿಗಳ ಕಲಿಕೆ, ಆಸಕ್ತಿ, ಓದು, ಬರಹದ ಮಟ್ಟದ ಬಗ್ಗೆ ನಿಗಾವಹಿಸುವ ಶಿಕ್ಷಕರು ಅವರ ಪ್ರಗತಿ ಪತ್ರಗಳನ್ನು ನೀಡಲಿದ್ದಾರೆ. ಡಿಜಿಟಲ್ ರೂಪದ ಪ್ರಗತಿ ಪತ್ರಗಳನ್ನು ಪೋಷಕರ ಮೊಬೈಲ್ ಫೋನ್ ಅಥವಾ ಇಮೇಲ್ಗೆ ನೇರವಾಗಿ ರವಾನಿಸಲಾಗುತ್ತದೆ.

ಶಾಲೆಗಳಲ್ಲಿ ನಡೆಸಿದ ಪ್ರತಿ ತಿಂಗಳ ಕಿರು ಪರೀಕ್ಷೆಯ ಅಂಕಗಳ ಜತೆಗೆ ವಿದ್ಯಾರ್ಥಿಗಳ ನಡವಳಿಕೆ, ಹಾಜರಾತಿ, ಪಠ್ಯೇತರ ಚಟುವಟಿಕೆಯ ಪ್ರಗತಿ, ಶಿಕ್ಷಕರ ಅಭಿಪ್ರಾಯ ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಯ ಮಾಹಿತಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಿದ್ಧಪಡಿಸಲಾಗುತ್ತದೆ. ಪೋಷಕರು ವಿನಂತಿಸಿದಾಗ ಅಥವಾ ವಿದ್ಯಾರ್ಥಿಯು ಬೇರೆ ಶಾಲೆಗೆ ಸೇರಿದಾಗ ಮಾತ್ರ ಭೌತಿಕ ಪ್ರತಿಗಳನ್ನು ಪಡೆಯಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.