ಬೆಂಗಳೂರು: ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಎಲ್ಲ ಎಲೆಕ್ಟ್ರಿಕ್ ವಾಹನಗಳಿಗೆ ಪರವಾನಗಿ ಪಡೆಯುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದ್ದು, ಎಲೆಕ್ಟ್ರಿಕ್ ಆಟೊ ಸಹಿತ ಎಲ್ಲ ಇವಿಗಳಿಗೆ ಯಾವುದೇ ಶುಲ್ಕ ಪಾವತಿಸದೇ ರಹದಾರಿ ಪಡೆಯಲು ಅವಕಾಶ ನೀಡಲಾಗಿದೆ.

ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ರಹದಾರಿ (ಪರ್ಮಿಟ್) ಪಡೆಯಬೇಕಾಗಿಲ್ಲ ಎಂದು ಹಿಂದೆ ವಿನಾಯಿತಿ ನೀಡಲಾಗಿತ್ತು. ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದಷ್ಟಿಯಿಂದ ಈ ವಾಹನಗಳಿಗೂ ರಹದಾರಿ ಅಗತ್ಯ ಎಂದು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಮೋಟಾರು ವಾಹನ ಕಾಯ್ದೆ 1988ರ ಕಲಂ 66(3) (ಎನ್) ಮತ್ತು ಅದೇ ಕಾಯ್ದೆಯ ಕಲಂ 96ರ ಅನ್ವಯಿಸಿ ವಿನಾಯಿತಿಯನ್ನು ಸಾರಿಗೆ ಇಲಾಖೆಯು ಹಿಂಪಡೆದಿದ್ದು, ಶುಲ್ಕ ರಹಿತವಾಗಿ ರಹದಾರಿ ಮಂಜೂರು ಮಾಡಲು ಆದೇಶ ನೀಡಲಾಗಿದೆ. ಈ ನಿಯಮ ಕಟ್ಟು ನಿಟ್ಟಾಗಿ ಜಾರಿಯಾಗಬೇಕಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಸ್.ಟಿ.ಯು ಮತ್ತು ಆಟೋರಿಕ್ಷಾ) ಕೆ.ಎಸ್. ಸೌಂದರ್ಯ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳು ಮುಕ್ತವಾಗಿ ಚಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಕಾನೂನು ಪಾಲನೆ ಆಗಬೇಕಿದ್ದರೆ ಅದಕ್ಕೊಂದು ನಿಯಮ ಇರಬೇಕು. ಅವಘಡ, ಅಪಹರಣ, ಅಪಘಾತ ಸಹಿತ ಯಾವುದೇ ತೊಂದರೆಗಳು ಉಂಟಾದಾಗ ಕಾನೂನು ಕ್ರಮಗಳನ್ನು ಕೈಗೊಳ್ಳಲು, ಪರಿಹಾರ ನೀಡಲು ಕೆಲವೊಂದು ಸೂತ್ರಗಳಿಗೆ ವಾಹನಗಳು ಒಳಪಡಬೇಕಾಗುತ್ತದೆ. ಸಾರ್ವಜನಿಕ ಸೇವೆಯ ವಾಹನಗಳು ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕಾಗಿರುತ್ತದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಇವಿಗಳಿಗೆ ಪರವಾನಗಿ ಬೇಕು ಎಂದು ಆದೇಶ ಹೊರಡಿಸಿದ್ದರೂ ಕೆಲವೊಂದು ಶೋರೂಂನವರು ರಹದಾರಿ ಬೇಕಿಲ್ಲ ಎಂದು ಇವಿ ಆಟೊ ಖರೀದಿದಾರರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆಟೊಗಳು ರಹದಾರಿ ಪಡೆಯುವುದು ಕಡ್ಡಾಯ’ ಎಂದು ತಿಳಿಸಿದ್ದಾರೆ.

7.56 ಲಕ್ಷ ವಾಹನಗಳು: ರಾಜ್ಯದಲ್ಲಿ 7.56 ಲಕ್ಷ ಎಲೆಕ್ಟ್ರಿಕ್ ವಾಹನಗಳಿವೆ. ಅದರಲ್ಲಿ 6.28 ಲಕ್ಷ ದ್ವಿಚಕ್ರ ವಾಹನಗಳಾಗಿವೆ. 54,889 ಖಾಸಗಿ ಬಳಕೆಯ ಕಾರುಗಳಿವೆ. ಕೃಷಿ ಬಳಕೆಯ ಟ್ಯ್ರಾಕ್ಟರ್ ಸಹಿತ ಒಟ್ಟು 6.84 ಲಕ್ಷ ವಾಹನಗಳು ಖಾಸಗಿ ಬಳಕೆಯದಾಗಿದ್ದು, ಇವುಗಳಿಗೆ ರಹದಾರಿ ಅಗತ್ಯ ಇಲ್ಲ.

ಟ್ರಕ್, ಲಾರಿ, ಬಸ್, ನಾಲ್ಕು ಚಕ್ರದ ವಾಹನಗಳು, ಮೂರು ಚಕ್ರದ ಗೂಡ್ಸ್ ವಾಹನಗಳು, ಮೋಟಾರು ಕ್ಯಾಬ್, ಮೋಟಾರು ಟ್ಯಾಕ್ಸಿ, ಲಕ್ಸುರಿ ಕ್ಯಾಬ್, ಆಟೊಗಳು, ಇತರ ವಾಹನಗಳು ಸೇರಿ 72,631 ವಾಹನಗಳು ಸಾರಿಗೆಗೆ ಬಳಕೆಯಾಗುತ್ತಿವೆ. ಈ ವಾಹನಗಳಿಗೆ ರಹದಾರಿ ಕಡ್ಡಾಯ ಮಾಡಲಾಗಿದೆ. ಚಾಲನಾ ಪರವಾನಗಿ (ಡಿಎಲ್) ಆಧಾರದಲ್ಲಿ ಪರ್ಮಿಟ್ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ನೋಂದಣಿಯಾಗಿರುವ ಮತ್ತು ಹೊಸದಾಗಿ ನೋಂದಣಿಯಾಗುವ ಆಟೊ ಸಹಿತ ಎಲ್ಲ ಇವಿ ಸಾರಿಗೆ ವಾಹನಗಳು ರಹದಾರಿ ಪಡೆಯುವುದು ಕಡ್ಡಾಯವಾಗಿದೆ.
–ಬಿ.ಪಿ. ಉಮಾಶಂಕರ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಆಯುಕ್ತ (ಆಡಳಿತ)

ಒಟ್ಟು ಎಲೆಕ್ಟ್ರಿಕ್ ಆಟೊಗಳಲ್ಲಿ ಅರ್ಧಕ್ಕಿಂತ ಹೆಚ್ಚಿಗೆ ಬೆಂಗಳೂರು ನಗರದಲ್ಲೇ ಇವೆ. ಈ ಆಟೊಗಳು ಕೂಡಲೇ ಪರ್ಮಿಟ್ ಪಡೆದುಕೊಳ್ಳಬೇಕು.
–ಕೆ.ಎಸ್. ಸೌಂದರ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಸ್.ಟಿ.ಯು ಮತ್ತು ಆಟೋರಿಕ್ಷಾ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.