ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ: ಬಿಜೆಪಿ ಆಕ್ರೋಶ

Published 11 ಸೆಪ್ಟೆಂಬರ್ 2023, 16:07 IST
Last Updated 11 ಸೆಪ್ಟೆಂಬರ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಹೋಬಳಿ ನಾರಮಾಕನಹಳ್ಳಿ ಗ್ರಾಮದ ರೈತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾರೆ ಎಂದು ಬಿಜೆಪಿ ರೈತರ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಈರಣ್ಣ ಕಡಾಡಿ ದೂರಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಬಂಧಿತ ರೈತರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ರೈತರ ವಿರುದ್ಧ ರಾಜಕೀಯ ದ್ವೇಷ ಮುಂದುವರಿದರೆ ಶ್ರೀನಿವಾಸಪುರ ಚಲೋ ನಡೆಸಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

ಹೋರಾಟದ ನೇತೃತ್ವ ವಹಿಸಿದ್ದ ಕೋಲಾರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರನ್ನೂ ಬಂಧಿಸಲಾಗಿದೆ. ಸಂಸದ ಎಸ್‌. ಮುನಿಸ್ವಾಮಿ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಭಯದ ವಾತಾವರಣ ಮೂಡಿಸಲು ಕಾನೂನಿನ ದುರುಪಯೋಗ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

3,850 ಎಕರೆ ಪ್ರದೇಶದಲ್ಲಿ ರೈತರು ಸಾಗುವಳಿ ಮಾಡಿ ಹೂಕೋಸು, ಮೆಣಸು, ಕ್ಯಾರೆಟ್‌ ಬೆಳೆದಿದ್ದರು. ಅಲ್ಲದೇ, ಮಾವಿನ ತೋಟವೂ ಇದೆ. ಸರ್ಕಾರದ ಅರಣ್ಯ ಇಲಾಖೆ ಅಧಿಕಾರಿಗಳು ಈಚೆಗೆ ಏಕಾಏಕಿ ನುಗ್ಗಿ ಜೆಸಿಬಿ ಮೂಲಕ ಬೆಳೆ ನಾಶ ಮಾಡಿದ್ದಾರೆ. ಅದಲ್ಲದೇ ಅಲ್ಲಿರುವ ರೈತರ ಮೇಲೆ ದೌರ್ಜನ್ಯ ಮಾಡಿ 150 ಜನರ ಮೇಲೆ ಎಫ್‌ಐಆರ್‌ ದಾಖಲಿಸಿ, 15 ಜನರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ತಂದಿಟ್ಟಿದ್ದಾರೆ ಎಂದರು.

ರೈತರು ಕಳೆದ 20– 30 ವರ್ಷಗಳಿಂದ ಅಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಈಗ ಬಂದು ಜಮೀನು ಇಲಾಖೆಯದ್ದು ಎಂದು ಹೇಳಿ ದೌರ್ಜನ್ಯ ಮಾಡಿದ್ದಾರೆ. ಜಮೀನು ಅರಣ್ಯ ಇಲಾಖೆಯದ್ದೇ ಆಗಿದ್ದರೆ, ಬೇಲಿ ಹಾಕಿ ಏಕೆ ರಕ್ಷಿಸಿಲ್ಲ? ಗ್ರಾಮದ ಪುರುಷರ ಬಂಧನದಿಂದ ಮಹಿಳೆಯರು ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT