ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತನೆಂದು ಹೀಗೆ ನಡೆದುಕೊಳ್ಳುತ್ತಿದ್ದಾರಾ: ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

Published 13 ಆಗಸ್ಟ್ 2024, 0:08 IST
Last Updated 13 ಆಗಸ್ಟ್ 2024, 0:08 IST
ಅಕ್ಷರ ಗಾತ್ರ

ಬೆಂಗಳೂರು: ‘ವಿರೋಧ ಪಕ್ಷದ ನಾಯಕನಿಗೆ ಒದಗಿಸಬೇಕಾದ ಸೌಲಭ್ಯ ನೀಡದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ನಾನು ದಲಿತ ಎನ್ನುವ ಕಾರಣಕ್ಕೆ ಹೀಗೆ ನಡೆದುಕೊಳ್ಳುತ್ತಿದ್ದಾರಾ’ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನನಗೆ ಸರ್ಕಾರಿ ಮನೆ ಕೊಟ್ಟಿಲ್ಲ. ಕೇವಲ ಒಬ್ಬ ಗನ್ ಮ್ಯಾನ್ ನೀಡಿದ್ದಾರೆ. ಬೆಂಗಾವಲು ಪಡೆ ನೀಡುವಂತೆ ಡಿಐಜಿಗೆ ಪತ್ರ ಬರೆದಿದ್ದೇನೆ. ಸಭೆ ಮಾಡಿ ಪರಿಶೀಲಿಸುವುದಾಗಿ ಅವರು ತಿಳಿಸಿದ್ದಾರೆ. ನನಗೆ ಗನ್ ಮ್ಯಾನ್, ಕಾರು ಯಾವುದೂ ಬೇಡ. ಕೊಟ್ಟಿರುವ ಒಬ್ಬ ಗನ್ ಮ್ಯಾನ್‌ನನ್ನೂ ವಾಪಸ್ ಕಳುಹಿಸುತ್ತೇನೆ’ ಎಂದರು.

‘ನನ್ನ ಸ್ಥಾನಮಾನಕ್ಕೆ ತಕ್ಕಂತೆ ಶಿಷ್ಟಾಚಾರ ಪಾಲಿಸಿಲ್ಲ. ಹೀಗಾಗಿ, ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಹೇಳಿದರು. 

‘ನನ್ನ ಹಕ್ಕಿಗೆ ಚ್ಯುತಿಯಾದರೆ ಯಾರು ಹೊಣೆ? ನನ್ನ ಮೇಲೆ ಹಗೆತನ ಯಾಕೆ? ನನಗೆ ಕೊಡಬೇಕಾದ ಸವಲತ್ತು ನೀಡಲು ಯಾವಾಗ ಸಭೆ ನಡೆಸುತ್ತೀರಿ? ಇದೆಲ್ಲವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ’ ಎಂದರು.

‘‌ಸಚಿವರಾಗುತ್ತಿದ್ದಂತೆ ಬೆಂಗಾವಲು ಪಡೆ, ಗನ್ ಮ್ಯಾನ್, ಕಾರು ಬರುತ್ತದೆ. ಆದರೆ, ನಾನು ವಿರೋಧ ಪಕ್ಷದ ನಾಯಕನಾಗಿ ಅಧಿಕಾರ ವಹಿಸಿಕೊಂಡು 20 ದಿನ‌ ಕಳೆದರೂ ಯಾವ ಸೌಲಭ್ಯಗಳನ್ನೂ‌ ಕೊಟ್ಟಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT