ಇವರ ಹೆಸರು ಅವಿನಾಶ್ ಕೊಡಂಕಿರಿ. ಕೃಷಿ, ಉದ್ಯಮ, ಕೈಗಾರಿಕೆ ಎಂದೆಲ್ಲಾ ಸ್ವಂತ ಲಾಭಕ್ಕಾಗಿ ಕಾಡು ಕಡಿಯುವ ಜನಗಳ ಮಧ್ಯೆ ವನ್ಯಜೀವಿ ಪ್ರೀತಿ, ಹಸಿರು ಪ್ರೇಮದಿಂದ ತಮ್ಮ ಜಮೀನಿನಲ್ಲಿ ಕಾಡು ಬೆಳೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮದವರಾದ ಅವಿನಾಶ್ ಕೊಡಂಕಿರಿ ಅವರು ನರಿಮೊಗರು ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾಸಂಸ್ಥೆಯನ್ನು ಕಟ್ಟಿ ಅಲ್ಲಿಯೇ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ, ಪರಿಸರ ಸಂರಕ್ಷಣೆಗೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅರಣ್ಯ ಕೃಷಿ ಮಾಡಬಯಸುವವರಿಗೆ ಈ ವಿಡಿಯೊ ಉತ್ತಮ ಮಾರ್ಗದರ್ಶಕವೂ ಆಗಬಹುದು.