ಬೆಂಗಳೂರು: ‘ಬೆಂಗಳೂರು ಉತ್ತರ ತಾಲ್ಲೂಕಿನ ಜಾರಕಬಂಡೆ ಕಾವಲ್ನಲ್ಲಿ ಭಾರತೀಯ ವಾಯುಪಡೆಗೆ ಮಂಜೂರು ಮಾಡಿದ್ದ 452 ಎಕರೆ ಮತ್ತು ಪೀಣ್ಯ ಪ್ಲಾಂಟೇಷನ್ನಲ್ಲಿ ವಾಯುಪಡೆಯ ವಶದಲ್ಲಿರುವ 83 ಎಕರೆ ಅರಣ್ಯ ಭೂಮಿಯನ್ನು ಮರಳಿ ವಶಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಅರಣ್ಯ ಭೂಮಿಯನ್ನು ಉಳಿಸಬೇಕು. ರಕ್ಷಣಾ ಸಚಿವಾಲಯದಿಂದ ಭೂಮಿ ವಾಪಸ್ ಪಡೆಯಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

‘ಮೀಸಲು ಅರಣ್ಯವನ್ನು ಯಾರಿಗೂ ನೀಡಲು ಆಗುವುದಿಲ್ಲ. ಅರಣ್ಯ ಇಲಾಖೆ ತನ್ನ ಜಮೀನನ್ನು ಬಿಟ್ಟು ಕೊಡಬಾರದು. ಅರಣ್ಯ ಇಲಾಖೆಯ ಜಮೀನು ಯಾರಾದರೂ ಕೇಳಿದರೆ ಅದು ಕೇಂದ್ರ ಪರಿಸರ ಸಚಿವಾಲಯದ ಬಳಿ ಹೋಗಬೇಕಾಗುತ್ತದೆ. ಆದರೂ, ಅರಣ್ಯ ಜಮೀನು ನೀಡಲು ಸಾಧ್ಯವಾಗುವುದಿಲ್ಲ. ಸಾವಿರಾರು ಎಕರೆ ಅರಣ್ಯ ಭೂಮಿ ಇನ್ನೂ ವಾಯುಪಡೆಯ ಬಳಿಯೇ ಇದೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, ‘ವಾಯುಪಡೆಯವರು 58.08 ಎಕರೆ ಭೂಮಿಯನ್ನು ‘ನಮ್ಮ ಮೆಟ್ರೊ’ ರೈಲು ಯೋಜನೆಗೆ ನೀಡಿ ಹಣ ಪಡೆದು ಕಾನೂನು ಉಲ್ಲಂಘಿಸಿದ್ದಾರೆ. ಈ ಹಣ ಅರಣ್ಯ ಇಲಾಖೆಗೆ ಸಂದಾಯ ಆಗಬೇಕಿದೆ. ಅದನ್ನು ಪಡೆದುಕೊಳ್ಳಲು ಕೂಡ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಜಾರಕಬಂಡೆ ಕಾವಲ್ನಲ್ಲಿ ವಾಯುಪಡೆಗೆ 1987ರಲ್ಲಿ ಮಂಜೂರು ಮಾಡಿದ್ದ ಭೂಮಿಯ ಪೈಕಿ 452 ಎಕರೆ ನಾಲ್ಕೂವರೆ ಗುಂಟೆ ಅರಣ್ಯ ಪ್ರದೇಶ. ಆ ಮಂಜೂರಾತಿಯನ್ನು 2017ರಲ್ಲಿಯೇ ರದ್ದುಪಡಿಸಲಾಗಿದೆ. ಈ ಕುರಿತಂತೆ 2018ರ ಸೆ. 15 ರಂದು ರಕ್ಷಣಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಾಜ್ಯ ಮುಖ್ಯ ಕಾರ್ಯದರ್ಶಿ, ‘ಜಾಲಹಳ್ಳಿಯ ಭೂಮಿಯನ್ನು ಬಳಸುವುದನ್ನು ಮುಂದುವರಿಸಲು ವಾಯುಪಡೆ ಬಯಸುವುದಾದರೆ ಅರಣ್ಯ (ಸಂರಕ್ಷಣಾ) ಕಾಯ್ದೆ-1980ರ ಅಡಿಯಲ್ಲಿ ಅರಣ್ಯ ಭೂಮಿಗಳ ಬಳಕೆಯನ್ನು ಕ್ರಮಬದ್ಧಗೊಳಿಸುವುದು ಕಡ್ಡಾಯವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದರು’ ಎಂದರು.

‘ವಾಯಪಡೆಯು ರಾಷ್ಟ್ರೀಯ ಹಿತಾಸಕ್ತಿಯ ಸಂಸ್ಥೆಯಾಗಿರುವ ಕಾರಣ, ಅರಣ್ಯ ತೀರುವಳಿ ಮಾಡುವಂತೆ ತಿಳಿಸಿದ್ದರೂ, ಈವರೆಗೂ ಅರ್ಜಿ ಸಲ್ಲಿಸಿಲ್ಲ. ನಾನು ಸಚಿವನಾದ ನಂತರ ಈ ಭೂಮಿಯ ಜಂಟಿ ಸರ್ವೆಗೆ ಸೂಚನೆ ನೀಡಿದ್ದೆ. ಈ ಕಾರ್ಯ ಪೂರ್ಣವಾಗಿದೆ. ಈ ಸಂಬಂಧ ನನ್ನನ್ನು 2-3 ಬಾರಿ ಭೇಟಿ ಮಾಡಿದ್ದ ವಾಯುಪಡೆ ಅಧಿಕಾರಿಗಳಿಗೆ ನಿಯಮಾನುಸಾರ ಪರ್ಯಾಯ ಭೂಮಿ ನೀಡಿ, ನಿವ್ವಳ ಪ್ರಸ್ತುತ ಮೌಲ್ಯ (ಎನ್ಪಿವಿ) ಪಾವತಿಸಿ ಜಮೀನನ್ನು ಬಳಸುವಂತೆ ತಿಳಿಸಿದ್ದೆ. ಆದರೂ ಅವರು ನಿಯಮಾನುಸಾರ ನಡೆದುಕೊಂಡಿಲ್ಲ’ ಎಂದು ವಿವರಿಸಿದರು.

‘ಪ್ರತಿವರ್ಷ ವೈಮಾನಿಕ ಪ್ರದರ್ಶನ ನಡೆಯುವ ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ, ಗಂಟಿಗಾನಹಳ್ಳಿ ಗ್ರಾಮದ ಸರ್ವೆ ನಂ. 47ರಲ್ಲಿ 132 ಎಕರೆ 3 ಗುಂಟೆ ಮತ್ತು 48ರಲ್ಲಿ 27 ಎಕರೆ 26 ಗುಂಟೆ ಸೇರಿ ಒಟ್ಟು 159 ಎಕರೆ 29 ಗುಂಟೆ ಪ್ರದೇಶ ಕೂಡಾ ಮೀಸಲು ಅರಣ್ಯ ಪ್ರದೇಶ’ ಎಂದು ಖಂಡ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.