ಗದಗ: ‘ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–2026 ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಮರಣಶಾಸನವಾಗಲಿದೆ’ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಹೇಳಿದರು.

‘2013ರ ಜಾಹೀರಾತು ನೀತಿ ಅನ್ವಯ ರಾಜ್ಯ ಸರ್ಕಾರ ಇಲ್ಲಿವರೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಎರಡು ಪುಟ ಪ್ರೋತ್ಸಾಹಕ ಜಾಹೀರಾತು ನೀಡುವ ಮೂಲಕ ಪತ್ರಿಕೆಗಳ ಬೆಳವಣಿಗೆಗೆ ನೆರವಾಗಿತ್ತು. ಆದರೆ, 2026–27ನೇ ಸಾಲಿನಿಂದ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಜಾಹೀರಾತು ನೀತಿ ಸ್ಥಳೀಯ ಪತ್ರಿಕೆಗಳನ್ನು ಮುಚ್ಚುವ ಪರಿಸ್ಥಿತಿಗೆ ದೂಡಲಿದೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಸರ್ಕಾರದಿಂದ ಪ್ರೋತ್ಸಾಹಕ ಜಾಹೀರಾತು, ವಿಶೇಷ ಜಾಹೀರಾತಿನ ಮೂಲಕ ಒದಗಿಸುವ ಆರ್ಥಿಕ ಬೆಂಬಲದ ಸಹಾಯವನ್ನು ನಿರ್ದಿಷ್ಟ ಅವಧಿಗೆ ಸೀಮಿತಗೊಳಿಸುವ ನಿರ್ಬಂಧ ಕೈಬಿಡಬೇಕು. ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಗೊತ್ತುಪಡಿಸಿರುವ ದಾಖಲೆಗಳನ್ನು ಜಿಲ್ಲಾ ಮಾಧ್ಯಮ ಸಮಿತಿಗೆ ಸಲ್ಲಿಸಬೇಕು ಎಂಬ ನಿಯಮವನ್ನೂ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘2013ರ ಜಾಹೀರಾತು ನೀತಿ ಅನ್ವಯ ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಹಾಲಿ ಜಾಹೀರಾತು ದರಕ್ಕೆ ಶೇ 12ರಷ್ಟು ಹೆಚ್ಚಳ ಮಾಡಬೇಕು. ಪ್ರಾದೇಶಿಕ ಪತ್ರಿಕೆಗಳ ವರ್ಗೀಕರಣ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಯನ್ನು ವಿವಿಧ ಕಾರಣಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಬಂದಲ್ಲಿ ಹಿಂದಿನಂತೆ ಜಾಹೀರಾತು ಅನುಷ್ಠಾನ ನಿಯಮಾವಳಿಗಳು ಮುಂದುವರಿಸಬೇಕು. ಒಂದು ಪತ್ರಿಕೆಯನ್ನು ಮಾರಾಟ ಮಾಡಿದರೆ ಅದನ್ನು ಮಾಧ್ಯಮ ಪಟ್ಟಿಯಿಂದ ಕೈಬಿಡುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದರು.

‘2013ರ ನಿಯಮದಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ಜಾಹೀರಾತು ದರವನ್ನು ಶೇ 12ರಷ್ಟು ಹೆಚ್ಚಳ ಮಾಡುವ ಅಧಿಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ನೀಡಬೇಕು. ಪ್ರತಿ ಎರಡು ವರ್ಷಕ್ಕೊಮ್ಮೆ ಪತ್ರಿಕೆಗಳ ದರ ಪರಿಷ್ಕರಣೆ ಮಾಡಬೇಕು ಎಂಬ ನಿಯಮ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳ ಜನರು ವಿವಿಧ ಸೌಲಭ್ಯಗಳನ್ನು ಪಡೆಯಲು ಕೆನೆಪದರ ನಿಗದಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಪತ್ರಿಕೆಗಳ ಸಂಪಾದಕರು ಹೊಂದಿರುವ ಕುಟುಂಬದ ವಾರ್ಷಿಕ ಆದಾಯದ ಮಾನದಂಡ ಪರಿಗಣಿಸಿ ಜಾಹೀರಾತು ಬಿಡುಗಡೆ ಮಾಡುವ ಕೆನೆಪದರ ನೀತಿಯನ್ನು ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಅನ್ವಯ ಮಾಡಬಾರದು’ ಎಂದು ಆಗ್ರಹಿಸಿದರು.

‘ಈಗಾಗಲೇ ಪ್ರೋತ್ಸಾಹಕ ಜಾಹೀರಾತು ರೂಪದಲ್ಲಿ ಆರ್ಥಿಕ ಬೆಂಬಲ ಪಡೆಯುವ ಪತ್ರಿಕೆಗಳಿಗೆ ಈ ಅವಕಾಶವನ್ನು ಐದು ವರ್ಷಗಳವರೆಗೆ ಮಾತ್ರ ನೀಡಲು ಉದ್ದೇಶಿಸಿದ್ದು, ಇದು ಪತ್ರಿಕೆಗಳಿಗೆ ಮಾರಕವಾಗಿದೆ. ಹಾಗಾಗಿ, ಸ್ವಯಂಚಾಲಿತ ಮುಕ್ತಾಯದ ನಿಯಮ ತೆಗೆದುಹಾಕಿ, ಸರ್ಕಾರ ಪತ್ರಿಕೆಗಳಿಗೆ ನಿರಂತರವಾಗಿ ಜಾಹೀರಾತು ನೀಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಮಾರಕವಾಗಿರುವ ಕರ್ನಾಟಕ ಜಾಹೀರಾತು ನೀತಿ–2026ನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು. ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಸರ್ಕಾರ ಅನುಷ್ಠಾನಗೊಳಿಸಿದರೆ ಸಂಘ ಅದನ್ನು ಬಲವಾಗಿ ವಿರೋಧಿಸುವುದರ ಜತೆಗೆ ಪ್ರತಿಭಟನೆಯ ಹಾದಿ ತುಳಿಯಲಿದೆ’ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಅಬ್ಬಿಗೇರಿ, ಭೀಮರಾಯ ಹದ್ದಿನಾಳ, ಎಚ್.ಎಸ್.ಹರೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ, ಖಜಾಂಚಿ ಎಸ್.ಟಿ.ವೇದಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಎಸ್.ಪಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಲಿಂಗದಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-23-1839368991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.