ಗದಗ: ‘ಕಾರ್ಲ್ಮಾರ್ಕ್ಸ್ನ ಮರಿಗಳಾದ ಕಮ್ಯುನಿಸ್ಟರು 10 ಕೋಟಿ ಜನರ ಕಗ್ಗೊಲೆ ಮಾಡಿದರು. ಧರ್ಮ, ಸಂಸ್ಕೃತಿ ಹಾಳು ಮಾಡಿದರು. ಇಂತಹವರು ಬಸವಣ್ಣನ ಧ್ವಜದ ಕೆಳಗೆ ಬರಲು ಯತ್ನಿಸುತ್ತಿದ್ದಾರೆ’ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಹಿಂದೂ ಸರ್ವ ಸಮಾಜಗಳ ಒಕ್ಕೂಟದಿಂದ ಭಾನುವಾರ ಸಂಜೆ ನಡೆದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.

‘ಇತಿಹಾಸದಲ್ಲಿ ದೇಶಗಳನ್ನೇ ಬಿಕಾರಿ ಮಾಡಿದ ಇವರು, ಭಾರತದ ಸಂಸ್ಕೃತಿ ಛಿದ್ರ ಮಾಡುವಂತಹ ಕೆಟ್ಟ ಆಲೋಚನೆ ಮಾಡುತ್ತಿ ದ್ದಾರೆ. ಎಲ್ಲರನ್ನೂ ಒಗ್ಗೂಡಿಸಿದವರು ಬಸವಣ್ಣ. ಅವರ ಹೆಸರು ಹೇಳಿಕೊಂಡು ಈ ಅತೃಪ್ತ ಆತ್ಮಗಳು ತಾರತಮ್ಯ ಮಾಡುತ್ತಿವೆ’ ಎಂದು ಆರೋಪಿಸಿದರು.

‘ಬಸವಣ್ಣನರನ್ನು ಜಾತಿ, ಪ್ರದೇಶಕ್ಕೆ ಕಟ್ಟಿಹಾಕಲು ಯತ್ನಿಸುತ್ತಿದ್ದಾರೆ. ಶುದ್ಧ ಹಿಂದೂ ಧರ್ಮ ನೀಡಿದವರು ಬಸವಣ್ಣ. ಅವರ ಹೆಸರು ಹೇಳಿಕೊಂಡು ದೇಶಕ್ಕೆ ಹಾನಿ ಮಾಡುತ್ತಿದ್ದಾರೆ. ಈ ಮುಖವಾಡದೊಳಗೆ ಧರ್ಮ ಒಡೆಯುವ ಹುನ್ನಾರವಿದೆ’ ಎಂದರು.

‘ಬಸವಣ್ಣನ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರ ನಡೆ- ನುಡಿ ಬೇರೆಯೇ ಇದೆ. ಈ ಕ್ಷುದ್ರ ಶಕ್ತಿಯನ್ನು ಕ್ಷೀಣಗೊಳಿಸಬೇಕಿದೆ. ದೇಶ ಹಾಳಾಗಲು ಸಜ್ಜನರ ನಿಷ್ಕ್ರಿಯತೆ ಕಾರಣ’ ಎಂದರು.

‘ಲಿಂಗಾಯತರು ಹಿಂದೂಗಳಲ್ಲ ಎನ್ನುವ ಕಮ್ಯುನಿಸ್ಟರು ಒಂದು ಸುಳ್ಳನ್ನು ನೂರು ಬಾರಿ ಹೇಳಿ, ಸತ್ಯವಾಗಿಸಲು ಯತ್ನಿಸುತ್ತಾರೆ. ಬಸವಣ್ಣನವರನ್ನು ಕಾರ್ಲ್ ಮಾರ್ಕ್ಸ್ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ‘ ಎಂದರು.

‘ಈ ಸಮಾವೇಶವನ್ನು ಹಲವರು ವಿರೋಧಿಸಿದರು. ಬಸವಾದಿ ಶರಣರ ಹೆಸರಿಟ್ಟಿದ್ದು ಅವರ ಹೊಟ್ಟೆಯೊಳಗೆ ಖಾರ ಕಲಿಸಿದಂತಾಯಿತು. ಅವರು ಬಸವಣ್ಣನ ಹೆಸರಿನ ಗುತ್ತಿಗೆ ಹಿಡಿದವರೆಂದು ಅಂದುಕೊಂಡಿದ್ದಾರೆ’ ಎಂದರು.

‘ಧರ್ಮ ಒಡೆಯುವುದನ್ನು ತಡೆಯಲು ಒಗ್ಗಟ್ಟಾಗಿರಬೇಕು. ಶರಣರ ಶಿವ ಬೇರೆ, ಬಸವಣ್ಣನವರು ವೇದ, ಉಪನಿಷತ್ ತಿರಸ್ಕರಿದ್ದಾರೆ ಎಂಬ ಹೇಳಿಕೆಯಲ್ಲಿ ದೇಶದ ಮೂಲವನ್ನು ಭಸ್ಮಗೊಳಿಸುವ ಹುನ್ನಾರವಿದೆ. ಶರಣರ ವಚನಗಳಲ್ಲಿ ವೇದ, ಉಪನಿಷತ್, ಶಾಸ್ತ್ರ, ಉಗಮ ಪ್ರತಿಪಾದಿಸಲಾಗಿದೆ‘ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-1418612671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.