ಗದಗ: ‘ಜಾತ್ರೆ, ಹಬ್ಬ ಹರಿದಿನಗಳು ಮನುಷ್ಯರ ನಡುವೆ ದ್ವೇಷ ದೂರ ಮಾಡಿ, ಭಾವೈಕ್ಯ ಮೂಡಿಸುತ್ತವೆ. ಒಗ್ಗಟ್ಟು ಇದ್ದರೆ ಮಾತ್ರ ಮಹಾನ್ ಕಾರ್ಯಗಳು ನಡೆಯಲು ಸಾಧ್ಯ. ಇಲ್ಲದಿದ್ದರೆ ಯಾವುದೇ ಸಣ್ಣ ಕಾರ್ಯ ಮಾಡುವುದು ಕೂಡ ಸಾಧ್ಯವಿಲ್ಲ’ ಎಂದು ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

ನಗರದ ಉಸುಗಿನಗಟ್ಟಿ ಓಣಿಯ ಗಂಜಿ ಬಸವೇಶ್ವರ 64ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬಸವ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಗಂಜಿ ಬಸವೇಶ್ವರ ಜಾತ್ರೆಯ ಮೂಲಕ ಜನರ ನಡುವಿನ ದ್ವೇಷ, ಅಸೂಯೆ, ಜಾತಿ ಭಾವನೆಗಳನ್ನು ದೂರ ಮಾಡಿ, ಎಲ್ಲರನ್ನೂ ಭಕ್ತಿಯಿಂದ ಒಂದುಗೂಡಿಸುವ ಕೆಲಸ ಹಲವು ವರ್ಷಗಳಿಂದ ನಡೆಯುತ್ತಿದೆ. ಉಸುಗಿನಗಟ್ಟಿ ಓಣಿಯ ಎಲ್ಲ ಹಿರಿಯರು ಮತ್ತು ಯುವಕರು ಒಗ್ಗಟ್ಟಿನಿಂದ ಬದುಕಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಶಾಂತ ಶಾಬಾದಿಮಠ ಮಾತನಾಡಿ, ‘ಓಣಿಯ ಎಲ್ಲ ಹಿರಿಯರು ಮತ್ತು ಯುವಮಿತ್ರರು ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕಾರ ನೀಡಿದ್ದಾರೆ. ಇದೇ ರೀತಿ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದೆಯೂ ಗಂಜಿ ಬಸವಣ್ಣನ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸೋಣ’ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ‘ಮಾನವಧರ್ಮಕ್ಕೆ ಜಯವಾಗಲಿ ಎಂದು ಸಾರಿದ ಮುಕ್ತಿಮಂದಿರದ ವೀರ ಬಾಲಗಂಗಾಧರ ಶಿವಾಚಾರ್ಯರ ತತ್ವವನ್ನು ನಾವ್ಯಾರು ಆಚರಿಸುತ್ತಿಲ್ಲ. ಜಾತಿ, ಧರ್ಮಗಳಲ್ಲಿ ಸಿಲುಕಿ ದ್ವೇಷ ಭಾವನೆ ಬಿತ್ತುತ್ತಿದ್ದೇವೆ. ಮಹಾತ್ಮರ ತತ್ವಗಳನ್ನು ತಿಳಿದುಕೊಂಡು ಸೌಹಾರ್ದದಿಂದ ಬದುಕು ಸಾಗಿಸಬೇಕಿದೆ’ ಎಂದರು.

ಭೂಗರ್ಭ ಶಾಸ್ತ್ರಜ್ಞ ಎಸ್.ಕೆ.ಮ್ಯಾಗೇರಿ ಮಾತನಾಡಿದರು.

ರಾಮಣ್ಣ ಜಿ. ಫಲದೊಡ್ಡಿ, ಮೆಹಬೂಬಸಾಬ ನದಾಫ, ಅಬ್ದುಲ್ ಮುನಾಫ ಮುಲ್ಲಾ, ಕರಬಸಯ್ಯ ನಾಲ್ವತ್ತವಾಡಮಠ, ಬಸಪ್ಪ ಕಲಬಂಡಿ, ಎಚ್.ಕೆ.ಮುಲ್ಲಾ, ಹೇಮಂತ ಗಿಡ್ಡ ಹನಮಣ್ಣವರ, ಪರಪ್ಪ ಫಕ್ಕೀರಪ್ಪ ಕಮತರ, ಉದಯಗೌಡ ಅಮಾತಿಗೌಡ್ರ, ಶಂಕರ ಕರಬಿಷ್ಟಿ ಇದ್ದರು.

ವಿರುಪಾಕ್ಷಗೌಡ ಹನಮಂತಗೌಡ ದೇಸಾಯಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ.ಹಾವಣಗಿ ನಿರೂಪಿಸಿದರು. ತೋಟಯ್ಯ ವಿಭೂತಿಮಠ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-1488446934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.