ಗದಗ: ‘ನಾವು ಇಂದು ಜಾತ್ಯತೀತ ಸಮಾಜದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಬಸವಣ್ಣನವರು ಅಂದೇ ಜಾತಿರಹಿತ ಸಮಾಜದ ಬಗ್ಗೆ ಸ್ಪಷ್ಟ ಚಿಂತನೆ ಕೊಟ್ಟಿದ್ದರು. ಕಲ್ಯಾಣ ಕ್ರಾಂತಿಯ ನಂತರದ ದಿನಗಳಲ್ಲಿ ಅನುಭವ ಮಂಟಪದ ಆಶಯಗಳನ್ನು ಜೀವಂತವಾಗಿರಿಸಲು ತೋಂಟದಾರ್ಯ ಮಠ ಮಹತ್ತರ ಪಾತ್ರ ವಹಿಸಿದೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

‘750 ಮಂದಿ ವಿರಕ್ತರನ್ನು ಒಂದುಗೂಡಿಸಿ ಧರ್ಮ ಪ್ರಸಾರ ಮಾಡಿದ ಪರಂಪರೆ ತೋಂಟದಾರ್ಯ ಮಠಕ್ಕೆ ಇದೆ. ಅಂತಹ ಭವ್ಯ ಪರಂಪರೆಯನ್ನು ಬೆಳಗಿದವರು ಲಿಂ. ಸಿದ್ಧಲಿಂಗ ಶ್ರೀಗಳು’ ಎಂದರು.

‘ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವದ ಅಡಿ ಹೊಸ ಧರ್ಮ ಹುಟ್ಟುಹಾಕಿ, ಸಮಸಮಾಜದ ಕನಸು ಕಂಡವರು. ಅವರ ಆಶಯಗಳು ಮತ್ತು ಶರಣರ ಚಿಂತನೆಗಳನ್ನು ಆಧುನಿಕ ಕಾಲಕ್ಕೆ ವಿಸ್ತರಿಸಿದ ಕೀರ್ತಿ ಲಿಂ. ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಲಿಂ. ಸಿದ್ಧಲಿಂಗ ಶ್ರೀಗಳ ರೀತಿಯಲ್ಲಿಯೇ ಸಿದ್ದರಾಮ ಸ್ವಾಮೀಜಿ ಅವರು ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದಾರೆ. ನಾಗನೂರ ಮಠದ ಮೂಲಕ ಅವರು ಕೈಗೊಂಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಗುರುತಿಸಿ ಸರ್ಕಾರ ಮಠಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದರು.

ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಪ್ರಕಟಿಸಿದ ಫ.ಗು.ಸಿದ್ದಾಪುರ ಅವರು ರಚಿಸಿರುವ ‘ಹಣತೆ ಹಚ್ಚಿದವರು-2’, ಡಾ. ಎಸ್. ಗಂಗಾಬಿಕೆ ಗೋವರ್ಧನ ಅವರ ‘ತಾರಕಗುರೂಪದೇಶ’ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಲೋಕಾರ್ಪಣೆಗೊಳಿಸಿದರು.

ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ದಲಿಂಗ ದೇವರು, ಬಸವಮಹಾಂತ ಸ್ವಾಮೀಜಿ, ಶಿವಾನಂದ ದೇವರು, ವೆಂಕಟಾಪುರ ಶರಣರು, ಶಿವಮಹಾಂತ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟರ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಸಂಸದ ಐ.ಜಿ.ಸನದಿ, ಡಾ. ಐಹೊಳೆ ವೇದಿಕೆಯಲ್ಲಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು.

ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಸ್ಥಾಯಿ ನಾಕೋಡ ಮತ್ತು ಪಂ. ಬಾಲಚಂದ್ರ ನಾಕೋಡ ಅವರಿಂದ ವಚನ ಸಂಗೀತ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-23-1575323357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.