ಬೆಂಗಳೂರು: ಚಿನ್ನ ಅಡಮಾನ ಸಾಲ ಪಡೆದ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಖಾಸಗಿ ಮಸೂದೆಯನ್ನು ಕಾಂಗ್ರೆಸ್ನ ರಮೇಶ್ ಬಾಬು ಮಂಡಿಸಿದರು.

ವಿಧಾನ ಪರಿಷತ್ತಿನ ಶುಕ್ರವಾರದ ಕಲಾಪದ ವೇಳೆ ರಮೇಶ್ ಬಾಬು ಅವರು, ‘ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ಮಸೂದೆ’ ಮಂಡಿಸಿದರು.

‘ಚಿನ್ನ ಅಡಮಾನ ಇರಿಸಿಕೊಳ್ಳುವ ಕಂಪನಿಗಳು, ಚಿನ್ನದ ಮಾರುಕಟ್ಟೆ ಮೌಲ್ಯದ ಶೇ 50ರಷ್ಟು ಮೊತ್ತವನ್ನಷ್ಟೇ ಸಾಲವಾಗಿ ನೀಡುತ್ತವೆ. ವಿಪರೀತ ದರದ ಬಡ್ಡಿ ವಸೂಲಿ ಮಾಡುತ್ತವೆ. ಅಡಮಾನವಿಡುವ ಚಿನ್ನಕ್ಕೆ ನ್ಯಾಯಯುತವಾದ ಮೊತ್ತ ನೀಡದೆ ಗ್ರಾಹಕರನ್ನು ವಂಚಿಸುತ್ತವೆ. ಚಿನ್ನದ ಮಾರುಕಟ್ಟೆ ಮೌಲ್ಯದ ಕನಿಷ್ಠ ಇಂತಿಷ್ಟು ಪ್ರಮಾಣವನ್ನು ಸಾಲವಾಗಿ ನೀಡಬೇಕು ಎನ್ನುವುದನ್ನು ಕಡ್ಡಾಯ ಮಾಡಬೇಕು’ ಎಂದು ಮಸೂದೆಯ ವಿವರಗಳನ್ನು ಸದನದ ಮುಂದೆ ಇರಿಸಿದರು.

‘ಸಾಲ ನೀಡಿದ ಮೂರೇ ತಿಂಗಳೊಳಗೆ ಬಡ್ಡಿ ಪಾವತಿಸದಿದ್ದರೆ ಚಿನ್ನವನ್ನು ಹರಾಜು ಹಾಕುತ್ತವೆ. ಸಾಲ ಮತ್ತು ಅಸಲನ್ನು ಕಳೆದು ಉಳಿಕೆ ಮೊತ್ತವನ್ನು ಗ್ರಾಹಕರಿಗೆ ನೀಡುವುದಿಲ್ಲ. ಅಲ್ಲದೆ, ಚಿನ್ನ ಬಿಡಿಸಿಕೊಳ್ಳುವವರಿಗೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕುವ ಉದ್ದೇಶದಿಂದ ಹರಾಜಿಗೆ ಕಾಲಮಿತಿ, ತೂಕ ವಂಚನೆಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ವಿವರಿಸಿದರು.

ಈ ಮಸೂದೆಯ ಮೇಲೆ ಚರ್ಚೆ ನಡೆಸಲು ಮುಂದಿನ ವಾರ ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.