ಮಂಗಳವಾರ, 9 ಜೂನ್ 2026
×
ADVERTISEMENT

ಇಂಧನ ದರ ಏರಿಕೆ | ಪ್ರಧಾನಿ ಮೋದಿ ಜನರಿಗೆ ನೀಡಿದ ಉಡುಗೊರೆ: ಡಿ.ಕೆ.ಶಿವಕುಮಾರ್‌

Published : 15 ಮೇ 2026, 7:33 IST
Last Updated : 15 ಮೇ 2026, 7:33 IST
ADVERTISEMENT
ಫಾಲೋ ಮಾಡಿ
Comments
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರಧಾನಿ ಮೋದಿ ಜನರಿಗೆ ನೀಡಿದ ಉಡುಗೊರೆ. ಅವರು ಅಂತರರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ವಿಶೇಷವಾಗಿ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿಲ್ಲ. ಈಗ ಇಂಧನ ಬಳಕೆಯನ್ನು ಮಿತಿಗೊಳಿಸಬೇಕು, ಚಿನ್ನ ಖರೀದಿಸಬಾರದು ಎಂದು ಹೇಳುತ್ತಿದ್ದಾರೆ.
ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ
ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿದಾಗ, ಮೋದಿ ಸರ್ಕಾರವು ಶತಕೋಟಿ ಲಾಭವನ್ನು ಜೇಬಿಗಿಳಿಸಿತು. 3 ತಿಂಗಳ ನಂತರ ಬಿಕ್ಕಟಿನ ನೆಪದಲ್ಲಿ ಅದರ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರಲಾಗುತ್ತಿದೆ. ಸರ್ಕಾರದ ಈ ಬಿಕ್ಕಟ್ಟು ನಿರ್ವಹಣೆ ತಂತ್ರ ಸಾಮಾನ್ಯ ಜನರನ್ನು ಆರ್ಥಿಕ ಆಘಾತಗಳಿಂದ ರಕ್ಷಿಸಲು ಅಲ್ಲ . ಬದಲಿಗೆ ಅದಾನಿಯನ್ನು ಕಾನೂನು ಕ್ರಮದಿಂದ ರಕ್ಷಿಸಲು ಮಾತ್ರ
ಕೆ.ಸಿ. ವೇಣುಗೋಪಾಲ್. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಕಳೆದ 3 ವರ್ಷಗಳಿಂದ, ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿದೆ. ಇದರಿಂದಾಗಿ, ಇತರ ದೇಶಗಳಲ್ಲಿ ವಿವಿಧ ರೀತಿಯ ಬಿಕ್ಕಟ್ಟುಗಳು ಉದ್ಭವಿಸಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಗರಿಕರನ್ನು ಆರ್ಥಿಕ ಆಘಾತಗಳಿಂದ ರಕ್ಷಿಸಿದೆ
ದಿಲೀಪ್ ಘೋಷ್ , ಪಶ್ಚಿಮ ಬಂಗಾಳ ಸಚಿವ
ಮೊದಲು ಜನರ ಮತಗಳನ್ನು ಲೂಟಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಈಗ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ
ಡೆರೆಕ್ ಓಬ್ರಿಯಾನ್, ಟಿಎಂಸಿ ನಾಯಕ
ಪ್ರಧಾನಿಯವರ ಆತ್ಮೀಯ ಮಿತ್ರರಾದ ಅಮೆರಿಕ ಮತ್ತು ಇಸ್ರೇಲ್ ಪಶ್ಚಿಮ ಏಷ್ಯಾದಲ್ಲಿ ನಡೆಸಿದ ಯುದ್ಧದಿಂದಾಗಿ ಅಂತರರಾಷ್ಟ್ರೀಯ ತೈಲ ಬೆಲೆಗಳು ಈಗ ಏರುತ್ತಿವೆ. ಸದ್ಯ ವಿಧಾನಸಭಾ ಚುನಾವಣೆಗಳು ಮುಗಿದಿರುವುದರಿಂದ ಮೋದಿ ಸರ್ಕಾರವು ವಾಣಿಜ್ಯ ಎಲ್‌ಪಿಜಿ , ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಇದು ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಬಹುದು
ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ)
ದೇಶದ ಆರ್ಥಿಕ ಸಂಕಷ್ಟಕ್ಕೆ ಕೇವಲ ಅಂತರರಾಷ್ಟ್ರೀಯ ಬಿಕ್ಕಟ್ಟು ಕಾರಣವಲ್ಲ, ಬದಲಿಗೆ ಸರ್ಕಾರದ ದೂರದೃಷ್ಟಿಯ ಕೊರತೆ ಮತ್ತು ಅಸಮರ್ಥತೆ ಕಾರಣ. ಇದಕ್ಕೆ ದೇಶದ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಮೋದಿ ಸರ್ಕಾರದ ತಪ್ಪಿಗೆ ಸಾರ್ವಜನಿಕರು ಬೆಲೆ ತೆರಬೇಕಾಗುತ್ತಿದೆ. ಈಗ ₹3 ಏರಿಕೆ ಮಾಡಿದ್ದಾರೆ. ಉಳಿದ ಹಣವನ್ನು ಕಂತುಗಳಲ್ಲಿ ವಸೂಲಿ ಮಾಡುತ್ತಾರೆ
ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT