ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ಪತ್ರ ಸರಣಿ: ಸಂಪುಟ ಸಭೆಯಲ್ಲಿ ಚರ್ಚೆ– ಗೃಹ ಸಚಿವ ಪರಮೇಶ್ವರ

Published : 23 ಸೆಪ್ಟೆಂಬರ್ 2024, 15:33 IST
Last Updated : 23 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಬೆಂಗಳೂರು: ‘ರಾಜ್ಯಪಾಲರು ಪದೇ ಪದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಮಾಹಿತಿ ಕೊಡುವಂತೆ ಕೇಳುವುದು ಸಂವಿಧಾನಕ್ಕೆ ವಿರುದ್ಧ. ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಈ ರೀತಿ ಮಾಹಿತಿ ಕೇಳುವುದು ಅಥವಾ ಮಧ್ಯಪ್ರವೇಶಿಸುವುದನ್ನು ಎಲ್ಲಿಯೂ ಕೇಳಿಲ್ಲ‌’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ರಾಜ್ಯಪಾಲರ ಈ ನಡೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಮುಂದೇನು ಮಾಡಬೇಕೆಂದು ತೀರ್ಮಾನಿಸುತ್ತೇವೆ’ ಎಂದರು.

‘35 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಅನೇಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಇಂತಹ ಸಂದರ್ಭ ಎಂದೂ ಬಂದಿಲ್ಲ. ಯಾವಾಗಲಾದರೂ ಒಮ್ಮೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರಗಳಿದ್ದರೆ ಗೃಹ ಸಚಿವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ವಿವರಿಸುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವ ಹಕ್ಕು ರಾಜ್ಯಪಾಲರಿಗಿದೆ’ ಎಂದರು.

‘ಆದರೆ, ರಾಜ್ಯಪಾಲರು ಬರೆಯುವ ಎಲ್ಲ ಪತ್ರಗಳಿಗೆ ಉತ್ತರಿಸುವುದು ಅನಿವಾರ್ಯವಲ್ಲ. ಯಾವುದಕ್ಕೆ ಉತ್ತರ‌ ಕೊಡಬೇಕೊ ಅದಕ್ಕೆ ಖಂಡಿತವಾಗಿಯೂ ಕೊಡುತ್ತೇವೆ. ಯಾವುದಕ್ಕೆ ಉತ್ತರಿಸುವ ಅನಿವಾರ್ಯ ಇರುವುದಿಲ್ಲವೊ ಅಂಥವುಗಳಿಗೆ ಉತ್ತರ ಕೊಡುವುದಿಲ್ಲ’ ಎಂದರು.

‘ಯಾವ ಉದ್ದೇಶಕ್ಕೆ ರಾಜ್ಯಪಾಲರು ಹೀಗೆ ಮಾಡುತ್ತಿದ್ದಾರೊ ಗೊತ್ತಿಲ್ಲ. ಚುನಾಯಿತ ಜನಪ್ರತಿನಿಧಿ ಮುಖ್ಯಮಂತ್ರಿಗೆ ಅವರು ಏಕಾಏಕಿಯಾಗಿ ಶೋಕಾಸ್ ನೋಟಿಸ್ ನೀಡಿರುವುದನ್ನು ತಪ್ಪು ಎಂದು ಪ್ರತಿಭಟನೆ ನಡೆಸಿದ್ದೇವೆ. ಯಾರೊ ದೂರು ನೀಡಿದರು ಎಂದ ಮಾತ್ರಕ್ಕೆ ಪರಿಶೀಲನೆ ನಡೆಸದೆಯೇ ಶೋಕಾಸ್ ನೋಟಿಸ್ ನೀಡಿರುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT