ಬೆಂಗಳೂರು: ಗ್ರಾಮೀಣ ಜನರ ಆರೋಗ್ಯ ಸುರಕ್ಷತೆ ಹಾಗೂ ಮರಣ ಪ್ರಮಾಣ ತಡೆಯುವಲ್ಲಿ ‘ಗೃಹ ಆರೋಗ್ಯ’ ಯೋಜನೆ ಸಂಜೀವಿನಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಗೃಹ ಆರೋಗ್ಯ’ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಶೇ 29.9ರಷ್ಟು ಜನರು ರಕ್ತದೊತ್ತಡ, ಶೇ 15.6ರಷ್ಟು ಮಧುಮೇಹ, 11.5ರಷ್ಟು ಬಾಯಿ ಕ್ಯಾನ್ಸರ್, ಶೇ 26ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ ಹಾಗೂ18.3ರಷ್ಟು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅಂಥವರಿಗೆ ನಿರಂತರ ಆರೋಗ್ಯ ತಪಾಸಣೆ, ಔಷಧ ಪೂರೈಕೆ ಮಾಡಲಾಗುವುದು ಎಂದರು.

ಈ ಕಾಯಿಲೆಗೆ ತುತ್ತಾದವರು ದೀರ್ಘಾವಧಿಯಲ್ಲಿ ಕಿಡ್ನಿ ವೈಫಲ್ಯ, ಹೃದಯಾಘಾತಕ್ಕೆ ಒಳಗಾಗುತ್ತಾರೆ. ನಿಯಮಿತವಾಗಿ ಔಷಧ, ಚಿಕಿತ್ಸೆ ಪಡೆದರೆ ಜೀವಪಾಯ ತಡೆಯಬಹುದು ಎಂದು ಹೇಳಿದರು.

ಕೋಲಾರ ಜಿಲ್ಲೆಯಿಂದ ಯೋಜನೆಯನ್ನ ಪ್ರಾರಂಭಿಸಲಾಗುತ್ತಿದ್ದು, ಎರಡು ತಿಂಗಳ ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಜಿಲ್ಲೆಯ ರೋಗಿಗಳಿಗೆ ಔಷಧ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಉಪಸ್ಥಿತರಿದ್ದರು.

ಮನೆ ಬಾಗಿಲಿನಲ್ಲೇ ಆರೋಗ್ಯ ತಪಾಸಣೆ

ರಕ್ತದೊತ್ತಡ ಮಧುಮೇಹ ಬಾಯಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಮಾನಸಿಕ ಆರೋಗ್ಯದ ತಪಾಸಣೆ ಆರೋಗ್ಯ ಕಾರ್ಯಕರ್ತರ ಒಂದು ತಂಡ ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಪ್ರತಿ ಮಂಗಳವಾರ ಬುಧವಾರ ಶುಕ್ರವಾರ ಮತ್ತು ಶನಿವಾರ ಭೇಟಿ ಕಡ್ಡಾಯ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧ ವಿತರಣೆ. ಕೆಲವರಿಗೆ ಜೀವನಶೈಲಿ ಮಾರ್ಪಡಿಗೆ ಸಲಹೆ ಆರೈಕೆಯಲ್ಲಿರುವ ರೋಗಿಗಳಿಗೆ ಅಂಗವಿಕಲರಿಗೆ ಹಿರಿಯ ನಾಗರಿಕರಿಗೆ ಔಷಧೋಪಚಾರ. ಉಚಿತವಾಗಿ ಮಾತ್ರೆಗಳ ವಿತರಣೆ 4ರಿಂದ 6 ತಿಂಗಳಲ್ಲಿ ಸ್ಕ್ರೀನಿಂಗ್ ಕಾರ್ಯ ಪೂರ್ಣ. ನಂತರ ಹೆಚ್ಚಿನ ಆರೈಕೆಗಾಗಿ ಒಂದು ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳ ಆಯೋಜನೆ ಎರಡನೇ ಹಂತದಲ್ಲಿ ಫಾಲೋಅಪ್ ಮತ್ತು ನಿಯಂತ್ರಣಕ್ಕೆ ಗಮನ. ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಸಿಕ ಆರೋಗ್ಯ ಶಿಬಿರಗಳ ಆಯೋಜನೆ ಅಕಾಲಿಕ ಮರಣಗಳನ್ನು ತಡೆಗಟ್ಟಲು ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಪ್ರಯೋಜನ

ಮೊಟ್ಟೆ ಮೀನು ಮಾಂಸ ತಿಂದರೆ ಮಧುಮೇಹ ಬರುತ್ತದೆ ಹೆಚ್ಚುತ್ತದೆ ಎನ್ನುವುದು ತಪ್ಪುಕಲ್ಪನೆ. ಮೊಟ್ಟೆ ಮಾಂಸ ಬಿಟ್ಟು ಬರೀ ಅನ್ನ ತಿಂದರೆ ಹೇಗೆ? ಸಮತೋಲನದ ಆಹಾರ ಸೇವನೆ ಮುಖ್ಯ.
ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.