ಈ ಕೇಂದ್ರಗಳಲ್ಲಿ ಆಧಾರ್ ಬಯೊಮೆಟ್ರಿಕ್ ದೃಢೀಕರಣದ ಮೂಲಕ ಹೊಸದಾಗಿ ನೋಂದಣಿ ಪಡೆಯಲು ಇಚ್ಛಿಸುವ ಅರ್ಜಿದಾರರ ಬಯೊಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಈ ಹಂತದ ಪ್ರಕ್ರಿಯೆಯು ಅಮಾಯಕರ ದಾಖಲೆಗಳನ್ನು ಬಳಸಿಕೊಂಡು ಮಾಡುವ ನಕಲಿ ಜಿಎಸ್‌ಟಿ ನೋಂದಣಿ ತಡೆಯಲು ನೆರವಾಗುತ್ತದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿದ್ದಾರೆ.