ಬೆಂಗಳೂರು: ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಿ ₹410 ಕೋಟಿ ಮೊತ್ತದ ಖೊಟ್ಟಿ ವಹಿವಾಟಿನ ಮೂಲಕ ₹102.50 ಕೋಟಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚಿಸಿದ್ದ ಜಾಲವೊಂದನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಈ ಜಾಲದ ಕಿಂಗ್ಪಿನ್ ಮೊಹಮ್ಮದ್ ತೌಕೀರ್ (42) ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

2025ರ ನವೆಂಬರ್ನಲ್ಲಿ ಬೆಂಗಳೂರು ನಗರದ ಎಸ್ಜೆಪಿ ರಸ್ತೆ, ಜೆ.ಸಿ ರಸ್ತೆ, ಕಲಾಸಿಪಾಳ್ಯ, ಬಿವಿಕೆ ಅಯ್ಯಂಗಾರ್ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ ನಡೆಯುತ್ತಿರುವುದನ್ನು ಪತ್ತೆ ಮಾಡಿದ್ದರು.

ಈ ವೇಳೆ ಒಟ್ಟು ₹1,464 ಕೋಟಿ ಮೊತ್ತದ ಖೊಟ್ಟಿ ವಹಿವಾಟು ನಡೆಸಿ, ₹350 ಕೋಟಿಯಷ್ಟು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿರುವುದು ಆ ದಾಳಿಯ ವೇಳೆ ಪತ್ತೆಯಾಗಿತ್ತು. ನಗರದ ರೇವತಿ ಮತ್ತು ಇ.ಪ್ರತಾಪ್ ಎಂಬುವವರು ಈ ಜಾಲವನ್ನು ನಡೆಸುತ್ತಿದ್ದರು ಮತ್ತು ತಮಿಳುನಾಡಿನ ಇರ್ಬಾಜ್ ಅಹಮದ್ ಮತ್ತು ನಫೀಜ್ ಅಹಮದ್ ಎಂಬುವವರು ಈ ಜಾಲವನ್ನು ನಿರ್ವಹಿಸುತ್ತಿದ್ದರು ಎಂಬುದು ಗೊತ್ತಾಗಿತ್ತು.

ಈಗ ಈ ಜಾಲವನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಿದ್ದದ್ದು ಆಂಧ್ರ ಪ್ರದೇಶದ ಚಿತ್ತೂರಿನ, ಆದರೆ ಬೆಂಗಳೂರಿನಲ್ಲಿ ನೆಲಸಿರುವ ಮೊಹಮ್ಮದ್ ತೌಕೀರ್ ಮತ್ತು ಶೇಖ್ ಜಾಕೀರ್ ಹುಸೇನ್ ಆಲಿಯಾಸ್ ಬಾಷಾ ಎಂಬುದನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದಿನ ₹1,464 ಕೋಟಿಯ ಹೊರತಾಗಿ ಈ ಇಬ್ಬರು ಇನ್ನೂ ₹410 ಕೋಟಿ ಮೊತ್ತದ ವಂಚನೆ ನಡೆಸಿದ್ದಾರೆ. ಈ ಮೂಲಕ ₹102.50 ಕೋಟಿ ಮೊತ್ತದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಂಡಿದ್ದಾರೆ. ರೇವತಿ, ಪ್ರತಾಪ್, ಇರ್ಬಾಜ್ ಮತ್ತು ನಫೀಜ್ ಅವರನ್ನು ಇದೇ ಜನವರಿಯಲ್ಲಿ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ತೌಕೀರ್ ಮತ್ತು ಜಾಕೀರ್ ನಗರದ 69ನೇ ನಗರ ಸಿವಿಲ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಮಾಹಿತಿ ನೀಡಿವೆ.

ಈಚೆಗೆ ನ್ಯಾಯಾಲಯವು ಈ ಇಬ್ಬರ ಜಾಮೀನು ಅರ್ಜಿಗಳನ್ನು ವಜಾ ಮಾಡಿತ್ತು. ಅದರ ಬೆನ್ನಲ್ಲೇ ಜಾಕೀರ್ ವಿದೇಶಕ್ಕೆ ಪರಾರಿಯಾಗಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ ತೌಕೀರ್ ಅವರನ್ನು ಬಂಧಿಸಲಾಗಿದೆ. ಆರೋಪಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ತೌಕೀರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯು ತಿಳಿಸಿದೆ.

ವಂಚನೆಗೆ ವ್ಯವಸ್ಥಿತ ಜಾಲ

*ಆರೋಪಿಗಳು ಖೊಟ್ಟಿ ವಿಳಾಸ ನೀಡಿ ಬಾಡಿಗೆ ಮತ್ತು ಭೋಗ್ಯ ಕರಾರು ಪತ್ರ ಪಡೆದುಕೊಳ್ಳುತ್ತಿದ್ದರು. ಈ ಪತ್ರಗಳನ್ನು ನೋಂದಣಿ ಮಾಡಿಸುತ್ತಿದ್ದರು. ಆ ವಿಳಾಸದಲ್ಲಿ ಇನ್ಯಾರದೋ ಪ್ಯಾನ್ ಮತ್ತು ಆಧಾರ್ ವಿವರ ಬಳಸಿಕೊಂಡು ಏಕವ್ಯಕ್ತಿ ಮಾಲೀಕತ್ವ ಅಥವಾ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ ಕಂಪನಿಗಳನ್ನು ಆರಂಭಿಸುತ್ತಿದ್ದರು

* ಬಾಡಿಗೆ ಕರಾರು ಪತ್ರ ಕಂಪನಿ ನೋಂದಣಿ ಪತ್ರ ನೀಡಿ ಜಿಎಸ್ಟಿ ನೋಂದಣಿ ಮಾಡಿಸುತ್ತಿದ್ದರು. ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಲು ಈ ಜಿಎಸ್ಟಿ ನಂಬರ್ಗಳನ್ನೇ ಬಳಸಿಕೊಳ್ಳುತ್ತಿದ್ದರು

* ಆರೋಪಿಗಳು ಬೇರೆ–ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಹತ್ತಾರು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು. ಅವುಗಳಲ್ಲೇ ಕೆಲವನ್ನು ಸೇವಾದಾತ ಕಂಪನಿಗೆ ಕೆಲವನ್ನು ಮಧ್ಯಸ್ತಿಕೆ ಕಂಪನಿಗೆ ಮತ್ತು ಇನ್ನೂ ಕೆಲವನ್ನು ಅಂತಿಮ ಖರೀದಿದಾರ ವ್ಯಕ್ತಿ/ಕಂಪನಿ ಎಂದು ತೋರಿಸುತ್ತಿದ್ದರು

* ಸಿಮೆಂಟ್ ಕಬ್ಬಿಣದ ಸರಳು ಝಿಂಕ್ ಶೀಟ್ ಮತ್ತು ಕೊಳವೆ–ಕೊಳಾಯಿಯಂತಹ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸುತ್ತಿದ್ದರು. ಈ ಇನ್ವಾಯ್ಸ್ಗಳನ್ನು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾಯಿಸುತ್ತಿದ್ದರು. ಆ ಇನ್ವಾಯ್ಸ್ಗಳ ಆಧಾರದಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳುತ್ತಿದ್ದರು

* ನಕಲಿ ಇನ್ವಾಯ್ಸ್ ಮತ್ತು ಅಕ್ರಮ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದು ನೋಟಿಸ್ ನೀಡುತ್ತಿದ್ದಂತೆಯೇ ಆ ಕಂಪನಿಗಳ ನೋಂದಣಿಯನ್ನು ಆರೋಪಿಗಳು ರದ್ದುಪಡಿಸುತ್ತಿದ್ದರು. ನಂತರ ಹೊಸ ಕಂಪನಿ ಆರಂಭಿಸುತ್ತಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.