ಬೆಂಗಳೂರು: ‘ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆ ತೀವ್ರ ಹಿನ್ನಡೆ ಉಂಟಾಗಿದೆ’ ಎಂದು ಬಿಜೆಪಿಯ ಗುರುರಾಜ ಗಂಟಿಹೊಳೆ ಅವರು ವಿಧಾನಸಭೆಯಲ್ಲಿ ಗುರುವಾರ ಖಾಸಗಿ ನಿರ್ಣಯ ಮಂಡಿಸಿ, ‘ವಿಶಿಷ್ಟ ಅಧಿಕಾರ ಇರುವ ಮಂಡಳಿ ರಚಿಸಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಯೋಜನಾ ಸಚಿವ ಡಿ. ಸುಧಾಕರ್, ‘ಈ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತರುತ್ತೇನೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಜನಪ್ರತಿನಿಧಿಗಳ ಸಭೆ ನಡೆಸುತ್ತೇವೆ. ಅಲ್ಲಿ ಬರುವ ಸಲಹೆ-ಶಿಫಾರಸುಗಳ ಆಧಾರದಲ್ಲಿ ಪ್ರತ್ಯೇಕ ನೀತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ನಿರ್ಣಯ ಮಂಡಿಸಿ ಮಾತನಾಡಿದ ಗಂಟಿಹೊಳೆ, ‘ಕರಾವಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬೇಡ. ಬದಲಿಗೆ ಅಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ನೀತಿ-ನಿರೂಪಣೆಗಳಲ್ಲಿ ಸಮಸ್ಯೆ ಆಗುತ್ತಿದೆ’ ಎಂದರು.

‘ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರತ್ಯೇಕ ಅಧಿಕಾರಯುತ ಮಂಡಳಿ ರಚಿಸಬೇಕು. ಇಲ್ಲದಿದ್ದರೆ ಸಿಆರ್ಝಡ್ ಹೊರತಾಗಿಯೂ ಆದೇಶ ಮಾಡುವಂತೆ ಅಧಿಕಾರ ಕಲ್ಪಿಸಲು ‘ಕರಾವಳಿ ಅಭಿವೃದ್ಧಿ ಮಂಡಳಿ ಕಾಯ್ದೆ 2023’ಕ್ಕೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.

‘ಅನ್ಯ ಭಾಗಕ್ಕೆ ಅನ್ವಯ ಆಗುವಂತಹ ಕನಿಷ್ಠ 100 ಸಮಸ್ಯೆಗಳನ್ನು ಕರಾವಳಿ ಭಾಗದಲ್ಲಿ ಗುರುತಿಸಬಹುದು. ಕಡಲು ಕೊರೆತ, ಅತಿವೃಷ್ಟಿ, ಅಪಾಯಕಾರಿ ಮೀನುಗಾರಿಕೆ ಸೇರಿದಂತೆ ವಿಭಿನ್ನ ಭೌಗೋಳಿಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ’ ಎಂದರು.

ದನಿಗೂಡಿಸಿದ ಕಾಂಗ್ರೆಸ್ನ ಅಶೋಕ್ ಕುಮಾರ್ ರೈ, ‘ರಾಜ್ಯದ ಕರಾವಳಿ ಭಾಗದಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸಿಆರ್ಝಡ್ ನಿಯಮಗಳಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆ ಆಗುತ್ತಿದೆ. ಮುಂಬೈ ಮಾದರಿಯಲ್ಲಿ ಇಲ್ಲಿಯೂ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಅಗತ್ಯ ನೀತಿ-ನಿರೂಪಣೆ ಜತೆಗೆ ಅನುದಾನ ಒದಗಿಸಬೇಕು’ ಎಂದರು.

ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, ‘ಯಾವುದೇ ಆರ್ಥಿಕ ಅನುದಾನ ಕೇಳದೆ ನೀತಿ ಕೇಳುತ್ತಿದ್ದೀರಿ. ಇದನ್ನು ಸ್ವಾಗತಿಸುತ್ತೇನೆ. ಸರ್ಕಾರ ಈಗಾಗಲೇ ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ (ಲೀಪ್) ಜಾರಿ ಮಾಡುತ್ತಿದೆ. ಅದರಡಿ ಯಾವುದೇ ಸಲಹೆಗಳನ್ನು ಆ ಭಾಗದ ಶಾಸಕರು ನೀಡಬಹುದು. ಅದನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.