ಹಗರಿಬೊಮ್ಮನಹಳ್ಳಿ: ಇಲ್ಲಿನ ಪುರಸಭೆ ಅಧ್ಯಕ್ಷರ ಚುನಾವಣೆ ಏ.30ರಂದು ನಿಗದಿಯಾಗಿದ್ದು, ಬಿಜೆಪಿ ಪಕ್ಷದ ಸದಸ್ಯರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಸೋಮವಾರ ಮಂಡಲ ಅಧ್ಯಕ್ಷ ಬೆಣ್ಣೆಕಲ್ಲು ಪ್ರಕಾಶ್ ಅವರು ವಿಪ್ ಜಾರಿ ಮಾಡಿದ್ದಾರೆ.

ಪುರಸಭೆಯಲ್ಲಿ ಒಟ್ಟು 23ಜನ ಸದಸ್ಯರಿದ್ದು, 12 ಜನ ಕಾಂಗ್ರೆಸ್ ಹಾಗೂ 11 ಜನ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.

ಮೊದಲ 30 ತಿಂಗಳ ಅವಧಿಯ ಮೀಸಲಾತಿ ಅಧ್ಯಕ್ಷ ಸ್ಥಾನ ‘ಒಬಿಸಿ-ಎ’ ಗೆ ಒಲಿದಿತ್ತು. ಕಾಂಗ್ರೆಸ್ನಿಂದ ಎಂ.ಮರಿರಾಮಪ್ಪ ಹಾಗೂ ಬಿಜೆಪಿಯಿಂದ ಬಣಕಾರ ಸುರೇಶ್ ಸ್ಪರ್ಧಿಸಿದ್ದರು. ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದರಿಂದ ಕಾಂಗ್ರೆಸ್ಗೆ ಅಧ್ಯಕ್ಷ ಸ್ಥಾನ ಸುಲಭವಾಗಿ ಒಲಿದಿತ್ತು. ಪಕ್ಷಾಂತರದಿಂದಾಗಿ ಆಗ ಬಿಜೆಪಿ ಪದಾಧಿಕಾರಿಗಳು ಭಾರಿ ಮುಖಭಂಗ ಅನುಭವಿಸಿದ್ದರು.

ಎಂ.ಮರಿರಾಮಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣೆ ಎದುರಾಗಿದೆ. ಬಿಜೆಪಿ ಮತ್ತೊಮ್ಮೆ ಬಣಕಾರ ಸುರೇಶ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಇದರ ಪೂರ್ವಭಾವಿಯಾಗಿ ಪಕ್ಷ ಮುಜುಗರದಿಂದ ತಪ್ಪಿಸಿಕೊಳ್ಳಲು ಎಲ್ಲ 11ಜನರಿಗೆ ವಿಪ್ ನೀಡಲು ನಿರ್ಧರಿಸಿದೆ. ಪಕ್ಷದ ಕಚೇರಿಯಲ್ಲಿ ಐದು ಜನರಿಗೆ ವಿಪ್ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಬೆಣ್ಣೆಕಲ್ಲು ಪ್ರಕಾಶ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ, ವಿಶ್ವಾಸದಿಂದ ಇದ್ದುದರಿಂದ ವಿಪ್ ನೀಡಿರಲಿಲ್ಲ. ಈಗ ಪರಿಸ್ಥಿತಿ ಬೇರೆಯಾಗಿದೆ, ಪಕ್ಷದ ಮೂರು ಜನ ಸದಸ್ಯರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ರಾಜ್ಯಾಧ್ಯಕ್ಷರ ಆದೇಶದಂತೆ ವಿಪ್ ಆದೇಶದ ಪತ್ರವನ್ನು ನೀಡಲಾಗುತ್ತಿದೆ. ಕೆಲವರ ಮನೆಗೂ ತಲುಪಿಸಲಾಗುವುದು. ವಿಪ್ ಉಲ್ಲಂಘಿಸಿದರೆ, ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು, ಅವರ ಸದಸ್ಯತ್ವ ರದ್ದುಗೊಳಿಸುವಂತೆ ಹೋರಾಟ ನಡೆಸಲಾಗುವುದು ಎಂದರು.

ಪುರಸಭೆ ಸದಸ್ಯರಾದ ಕೆ.ಎಂ.ನವೀನ್ಕುಮಾರ್, ಜೋಗಿ ಹನುಮಂತಪ್ಪ, ದೀಪಕ್ ಸಾ ಕಠಾರೆ, ನಾಗರಾಜ ಜನ್ನು, ಬಣಕಾರ ಸುರೇಶ್, ಮುಖಂಡರಾದ ಮಂಜುನಾಥ ಹಿರೇಮಠ, ಕೋಗಳಿ ಹನುಮಂತಪ್ಪ, ದಿವಾಕರಗೌಡ, ರವೀಂದ್ರಗೌಡ, ಸಂದೀಪ್ ಶಿವಮೊಗ್ಗ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-25-1972042452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.