ಹಳಿಯಾಳ: ‘ಪ್ರವಾಸಿಗರ ಅನುಕೂಲಕ್ಕಾಗಿ 100ಕ್ಕಿಂತ ಹೆಚ್ಚು ಯಾತ್ರಿ ನಿವಾಸ ಪ್ರವಾಸೋದ್ಯೋಮ ಇಲಾಖೆಯಿಂದ ನಿರ್ಮಿಸಲು ನಿರ್ಣಯಿಸಲಾಗಿದೆ. ಕರಾವಳಿಯ ಕಡಲತೀರಗಳನ್ನು ಅಭಿವೃಧ್ದಿಪಡಿಸಲಾಗುವುದು’ ಎಂದು ಕಾನೂನು ಸಂಸದೀಯ ವ್ಯವಹಾರಗಳು ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಸಮಾವೇಶ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಪ್ರವಾಸೋದ್ಯಮವಾಗಿ ಸಾಕಷ್ಟು ಬೆಳೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಕಡಿಮೆಯಾಗಿದೆ ಕರಾವಳಿ ಭಾಗದಲ್ಲಿ ಸಾಕಷ್ಟು ಪುಣ್ಯಕ್ಷೇತ್ರಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ದಾಸೋಹ ವಸತಿ ನೀಡಿ ಪ್ರವಾಸಿಗರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಾಕಷ್ಟು ಕಲೆ ಚಿತ್ರಕಲೆಯನ್ನು ಗತವೈಭವ ಸಾರುವ ಪುರಾತನ ಶಿಲ್ಪಗಳು ಇವೆ ನಮ್ಮ ಭವಿಷ್ಯದ ಮಕ್ಕಳ ಜ್ಞಾನ ಬೆಳೆಯಬೇಕು’ ಎಂದು ಹೇಳಿದರು.

‘ಹಳಿಯಾಳ ಪಟ್ಟಣದ ನಿಸರ್ಗಧಾಮದ ಅಭಿವೃದ್ದಿಗಾಗಿ ₹2ಕೋಟಿ ಮಂಜೂರಿ ಮಾಡಲಾಗಿದೆ. ಕ್ಯಾಸರಲಾಕ್ ನೇಚರ್ ಕ್ಯಾಂಪನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಿ ದೊಡ್ಡ ಪ್ರವಾಸಿ ತಾಣ ಮಾಡಲಾಗುವುದು’ ಎಂದರು.

ಶಾಸಕ. ಆರ್.ವಿ. ದೇಶಪಾಂಡೆ ಮಾತನಾಡಿ, ‘ಪ್ರವಾಸೋದ್ಯಕ್ಕೆ ಸರಕಾರ ಹೆಚ್ಚಿನ ಆದ್ಯತೆ ಕೊಡಬೇಕು. ಸಮಾವೇಶ ಕೇಂದ್ರದಲ್ಲಿ ಒಳ್ಳೆಯ ಕಲೆ ಸಾಂಸ್ಕೃತಿಕಕಾಯ೯ಕ್ರಮಗಳು ನಿರಂತರ ನಡೆದು ಕಲೆಯನ್ನು ಬೆಳೆಸಬೇಕು ಹಾಗೂ ನಿವ೯ಹಣೆಯೂ ಸಹ ಸರಿಯಾಗಿ ಆಗಬೇಕು. ಚರ್ಚಾಕೂಟಗಳು ನಡೆಯಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ಗೌರಿ ಭಟ್ ಮಾತನಾಡಿದರು. ಬಾಷ್ ಇಂಡಿಯಾ ಫೌಂಡೇಶನ್ ವತಿಯಿಂದ ಪಟ್ಟಣದ ಆಯ್ದ 5 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಕೊಠಡಿಗಳನ್ನು ಹಸ್ತಾಂತರಿಸಲಾಯಿತು.

ಬಾಷ್ ಇಂಡಿಯಾ ಫೌಂಡೇಶನ್ನ ಅದಿಕಾರಿ ಎಂ. ಪುಂಡಲೀಕ ಕಾಮತ, ಸುದಶ೯ನ, ಸಮಾವೇಶ ಕೇಂದ್ರ ಕಟ್ಟಡದ ವಿನ್ಯಾಸಕ ವಿಶ್ವನಾಥ ಇದ್ದರು. ಕುದ್ರೊಳ್ಳಿ ಗಣೇಶ ಹಾಗೂ ಬಳಗದವರಿಂದ ಜಾದು ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-20-8329787

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.