ಹರಪನಹಳ್ಳಿ: ‘ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಬದುಕು ಹಾಗೂ ಸಮಾನತೆಯ ಚಿಂತನೆಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕ’ ಎಂದು ಬಿಜೆಪಿ ಮುಖಂಡ ಜಿ.ನಂಜನಗೌಡ ತಿಳಿಸಿದರು.

ಪಟ್ಟಣದ ಬಾಪೂಜಿನಗರದಲ್ಲಿ ರಾಜ್ಯ ಬಿಜೆಪಿ ನಿರ್ದೇಶನದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೋರ್ಚಾದ ವತಿಯಿಂದ ಅಂಬೇಡ್ಕರ್ ಜಯಂತಿ ನಿಮಿತ್ತ ಅವರ ಭಾವಚಿತ್ರವಿರುವ ಸ್ಥಳವನ್ನು ಸ್ವಚ್ಛಗೊಳಿಸಿ, ದೀಪ ಬೆಳಗಿಸಿ ಅವರು ಮಾತನಾಡಿದರು.

‘ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ನೆಲೆಗಟ್ಟಿನಲ್ಲಿ ಬದುಕು ರೂಪಿಸಿಕೊಂಡಿದ್ದ ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು’ ಎಂದರು.

ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, ‘ಅಂಬೇಡ್ಕರ್ ಕೇವಲ ಒಂದು ಜನಾಂಗಕ್ಕೆ ಸೀಮಿತರಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವಯುತ ಬದುಕು ಕಟ್ಟಿಕೊಳ್ಳಲು ಸಂವಿಧಾನ ರಚಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಂಬೇಡ್ಕರ್ ಅವರ ಸ್ಮಾರಕಗಳು ಹಾಗೂ ಜನ್ಮಸ್ಥಳವನ್ನು ಅಭಿವೃದ್ಧಿಪಡಿಸುವ ಮೂಲಕ ಸೂಕ್ತ ಗೌರವ ನೀಡಿದೆ’ ಎಂದರು.

ಕಂಚಿಕೇರಿ ಕೆಂಚಣ್ಣ, ವಕೀಲರಾದ ಮೈದೂರು ಮಲ್ಲಿಕಾರ್ಜುನ, ಕೆ.ಲಿಂಗಾನಂದ, ಓಂಕಾರ ಗೌಡ್ರು, ಚನ್ನನಗೌಡ, ಕುಸುಮ ಜಗದೀಶ್, ಮುನೆಗೌಡ, ತೆಲಿಗಿ ಗಂಗಾಧರ್, ನಾಗರಾಜ್, ಎಸ್.ಆರ್.ಅಶೋಕ್, ಶ್ರೀಪತಿ, ಯಡಿಹಳ್ಳಿ ಭಾಗ್ಯಮ್ಮ ಹಾಗೂ ಬಾಪೂಜಿನಗರದ ನಿವಾಸಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.