ಹರಿಹರ: ‘ಸಮಾಜದ ಹಿತದೃಷ್ಟಿಯಿಂದ ಲೆಕ್ಕಕೊಡಿ ಎಂದು ಬೀದಿಯಲ್ಲಿ ಹೋರಾಟ ಮಾಡುವುದಕ್ಕಿಂತ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸುಕೊಳ್ಳುವುದು ಸೂಕ್ತ’ ಎಂದು ಪಂಚಮಸಾಲಿ ಸಮುದಾಯದ ಹಿರಿಯರಾದ ಹೊಳೆಸಿರಿಗೆರಿಯ ಎನ್.ಜಿ. ನಾಗನಗೌಡ ಮನವಿ ಮಾಡಿದ್ದಾರೆ.

’ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಈಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಸಮಾಜದಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಮಠದ ಆಡಳಿತ ನಡೆಸುವವರು ಅನೇಕ ಸವಾಲುಗಳನ್ನು ಎದುರಿಸಿ ಇಡೀ ಸಮುದಾಯ ತಲೆ ಎತ್ತಿ ನಿಲ್ಲುವಂತಹ ಮಠವನ್ನು ನಿರ್ಮಿಸಬೇಕು. ಇಂತಹ ಸಂದರ್ಭದಲ್ಲಿ ತಪ್ಪು ತಿಳುವಳಿಕೆಯಿಂದ ಕೆಲವರು ಬೀದಿಯಲ್ಲಿ ಲೆಕ್ಕಕೊಡಿ ಎಂದು ಚಳುವಳಿ ನಡೆಸುತ್ತಿರುವುದು ಸರಿಯಲ್ಲ‘ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಲೆಕ್ಕ ಕೇಳುತ್ತಿರುವ ನಾಯಕರು ನಮ್ಮೊಂದಿಗೆ ಬಂದರೆ, ಟ್ರಸ್ಟಿಗಳಿಂದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಹಾಗೂ ಲೆಕ್ಕ ನೀಡುವ ವ್ಯವಸ್ಥೆ ಮಾಡಬಹುದು. ಈ ಮೂಲಕ ವಿವಾದಾತ್ಮಕ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರು ಸಹಕಾರ ನೀಡುವಂತೆ ಸಮಾಜದ ಮುಖಂಡರಿಗೆ ಮನವಿ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-43-1654933250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.