ಹಾವೇರಿ: ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು 50 ವರ್ಷದ ರಾಜಕೀಯ ಜೀವನ ಪೂರೈಸಿರುವ ನಿಮಿತ್ತ ಚಿತ್ರದುರ್ಗದಲ್ಲಿ ಮೇ 9ರಂದು ‘ಬಿಎಸ್ವೈ ಅಭಿಮಾನೋತ್ಸವ’ ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ಚರ್ಚಿಸಲು ನಗರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ನಗರದ ಕಾಗಿನೆಲೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಸದರು, ಮಾಜಿ ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದು, ಜನರ ಶಕ್ತಿಯನ್ನು ತೋರಿಸಿ ಬಿಜೆಪಿ ಸರ್ಕಾರ ತರಲು ಮೊದಲ ಮೆಟ್ಟಿಲು ಅಭಿಮಾನೋತ್ಸವ’ ಎಂದು ಘೋಷಿಸಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಆದರ್ಶಗಳನ್ನು ಬಿಡದೇ ಅದರ ಪಾಲನೆಯಾಗಿ ಅಧಿಕಾರ ಉಪಯೋಗಿಸಿಕೊಂಡವರು ಯಡಿಯೂರಪ್ಪನವರು’ ಎಂದರು.

‘ಯಡಿಯೂರಪ್ಪ ಅವರದ್ದು ದಣಿವರಿಯದ ಹೋರಾಟ. ಹಾವೇರಿಗೆ ಬಂದು ಕಾರ್ಯಕ್ರಮ ಮಾಡಿ, ಬೆಂಗಳೂರಿಗೆ ಹೋಗಿ ಅಲ್ಲೊಂದು ಕಾರ್ಯಕ್ರಮ, ಅಲ್ಲಿಂದ ಬೆಳಗಾವಿಗೆ ಬಂದು ಅಲ್ಲೊಂದು ಕಾರ್ಯಕ್ರಮ. ನಿರಂತರ ಓಡಾಟ ಮಾಡುತ್ತಿದ್ದರು. 1994ರಲ್ಲಿ ಚುನಾವಣೆಯಾಗಿ ಹದಿನೈದು ದಿನ ಕಳೆದಿತ್ತು. ಯಡಿಯೂರಪ್ಪ ಅವರು ಹರಿಹರದಲ್ಲಿ ರೈತರ ಪರವಾಗಿ ಹೋರಾಟ ಮಾಡಿದ್ದರು’ ಎಂದು ಹೇಳಿದರು.

‘ಯಡಿಯೂರಪ್ಪ ಅವರ ಸಾಕಷ್ಟು ಹೆಜ್ಜೆ ಗುರುತುಗಳು ರಾಜ್ಯದಲ್ಲಿವೆ. ಈಗ ಬಿಜೆಪಿಗೆ ಅವರೇ ಪ್ರೇರಣೆ, ಶಕ್ತಿ. ಅವರ ಆಶೀರ್ವಾದ ತುಂಬುವ ಅವಶ್ಯಕತೆ ಇದೆ. ಬಹಳ ಒಳ್ಳೆಯ ಮುಹೂರ್ತದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಕಷ್ಟದಲ್ಲಿ ಸಿಲುಕುವ ಸಂದರ್ಭದಲ್ಲಿ, ಬಿಜೆಪಿ ಮತ್ತೆ ಪುಟಿದೇಳಲು ಈ ಕಾರ್ಯಕ್ರಮ ನಡೆಯುತ್ತಿದೆ. ರಾಜಕೀಯವಾಗಿ ನಾವು ಕಾಂಗ್ರೆಸ್ನ ಎಲ್ಲ ವಿಚಾರಧಾರೆಗಳನ್ನು, ಗ್ಯಾರಂಟಿಗಳನ್ನು ಮೆಟ್ಟಿ ನಮ್ಮ ಸರ್ಕಾರ ಮಾಡಲು ಮೊದಲನೆ ಹೆಜ್ಜೆಯೇ ಈ ಅಭಿಮಾನೋತ್ಸವ’ ಎಂದು ಬೊಮ್ಮಾಯಿ ಹೇಳಿದರು.

‘ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕವು ಸದಾಕಾಲವೂ ಶಕ್ತಿ ತುಂಬಿದೆ. ರಾಜಕೀಯವಾಗಿ ಅತೀ ಹೆಚ್ಚು ಸ್ಥಾನ ಕೊಟ್ಟಿದ್ದು ಉತ್ತರ ಕರ್ನಾಟಕ. ಬಿಜೆಪಿಗೆ ಸ್ಥಾನ ಕಡಿಮೆಯಾದಾಗಲೂ ಉತ್ತರ ಕರ್ನಾಟಕದ ನಾಯಕರು ಶಕ್ತಿ ತುಂಬಿದರು. ಮೇ 9ರಂದು ಹಾವೇರಿ ಜಿಲ್ಲೆಯಿಂದ 1 ಲಕ್ಷ ಜನರನ್ನು ಸೇರಿಸುವ ಪಯತ್ನ ಮಾಡಬೇಕು. ನಮ್ಮ ಅಭಿಮಾನದ ಶಕ್ತಿಯನ್ನು ತೋರಿಸಬೇಕು’ ಎಂದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ರಾಜ್ಯ ಕಂಡ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪನವರು. ಅವರ 50 ವರ್ಷದ ರಾಜಕೀಯ ಜೀವನವನ್ನು ಅಭಿಮಾನೋತ್ಸವದ ಮೂಲಕ ಆಚರಿಸಲಾಗುತ್ತಿದೆ. 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಬಿ.ಸಿ. ಪಾಟೀಲ, ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ಡಿ.ಎಂ. ಸಾಲಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.