ಹಾವೇರಿ: ‘ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳ ಹಣ ಪಾವತಿಯಲ್ಲಿ ಹಗರಣವಾಗಿದೆ. ರಾಣೆಬೆನ್ನೂರಿನಲ್ಲಿ ಶ್ರೀಮಂತರಿಗೆ ಮನೆ ಕಟ್ಟಿಸಿಕೊಡಲಾಗಿದೆ. ಈ ಅಕ್ರಮದಲ್ಲಿ ಹಲವರು ಭಾಗಿಯಾಗಿದ್ದು, ಸೂಕ್ತ ತನಿಖೆ ಮಾಡಿಸಬೇಕು’ ಎಂದು ಶಾಸಕರಾದ ಶ್ರೀನಿವಾಸ ಮಾನೆ ಹಾಗೂ ಪ್ರಕಾಶ ಕೋಳಿವಾಡ ಆಗ್ರಹಿಸಿದರು.‘

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ವಿಷಯ ಪ್ರಸ್ತಾಪಿಸಿದ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ‘ಫಲಾನುಭವಿ ಖಾತೆಯ ಬದಲು ಗುತ್ತಿಗೆದಾರನಿಗೆ ಹಣ ಹೋಗಿದೆ’ ಎಂದು ದೂರಿದರು.

‘ಶಿಗ್ಗಾವಿ ತಾಲ್ಲೂಕಿನಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ಆಗಿದೆ. ಹಾನಗಲ್ ಸೇರಿದಂತೆ ಬಹುತೇಕ ತಾಲ್ಲೂಕಿನಲ್ಲೂ ಅಕ್ರಮ ನಡೆದಿದೆ. ಈ ಬಗ್ಗೆಯೂ ತನಿಖೆ ಮಾಡಬೇಕು’ ಎಂದು ಹೇಳಿದರು.

ಧ್ವನಿಗೂಡಿಸಿದ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ‘ಇದು ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲ. ಐಷಾರಾಮಿಯ ಪ್ರೆಸ್ಟೀಜ್ ಡೆವೆಲಪರ್ಸ್. ಏಕೆಂದರೆ, ರಾಣೆಬೆನ್ನೂರಿನ ಸದಾಶಿವನಗರ, ಇಂದಿರಾನಗರ, ಡಾಲರ್ಸ್ ಕಾಲೊನಿಯಲ್ಲೂ ಇವರು ಮನೆ ಕಟ್ಟಿಸಿಕೊಂಡಿದ್ದಾರೆ. ಶ್ರೀಮಂತರ ಜಾಗದಲ್ಲೂ ಮಂಡಳಿಯ ಮನೆಗಳಿರುವುದು ಅಕ್ರಮಕ್ಕೆ ಸಾಕ್ಷಿ’ ಎಂದು ಒತ್ತಾಯಿಸಿದರು.

ಸಭೆಯಲ್ಲಿದ್ದ ಸಚಿವ ಶಿವಾನಂದ ಪಾಟೀಲ, ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಮೇನಲ್ಲಿ ಹಾವೇರಿಗೆ ನೀರು ಕೊಡಿ: ಕುಡಿಯುವ ನೀರು ಯೋಜನೆಗಳ ಪರಿಶೀಲನೆ ನಡೆಸಿದ ಸಚಿವ ಪಾಟೀಲ, ‘₹ 32 ಕೋಟಿ ಖರ್ಚಾದರೂ ಹಾವೇರಿ ಜನರಿಗೆ ನೀರು ಕೊಡಲು ಆಗಿಲ್ಲ. ಇದರಿಂದ ನನ್ನ ಮರ್ಯಾದೆ ಹೋಗುತ್ತಿದೆ. ಏಪ್ರಿಲ್ ಅಂತ್ಯದಲ್ಲಿ ಕಾಮಗಾರಿ ಮುಗಿಯಬೇಕು. ಮೇನಲ್ಲಿ ಹಾವೇರಿ ಜನರಿಗೆ ನೀರು ನೀಡಬೇಕು’ ಎಂದು ತಾಕೀತು ಮಾಡಿದರು.

ಕಳಪೆ ಬೀಜ ಪ್ರಸ್ತಾವ: ‘ಜಿಲ್ಲೆಯಲ್ಲಿ ಕಳಪೆ ಬೀಜ ಮಾರಾಟ ಸಂಬಂಧ 12 ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಸಚಿವ ಪಾಟೀಲ, ‘ಜಿಲ್ಲೆಗೆ ಅಪಖ್ಯಾತಿ ತಂದಿರುವ ಕಳಪೆ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಾಯ್ದೆ ತಿದ್ದುಪಡಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದರು.

ಅಡಿಕೆ ಪ್ರದೇಶ ಸಮೀಕ್ಷೆ: ಸಭೆಯಲ್ಲಿದ್ದ ಶಾಸಕ ರುದ್ರಪ್ಪ ಲಮಾಣಿ, ‘ರಾಣೆಬೆನ್ನೂರು ಹಾಗೂ ಹಾವೇರಿ ತಾಲ್ಲೂಕನ್ನು ಅಡಿಕೆ ಬೆಳೆ ಪ್ರದೇಶವೆಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಸಿದ್ದರಾಮಯ್ಯ ಬರಗಿಮಠ, ‘1989ರ ವರದಿಯಂತೆ ಹಾವೇರಿ–ರಾಣೆಬೆನ್ನೂರು ತಾಲ್ಲೂಕುಗಳನ್ನು ಅಡಿಕೆ ಪ್ರದೇಶದಿಂದ ಹೊರಗಿಡಲಾಗಿದೆ. ಈ ಕ್ರಮವನ್ನು ಪುನಃ ಪರಿಶೀಲಿಸುವಂತೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಕೋರಲಾಗಿದೆ. ಸದ್ಯದಲ್ಲೇ ಜಿಲ್ಲೆಗೆ ತಂಡ ಭೇಟಿ ನೀಡಲಿದೆ’ ಎಂದು ತಿಳಿಸಿದರು.

ಸಚಿವ ಪಾಟೀಲ, ‘ರೋಗ ಬಂದು ಮಾವಿನ ಬೆಳೆ ಹಾಳಾಗಿದೆ. ರೈತರಿಗೆ ವಿಮೆ ಕೊಡಿಸಿ’ ಎಂದು ಹೇಳಿದರು.

ಉಪನಿರ್ದೇಶಕ, ‘ಜಿಲ್ಲೆಯಲ್ಲಿ ಶೇ 80ರಷ್ಟು ಬೆಳೆ ಹಾನಿಯಾಗಿದೆ. ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದರು.

ಡಿಎಫ್ಒ ವಿರುದ್ಧ ಆಕ್ರೋಶ: ಬುಡಪ್ಪನಹಳ್ಳಿ ಹಾಗೂ ಕಜ್ಜರಿ ರಸ್ತೆಯಲ್ಲಿ ಸಸಿ ನೆಟ್ಟಿರುವ ಪ್ರಕರಣ ಸಂಬಂಧ ಡಿಎಫ್ಒ ಅವರನ್ನು ಸಚಿವ ತರಾಟೆಗೆ ತೆಗೆದುಕೊಂಡರು. ‘ಸಸಿ ಹಚ್ಚುವುದರಲ್ಲಿ ಅಕ್ರಮ ನಡೆಯುತ್ತಿದೆ’ ಎಂದು ಆರೋಪಿಸಿದರು. ತನಿಖೆ ನಡೆಸಿ ವರದಿ ನೀಡುವಂತೆ ಹಾಗೂ ತಪ್ಪಿತಸ್ಥ ಆರ್ಎಫ್ಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಿಜೇರಿಯನ್ ಮಾಡಲು ಲಂಚ: ‘ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಲು ವೈದ್ಯರು ಹಾಗೂ ಸಿಬ್ಬಂದಿ, ಲಂಚ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ನಾಮನಿರ್ದೇಶಿತ ಸದಸ್ಯರು ದೂರಿದರು.

ಶಾಸಕ ಶ್ರೀನಿವಾಸ ಮಾನೆ, ‘ಎಲ್ಲ ಕಡೆಯೂ ₹1 ಸಾವಿರದಿಂದ ₹5 ಸಾವಿರದವರೆಗೂ ಹಣ ಪಡೆಯುವ ದೂರುಗಳಿವೆ. ಹಣ ಪಡೆಯುವವರನ್ನು ಹಿಡಿಯುವುದು ಹೇಗೆ’ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ‘ನಿಖರ ದೂರು ಇದ್ದರೆ, ಕ್ರಮ ಜರುಗಿಸಲಾಗುವುದು’ ಎಂದರು.

ಶಾಸಕ ಬಸವರಾಜ ಶಿವಣ್ಣನವರ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.