ಮೈಸೂರು:'ಪೆಟ್ರೋಲ್-ಡೀಸೆಲ್ ದರ ಏರಿಸಿದ್ದಕ್ಕೆ ಕೇಂದ್ರ ಸರ್ಕಾರದ ಮೇಲೆ ಮುಗಿಬೀಳುತ್ತಿರುವ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳಿಗಾಗಿ ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ವಿದ್ಯುತ್, ಬಸ್ ಹಾಗೂ ಮದ್ಯದ ದರ ಎಷ್ಟು ಏರಿಸಿದ್ದೀರಿ ಎಂಬ ಪಟ್ಟಿ ಇಡಲಿ' ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಇಲ್ಲಿನ ಬೋಗಾದಿ ಮೈದಾನದಲ್ಲಿ ಭಾನುವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ‘ಜನರೊಂದಿಗೆ ಜನತಾದಳ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಯುದ್ಧದ ಕಾರಣಕ್ಕೆ ತೈಲ ಬೆಲೆ ಏರಿಕೆ ಆಗಿದೆ. ಸಿಂಗಾಪುರದಂತ ದೇಶದಲ್ಲೇ ಪೆಟ್ರೋಲ್ ದರ ₹245 ಇದೆ. ಪ್ರತಿ ದೇಶವೂ ಬೆಲೆ ಏರಿಸಿದೆ. ಯಾರಿಗಾದರೂ ಮೊದಲೇ ಯುದ್ಧದ ಕನಸು ಬಿದ್ದಿತ್ತ? ಕಾಂಗ್ರೆಸ್ ನಾಯಕರೇ ಈ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರು?' ಎಂದು ಪ್ರಶ್ನಿಸಿದರು.

'ಗ್ಯಾರಂಟಿಗಾಗಿ ಜನರಿಗೆ ತೆರಿಗೆ ಹೊರಿಸಿರುವ ಕಾಂಗ್ರೆಸ್ ನಾಯಕರಿಗೆ ಕೇಂದ್ರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ' ಎಂದು ಟೀಕಿಸಿದರು.

'ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ 75-80 ಸ್ಥಾನಗಳನ್ನು ಗೆಲ್ಲಲಿದೆ. ಅದಕ್ಕಾಗಿ ಜನರೊಂದಿಗೆ ಜನತಾದಳ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತಿದೆ' ಎಂದರು.

ಏತಕ್ಕಾಗಿ ಸಾಧನ ಸಮಾವೇಶ:

'19ರಂದು ತುಮಕೂರಿನಲ್ಲಿ ಕಾಂಗ್ರೆಸಿನವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಕಳೆದ 2 ವರ್ಷದಲ್ಲಿ 712 ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಪ್ರಜಾವಾಣಿ ವರದಿ ಓದಿದೆ. ಜನರ ಸುಲಿಗೆ ಮಾಡುವ ಅಧಿಕಾರಿಗಳನ್ನು ಸರ್ಕಾರ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದು ಗೊತ್ತಿದೆ. ಇಲವಾಲದಲ್ಲಿ ಚಿನ್ನದ ದರೋಡೆ ಮಾಡಿದ, ಪೊಲೀಸ್ ಕಚೇರಿಯಲ್ಲೇ ಅಸಭ್ಯ ವರ್ತನೆ ತೋರಿದ ಅಧಿಕಾರಿಯ ರಕ್ಷಣೆ ಮಾಡಿದೆ. ಇದನ್ನು ಹೇಳುವುದಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದೀರ' ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ಕೋರ್ ಸಮಿತಿ ಅಧ್ಯಕ್ಷ ಕೃಷ್ಣ ರೆಡ್ಡಿ, ಶಾಸಕ ಜಿ.ಡಿ. ಹರೀಶ್ ಗೌಡ ಇದ್ದರು.

ಸ್ವಪಕ್ಷೀಯ ಶಾಸಕ ಜಿ.ಟಿ. ದೇವೇಗೌಡ ಗೈರು

ಸ್ವಕ್ಷೇತ್ರದಲ್ಲಿ ನಡೆದ ಸಮಾವೇಶಕ್ಕೆ ಜೆಡಿಎಸ್ ಶಾಸಕ ಜಿ.ಡಿ. ದೇವೇಗೌಡ ಗೈರಾದರು. ಕಾರ್ಯಕ್ರಮದ ವೇದಿಕೆಯ ಬ್ಯಾನರ್ಗಳಲ್ಲಿ ಎಲ್ಲ ರಾಜ್ಯ- ಸ್ಥಳೀಯ ನಾಯಕರ ಚಿತ್ರಗಳಿದ್ದರೂ ಎಲ್ಲಿಯೂ ಜಿಟಿಡಿ ಚಿತ್ರ ಇರಲಿಲ್ಲ. ಕಾರ್ಯಕ್ರಮದಲ್ಲಿಯೂ ಯಾರು ಅವರ ಹೆಸರು ಪ್ರಸ್ತಾಪಿಸಲಿಲ್ಲ.

ಈ ಕುರಿತು ಕಾರ್ಯಕ್ರಮದ ವೇದಿಕೆಯಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದ ಎಚ್.ಡಿ. ಕುಮಾರಸ್ವಾಮಿ, 'ಕ್ಷೇತ್ರದಲ್ಲಿ ಗೊಂದಲಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುತ್ತೇವೆ. ಯಾವ ಒತ್ತಡಗಳಿಗೂ ಮಣಿಯುವುದಿಲ್ಲ. ಕಾರ್ಯಕರ್ತರಿಗೆ ಆದ ಅಗೌರವ ಸರಿಪಡಿಸುತ್ತೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.