ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಗಿ ಕಾದಿದ್ದ ಜನರಲ್ಲಿ ಮಂದಹಾಸ ಮೂಡಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಕಳಸ, ಶೃಂಗೇರಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೆ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಅಜ್ಜಂಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಬಯಲು ಸೀಮೆಯಾದ ಕಡೂರು ಮತ್ತು ತರೀಕೆರೆ ಸುತ್ತಮುತ್ತ ಮಳೆ ಇಲ್ಲ.
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆಯಲ್ಲಿ
11 ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ವಿಟ್ಲಪಡ್ನೂರಿನಲ್ಲಿ 10 ಸೆಂ.ಮೀ, ಕೆದಿಲ, ಕನ್ಯಾನದಲ್ಲಿ 8 ಸೆಂ.ಮೀ ಉಡುಪಿ ಜಿಲ್ಲೆಯ ಹೆರೂರು ಹಾಗೂ ಕಿರಿಮಂಜೇಶ್ವರದಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.
ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬಟ್ಟಪ್ಪಾಡಿಯಲ್ಲಿ ಕಡತ ಕೊರತೆ ತೀವ್ರಗೊಂಡಿದೆ. ಅಕ್ಟೋಬರ್ 2ರವರೆಗೆ ಮಳೆ ಮುಂದುವರಿಯಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ದಕ್ಷಿಣ ಕನ್ನಡ, ಉಡುಪಿ
ಜಿಲ್ಲೆಯಲ್ಲಿ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.
ಹಾರಂಗಿಯ ಒಳ ಹರಿವು ಏರಿಕೆ (ಮಡಿಕೇರಿ): ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಶನಿವಾರ ದಿನವಿಡೀ ಭಾರಿ ಮಳೆಯಾಗಿದೆ. ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ ಭಾಗಗಳಲ್ಲಿ ದಿನವಿಡೀ ಸಾಧಾರಣ ಮಳೆ ಸುರಿದಿದೆ.
ವಿರಾಜಪೇಟೆಯ ಬಿಟ್ಟಂಗಲ ಗ್ರಾಮದಲ್ಲಿ 5 ಸೆಂ.ಮೀ, ಬಲ್ಲಮಾವಟಿಯಲ್ಲಿ 4, ಕುಶಾಲನಗರದಲ್ಲಿ 3, ಗೋಣಿ
ಕೊಪ್ಪಲುವಿನಲ್ಲಿ 2, ಹಾರಂಗಿಯಲ್ಲಿ 1.5 ಸೆಂ.ಮೀನಷ್ಟು ಮಳೆ ಸುರಿದಿದ್ದು, ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಮಾರುಕೇರಿಯಲ್ಲಿ ಭೂಕುಸಿತ (ಕಾರವಾರ ವರದಿ): ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆ ಸುರಿದಿದೆ. ಕರಾವಳಿ ಭಾಗದಲ್ಲಿ ನಿರಂತರವಾಗಿ ವರ್ಷಧಾರೆ ಆಗಿದ್ದರೆ, ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಆಗಾಗ ಮಳೆಯಾಗಿದೆ. ಭಟ್ಕಳದ ಮಾರುಕೇರಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತು.
ಕಾರವಾರದಲ್ಲಿ ಗಾಳಿಯ ಅಬ್ಬರಕ್ಕೆ ಅರಬ್ಬಿ ಸಮುದ್ರದಲ್ಲಿ ಲಂಗರು ಹಾಕಿದ್ದ ಮಲ್ಪೆಯ ಎರಡು ಬೋಟ್‍ಗಳು ಕಡಲತೀರಕ್ಕೆ ಸಮೀಪ ಬಂದು ಮರಳಿನಲ್ಲಿ ಸಿಲುಕಿದ್ದವು. ಇನ್ನೊಂದು ಬೋಟ್ ಸಹಾಯದೊಂದಿಗೆ ಅವುಗಳನ್ನು ಸಮುದ್ರಕ್ಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.