ಕಲಬುರಗಿ: ಕಲ್ಯಾಣ ಕರ್ನಾಟಕದ ವಿವಿಧೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ, ಚಿಂಚೋಳಿ, ಕಾಳಗಿ ತಾಲ್ಲೂಕುಗಳಲ್ಲಿ ಮಳೆ ಸುರಿದಿದೆ. ಅಫಜಲಪುರ ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ 500 ಎಕರೆ ಜಮೀನಿನಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿವೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿಯಲ್ಲಿ ಸೋಮವಾರ ಸಿಡಿಲು ಬಡಿದು ಎರಡು ಹಸು, 20ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಜೋಗಿನ ಮನೆ ಬಳಿ ಮರ ಬಿದ್ದು 3 ಕಾರು ಜಖಂಗೊಂಡಿವೆ.

ಬೀದರ್ ಜಿಲ್ಲೆಯ ಭಾಲ್ಕಿ, ಕಮಲನಗರ, ಚಿಟಗುಪ್ಪ, ಔರಾದ್ನಲ್ಲಿ ಧಾರಾಕಾರ ಮಳೆಯಾಗಿದೆ. ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಹಾಗೂ ಬಾವಗಿ, ಕಮಠಾಣ ಗ್ರಾಮದಲ್ಲೂ ಮನೆಯ ಶೀಟುಗಳು ಹಾರಿ ಹೋಗಿವೆ.

ಆಣದೂರ ಸಮೀಪ ಬೀದರ್–ಹುಮನಾಬಾದ್ ಮುಖ್ಯರಸ್ತೆಗೆ ವಿದ್ಯುತ್ ಕಂಬ ಉರುಳಿ ಸಂಚಾರಕ್ಕೆ ತೊಡಕಾಯಿತು. ಬಿರುಗಾಳಿ ತೀವ್ರವಾಗಿದ್ದರಿಂದ ಜನ ಹೊರಗೆ ಬರಲು ಹಿಂಜರಿದರು.

ಔರಾದ್ ತಾಲ್ಲೂಕಿನ ಗಡಿಕುಶನೂರದಲ್ಲಿ ಮರ ಬಿದ್ದು ಹುಸೇನಸಾಬ್ ಅವರು ಸಾಕಿದ್ದ ಎತ್ತು ಮೃತಪಟ್ಟಿದೆ. ಭಾಲ್ಕಿ ತಾಲ್ಲೂಕಿನ ಜಮಖಂಡಿಯಲ್ಲಿ ಸಿಡಿಲು ಬಡಿದು ರೈತ ಶ್ರೀಧರ ಬೋರ್ಕುಡೆ ಅವರಿಗೆ ಸೇರಿದ ಎತ್ತು ಮೃತಪಟ್ಟಿದೆ. ಯಾದಗಿರಿ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.

ಬಳ್ಳಾರಿಯಲ್ಲಿ ಮಳೆ: ಮರ, ಕಂಬಗಳು ಧರೆಗೆ

ಬಳ್ಳಾರಿ ವರದಿ: ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಎರಡೂವರೆ ಗಂಟೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದವು.

ವಿವಿಧೆಡೆ ವಿದ್ಯುತ್ ಕಂಬಗಳುಉರುಳಿದ್ದು, ಬಳ್ಳಾರಿ ನಗರದಾದ್ಯಂತ ವಿದ್ಯುತ್ ಕಡಿತವಾಯಿತು. ಸಮಸ್ಯೆ ಸರಿಪಡಿಸಲು ಜೆಸ್ಕಾಂ ಸಿಬ್ಬಂದಿ ಪರದಾಡಿದರು. ಅಂಡರ್ಪಾಸ್ಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ನಗರದಲ್ಲಿ ಕನಿಷ್ಠ 500 ಮರಗಳು ಬಿದ್ದಿವೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಹೇಳಿದರು. 60 ಕಂಬಗಳು ಉರುಳಿ ಬಿದ್ದಿವೆ ಎಂದು ಜೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.