ಮಂಗಳೂರು: ಹೆನ್ರಿ ಮೆಂಡೋನ್ಸಾ ಅವರು ಎಚ್.ಎಂ. ಪೆರ್ನಾಲ್ ಎಂದೇ ಪರಿಚಿತರು. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಇವರದ್ದು ಅನುಪಮ ಸೇವೆ.

ಉಡುಪಿ ಜಿಲ್ಲೆಯ ಪೆರ್ನಾಲ್ನಲ್ಲಿ ಜನಿಸಿರುವ ಇವರು, ಶಿರ್ವದಲ್ಲಿ ಪದವಿ ಹಾಗೂ ಮುಂಬಯಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಇವರು ‘ಕಿಟಾಳ್’ ಎಂಬ ಕೊಂಕಣಿ ಸಾಹಿತ್ಯಿಕ ವೆಬ್ ಪತ್ರಿಕೆಯನ್ನು ನಡೆಸುತ್ತಿದ್ದು, ತಮ್ಮದೇ ಕಿಟಾಳ್ ಪ್ರಕಾಶನದ ಮೂಲಕ 15ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಈ ವರೆಗೆ ಪೆರ್ನಾಲ್ ಅವರ 4 ಕವನ ಸಂಕಲನ, 850ಕ್ಕೂ ಹೆಚ್ಚು ಕವಿತೆಗಳು, 100 ಹೆಚ್ಚು ಕಥೆಗಳು ಮತ್ತು 2,000 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ.

‘ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ವರೆಗೆ ಕೊಂಕಣಿಗೆ 48 ಪ್ರಶಸ್ತಿಗಳು ಸಿಕ್ಕಿವೆ. ಆದರೆ, ಕೊಂಕಣಿಯ ವಿಮರ್ಶಾ ಕೃತಿಗೆ ಅಕಾಡೆಮಿಯ ಪ್ರಶಸ್ತಿ ಲಭಿಸಿದ್ದು ಇದೇ ಮೊದಲು. ಕರ್ನಾಟಕದ ನಾಲ್ವರು ಕೊಂಕಣಿ ಸಾಹಿತಿಗಳು ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ ನಾನೂ ಒಬ್ಬ ಎಂಬುದು ಹೆಮ್ಮೆಯ ವಿಚಾರ’ ಎಂದು ಅವರು ‘ಪ್ರಜಾವಾಣಿಗೆ’ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.