ಬೆಂಗಳೂರು: ‘ಭಾರತೀಯರಲ್ಲದ ವಿದೇಶಿಯರಿಗೆ ಸುಲಭವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿರುವ ವ್ಯವಸ್ಥೆಯನ್ನು ಗಮನಿಸಿದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ.

ಬಾಂಗ್ಲಾದೇಶದ ವ್ಯಕ್ತಿಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟ ಆರೋಪದಡಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪಶ್ಚಿಮ ಬಂಗಾಳದ, ಅರ್ನಾಬ್ ಮಂಡಲ್ (28) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಕ್ಷಿತ್, ‘ಅರ್ಜಿದಾರರ ವಿರುದ್ಧ ಹೊರಿಸಲಾಗಿರುವ ಅಪರಾಧಿಕ ಕಲಂಗಳು ನಕಲಿ ಆಧಾರ್ ಕಾರ್ಡ್ ಮಾಡಿದ ಆರೋಪಕ್ಕೆ ಅನ್ವಯಿಸುವುದಿಲ್ಲ. ಅರ್ಜಿದಾರ ವಿದೇಶಿಯನಲ್ಲ. ಹಾಗಾಗಿ, ಅನ್ವಯಿಸಲಾಗಿರುವ ವಿದೇಶಿಯರ ಕಾಯ್ದೆಯ ಕಲಂ 14 ಇಲ್ಲಿ ಊರ್ಜಿತವಾಗುವುದಿಲ್ಲ. ಅರ್ಜಿದಾರರು 2024ರ ಆರಂಭದಿಂದಲೂ ಕಸ್ಟಡಿಯಲ್ಲಿದ್ದು, ಈಗಾಗಲೇ ಶಿಕ್ಷೆಯ ಅರ್ಧ ಭಾಗವನ್ನು ಜೈಲಿನಲ್ಲೇ ಕಳೆದಿದ್ದಾರೆ’ ಎಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ನೀವು ಮಾಡಿಕೊಡುವ ನಕಲಿ ಆಧಾರ್ ಕಾರ್ಡ್ ಈ ದೇಶದ ಹಕ್ಕುಗಳಿಗೆ ಮತ್ತು ಇತರೆಲ್ಲಾ ದಾಖಲೆಗಳಿಗೂ ಪ್ರಮುಖ ಅಡಿಪಾಯವಾಗುತ್ತದೆ. ಈ ಮೂಲಕ ನೀವು ಎಲ್ಲವನ್ನೂ ನಾಶಪಡಿಸುತ್ತಿದ್ದೀರಿ. ಅರ್ಜಿದಾರರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿತು.

‘ಎಷ್ಟು ಜನ ವಿದೇಶಿಯರನ್ನು ಹೀಗೆ ಭಾರತದ ಒಳಗೆ ಬರಲು ಬಿಡುತ್ತೀರಿ? ನಿಮ್ಮ ಮನೆ ಬಾಗಿಲಿಗೆ ಯಾರು ಬಂದರೂ ಆಧಾರ್ ಕಾರ್ಡ್ ಮಾಡಿಕೊಡುತ್ತೀರಾ? ನಿಮ್ಮಂಥವರಿಂದ ವ್ಯವಸ್ಥೆ ಎಲ್ಲಾ ನಾಶವಾಗುತ್ತಿದೆ? ನಕಲಿ ಆಧಾರ್ ಕಾರ್ಡ್ ಮಾಡಿಕೊಡುವುದು ವ್ಯಾಪಕವಾಗಿದೆ. ಆದರೂ ನೀವು ಯಾವುದೇ ಅಪರಾಧವಾಗಿಲ್ಲ ಎನ್ನುತ್ತಿದ್ದೀರಿ. ದೇಶದ ಬಗ್ಗೆ ಸ್ವಲ್ಪ ಕಾಳಜಿ ಇರಲಿ’ ಎಂದು ಕಿವಿಮಾತು ಹೇಳಿತು.

‘ಅರ್ಜಿದಾರರು ಜೈಲಿನಲ್ಲಿರುವುದು ಸರಿಯಾಗೇ ಇದೆ. ನೀವೇನಾದರೂ ಬೇರೆ ಪರಿಹಾರ ಕೇಳಿದ್ದರೆ ಪರಿಶೀಲನೆ ಮಾಡಬಹುದಿತ್ತು. ಬಿಡುಗಡೆಗಂತೂ ಆದೇಶಿಸಲಾಗದು. ಪ್ರಕರಣ ರದ್ದುಪಡಿಸಲೂ ಕೇಳಲೇಬೇಡಿ. ಒಂದು ವೇಳೆ ನಾನೇದಾರೂ ಆದೇಶ ಬರೆಯಿಸಿದರೆ ಜಾಮೀನು ಅರ್ಜಿ ಹಾಕಿಕೊಳ್ಳಲೂ ನಿಮಗೆ ಕಷ್ಟವಾಗುತ್ತದೆ. ವಿಚಾರಣೆ ಪೂರ್ಣಗೊಳಿಸಲು ಸಕ್ಷಮ ನ್ಯಾಯಾಲಯಕ್ಕೆ ಆದೇಶಿಸುತ್ತೇನೆ’ ಎಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ವಕೀಲರು ಅರ್ಜಿ ಹಿಂಪಡೆದರು. ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಹಾಜರಿದ್ದರು.

ನಕಲಿ ಆಧಾರ್ ಕಾರ್ಡ್ ಮಾಡಿಕೊಡುವ ಕೆಲಸ ಅನಿಯಂತ್ರಿತವಾಗಿ ನಡೆಯುತ್ತಿದೆ. ನಿಮ್ಮಂಥವರ ಈ ಕೃತ್ಯದಿಂದ ದೇಶದ ಹಿತಾಸಕ್ತಿಗೆ ಅಪಾಯ ಬಂದೊದಗಿದೆ. ಹೀಗಾದರೆ, ರಾಜ್ಯವೂ ಸಹಾ ಎಷ್ಟು ಅಂತಾ ನಿಗಾ ಇರಿಸಲು ಸಾಧ್ಯ?
ನ್ಯಾಯಮೂರ್ತಿ ಎಂ.ನಾಗಪ್ರಸನ್ನ

ಸೈಬರ್ ಕೇಂದ್ರವೇ ಕಾರಸ್ಥಾನ

‘ಆನೇಕಲ್ ತಾಲ್ಲೂಕಿನ ಹೀಲಲಿಗೆ ಗ್ರಾಮದ, ‘ವೌವ್ ಟೆಕ್ನಾಲಜಿ ಯುಕೆ’ ಹೆಸರಿನ ಸೈಬರ್ ಸೆಂಟರ್ನಲ್ಲಿ ಬಾಂಗ್ಲಾ ದೇಶದ ವ್ಯಕ್ತಿಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ’ ಎಂಬ ಮಾಹಿತಿಯ ಆಧಾರದಡಿ ಸೂರ್ಯನಗರ ಠಾಣೆ ಪೊಲೀಸರು ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಆರೋಪಿ ಅರ್ನಾಬ್ ಮಂಡಲ್ ಅವರನ್ನು 2024ರ ನವೆಂಬರ್ 23ರಂದು ನನ್ನನ್ನು ಬಂಧಿಸಲಾಗಿತ್ತು.

‘ನನ್ನ ಬಂಧನ ಕಾನೂನು ಬಾಹಿರ ಮತ್ತು ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನ ಎರಡನೇ ಹೆಚ್ಚುವರಿ ಕಿರಿಯ ಸಿವಿಲ್ ಜಡ್ಜ್ ಕೋರ್ಟ್ನಲ್ಲಿ ನನ್ನ ವಿರುದ್ಧ; ವಿದೇಶಿಯರ ಮತ್ತು ಭಾರತೀಯ ಪಾಸ್ಪೋರ್ಟ್ ಕಾಯ್ದೆಯ ವಿವಿಧ ಕಲಂಗಳಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.