ಬೆಂಗಳೂರು: ‘ಮಧ್ಯಪ್ರಾಚ್ಯ ರಾಷ್ಟ್ರಗಳ ರೀತಿಯಲ್ಲೇ ನಮ್ಮಲ್ಲೂ ಕೈ–ಕಾಲು
ಕತ್ತರಿಸುವಂತಾದರೆ ಜನರು ಕಾನೂನು ಪಾಲನೆಗೆ ಮುಂದಾಗುತ್ತಾರೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಮೌಖಿಕವಾಗಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ಅವರು, ಅತ್ಯಾಚಾರ ಆರೋಪದಡಿ ಬಂಧಿತರಾಗಿ ರುವ ತೆಲಂಗಾಣದ ತರುಣರೊಬ್ಬರು (23) ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ವೇಳೆ ಈ ಮಾತುಗಳನ್ನಾಡಿದ್ದಾರೆ.

ಅರ್ಜಿದಾರರರ ಪರ ವಕೀಲರು, ‘ಅರ್ಜಿದಾರ ಯಾವುದೇ ಅಪರಾಧ ಎಸಗಿಲ್ಲ. ಮೂರು ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿಬಂಧಿಸಿ ಈಗ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಅರವತ್ತು ದಿನಗಳಿಂದ ಜೈಲಿನಲ್ಲಿದ್ದಾರೆ. ಇದು ಅವರ ವೃತ್ತಿ ಬದುಕಿಗೆ ಹಾನಿಯುಂಟು ಮಾಡಲಿದೆ. ಆದ್ದರಿಂದ, ಜಾಮೀನು ನೀಡಬೇಕು’ ಎಂದು ಮನವಿ ಮಾಡಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿ, ‘ನಮ್ಮ ಪ್ರಜಾಪ್ರಭುತ್ವದಲ್ಲಿ ಅಪರಾಧ ಎಸಗುವುದು ಸುಲಭ ಎನಿಸಿಬಿಟ್ಟಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವ ಕಾರಣ ನಮ್ಮ ಕಾನೂನುಗಳು ಹಲ್ಲು ಕಳೆದುಕೊಂಡಿವೆ. ಬಹುಶಃ ಮಧ್ಯಪ್ರಾಚ್ಯ ದೇಶಗಳಲ್ಲಿ ನೀಡಲಾಗುವ ಕಠಿಣ ಶಿಕ್ಷೆಯನ್ನು ನಮ್ಮಲ್ಲೂ
ತಪ್ಪಿತಸ್ಥರಿಗೆ ನೀಡುವಂತಾದರೆ ನಮ್ಮ ಜನರು ತಕ್ಕ ರೀತಿಯಲ್ಲಿ ಕಾನೂನು ಪಾಲಿಸುತ್ತಾರೆ’ ಎಂದು ನುಡಿದಿದ್ದಾರೆ.

‘ಅರ್ಜಿದಾರ ಇನ್ನೂ ನಾಲ್ಕೈದು ದಿನ ಜೈಲಿನಲ್ಲಿರಲಿ ಬಿಡಿ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಜೈಲಿನ ಅನುಭವವಾಗಲಿ. ಯಾರಿಗೆ ಗೊತ್ತು ? ಪ್ರಕರಣದಲ್ಲಿ ಒಂದೊಮ್ಮೆ ಶಿಕ್ಷೆ ವಿಧಿಸಿದರೆ ಆತ ಮತ್ತೆ ಜೈಲಿಗೆ ಹೋಗಬೇಕಾಗಬಹುದೇನೋ’ ಎಂದಿರುವ ನ್ಯಾಯಮೂರ್ತಿಯವರು ಪ್ರಾಸಿಕ್ಯೂಷನ್ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದ್ದಾರೆ.

ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 375(ಎ) (ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ) ಮತ್ತು 376ರ (ಅತ್ಯಾಚಾರ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣವೇನು?

ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ತರುಣಿ (23), ‘ಆರೋಪಿ ಮತ್ತು ನಾನು ಕರ್ನಾಟಕದಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದೆವು. 2023ರ ಜುಲೈನಲ್ಲಿ ಆತ ನನಗೆ ಪ್ರೇಮ ನಿವೇದನೆ ಮಾಡಿದ್ದ. ಅದಕ್ಕೆ ನಾನು ಸ್ಪಂದಿಸಿದ್ದೆ. ನಂತರದಲ್ಲಿ ಅವನ ನಡವಳಿಕೆ ಇಷ್ಟವಾಗದ ಕಾರಣ ಅಂತರ ಕಾಯ್ದುಕೊಂಡಿದ್ದೆ. 2023ರ ಸೆಪ್ಟೆಂಬರ್ 12ರಂದು ಆತ ನನ್ನನ್ನು ಪುಸಲಾಯಿಸಿ ನಮ್ಮ ಸಂಬಂಧದ ಬಗ್ಗೆ ಚರ್ಚಿಸಲು ತಾನಿದ್ದ ಅಪಾರ್ಟ್ಮೆಂಟ್ಗೆ ಕರೆಯಿಸಿಕೊಂಡಿದ್ದ. ಈ ವೇಳೆ ಆತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದೇನೆ’ ಎಂದು ದೂರಿನಲ್ಲಿ ವಿವರಿಸಿದ್ದರು. ಇದರ ಆಧಾರದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.