ಬೆಂಗಳೂರು: ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಲ್ಲಿ ಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವೊಂದನ್ನು ರದ್ದುಗೊಳಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

ಈ ಸಂಬಂಧ ಆರ್.ಟಿ.ನಗರದ ಎಂ.ಆರ್.ಪಾಳ್ಯ ನಿವಾಸಿ ಎಸ್.ಮಣಿಗಂಡನ್ (35), ‘ನನ್ನ ವಿರುದ್ಧ ನಗರದ 7ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಮಣಿಗಂಡನ್ ಮತ್ತು ಮೃತ ಪತ್ನಿ 15 ವರ್ಷ ಒಟ್ಟಾಗಿ ಜೀವನ ನಡೆಸಿದ್ದವರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿದ್ದರು.

ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ, ‘ದಂಪತಿ ಒಟ್ಟಾಗಿ 15 ವರ್ಷ ವೈವಾಹಿಕ ಜೀವನ ನಡೆಸಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಎಂಬುದಷ್ಟೇ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಲು ಸಕಾರಣ ಎನಿಸುವುದಿಲ್ಲ. ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರೆಸಲು ದೋಷಾರೋಪ ಪಟ್ಟಿಯಲ್ಲಿ ಸಾಕಷ್ಟು ಪ್ರಾಥಮಿಕ ಸಾಕ್ಷ್ಯಾಧಾರಗಳಿವೆ. ಆದ್ದರಿಂದ, ನ್ಯಾಯಿಕ ವಿಚಾರಣೆ ಎದುರಿಸುವುದು ಅನಿವಾರ್ಯ’ ಎಂದು ಸ್ಪಷ್ಟಪಡಿಸಿದೆ.

ಪ್ರಕರಣವೇನು?: ಮಣಿಗಂಡನ್ ಬಿ.ಎ.ವರ್ಷಾ ಅವರನ್ನು 2011ರ ಜೂನ್ 26ರಂದು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2022ರಲ್ಲಿ ಪತಿ–ಪತ್ನಿ ನಡುವೆ ಉಂಟಾದ ಕಲಹದ ಹಿನ್ನೆಲೆಯಲ್ಲಿ ಮಣಗಂಡನ್ ಮನೆ ಬಿಟ್ಟು ಹೋಗಿದ್ದರು. ಬಳಿಕ ಹಿರಿಯರ ಮನವೊಲಿಕೆಯಿಂದ ಪುನಃ ಮನೆಗೆ ಮರಳಿದ್ದರು.

2025ರ ಅಕ್ಟೋಬರ್ 18ರಂದು ಮನೆಗೆ ಬಣ್ಣ ಬಳಿಯುವ ವಿಷಯದಲ್ಲಿ ದಂಪತಿ ನಡುವೆ ಗಲಾಟೆ ತಲೆದೋರಿತ್ತು. ಈ ವೇಳೆ ಮಣಿಗಂಡನ್ ಪತ್ನಿಯನ್ನು ಮಕ್ಕಳ ಎದುರಿನಲ್ಲಿ ದೈಹಿಕ ಹಲ್ಲೆ ನಡೆಸಿ ಮನೆ ಬಿಟ್ಟು ಹೋಗುವಂತೆ ಕೂಗಾಡಿದ್ದರು. ಈ ಘಟನೆ ಬಳಿಕ ತಕ್ಷಣ ಕೊಠಡಿಯೊಳಗೆ ಹೋಗಿದ್ದ ಪತ್ನಿ ಒಳಗಿನಿಂದ ಬಾಗಿಲ ಚಿಲಕ ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ವರ್ಷಾಳ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಮಣಿಗಂಡನ್ ವಿರುದ್ಧ, ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 85 (ವಿವಾಹಿತ ಮಹಿಳೆ ಮೇಲೆ ಪತಿ ಅಥವಾ ಆತನ ಬಂಧುಗಳಿಂದ ಕ್ರೌರ್ಯ) ಹಾಗೂ ಕಲಂ 108 (ಆತ್ಮಹತ್ಯೆಗೆ ಪ್ರೇರಣೆ)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಮಣಿಗಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.