ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯವರು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಇತರೆ ಮಹತ್ವದ ಕೆಲಸಗಳ ಕಡೆಗೆ ಗಮನ ಹರಿಸುವ ಜರೂರತ್ತಿದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ಪರಸ್ಪರ ವರ್ಗಾವಣೆ ಕೋರಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿ ನನಗೆ ನೀಡಿರುವ ಶಿಫಾರಸು ನಿರ್ಲಕ್ಷಿಸಿ ನನ್ನನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಅಂಗವಿಕಲರೂ ಆಗಿರುವ, ‘ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ವೈಟ್ಫೀಲ್ಡ್ ವಿಭಾಗದ ಸಹಾಯಕ ಎಂಜಿನಿಯರ್ ಎಸ್.ಚೇತನ್ ಸಲ್ಲಿಸಿದ್ದ ರಿಟ್ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮೇಲ್ಮನವಿ ವಿಲೇವಾರಿ ಮಾಡುವ ಮೂಲಕ, ‘ಈ ಕುರಿತಂತೆ ನೀಡಲಾಗಿರುವ ಈ ಆದೇಶವನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತರತಕ್ಕದ್ದು’ ಎಂದು ತಾಕೀತು ಮಾಡಿದೆ.

‘ವರ್ಗಾವಣೆ ಮತ್ತು ನೇಮಕಾತಿಗೆ ಸಂಬಂಧಿಸಿದ ಯಾವುದೇ ವಿನಂತಿಗಳನ್ನು ಮುಖ್ಯಮಂತ್ರಿ ಕಚೇರಿ ನೇರವಾಗಿ ಸ್ವೀಕರಿಸಬಾರದು. ಇಂತಹ ವಿಷಯಗಳು ಇಲಾಖಾ ಮಟ್ಟದಲ್ಲೇ ಇತ್ಯರ್ಥವಾಗಬೇಕು. ಸರ್ಕಾರಿ ಮತ್ತು ಸರ್ಕಾರಿ ಉದ್ಯಮಗಳಲ್ಲಿನ ಅಧಿಕಾರಿಗಳ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಿಂತ ಉತ್ತಮವಾದ ಮತ್ತು ಮಹತ್ವದ ಕೆಲಸಗಳನ್ನು ನಿರ್ವಹಿಸುವ ಗುರುತರ ಜವಾಬ್ದಾರಿ ಮುಖ್ಯಮಂತ್ರಿ ಮೇಲಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

‘ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ವೃಂದ–ನೇಮಕಾತಿ ನಿಯಮಗಳು ಮತ್ತು ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳನ್ನು ಆಧರಿಸಿ ಆಯಾ ಇಲಾಖೆಗಳು ಶಿಫಾರಸುಗಳನ್ನು ಪರಿಶೀಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಈ ಪ್ರಕರಣದಲ್ಲಿ 2026ರ ಫೆಬ್ರುವರಿ 24ರ ಹೈಕೋರ್ಟ್ ಆದೇಶಕ್ಕೆ ಪೂರಕವಾಗಿ 2026ರ ಮಾರ್ಚ್ 3ರಂದು ಮುಖ್ಯ ಕಾರ್ಯದರ್ಶಿ ಅನುಪಾಲನಾ ವರದಿ ಸಲ್ಲಿಸಿದ್ದಾರೆ. ಇದು ಮುಖ್ಯಮಂತ್ರಿ ಕಚೇರಿ ನೀಡಿರುವ ಟಿಪ್ಪಣಿಯಾಗಿದ್ದು ಶಿಫಾರಸಿನ ರೂಪದಲ್ಲಿದೆ. ಹಾಗಾಗಿ, ಇದು ವರ್ಗಾವಣೆ ಆದೇಶವೆಂದಾಗಲೀ ಅಥವಾ ವರ್ಗಾವಣೆಗೆ ಒಪ್ಪಿಗೆ ನೀಡಿದೆ ಎಂದಾಗಲೀ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಸಿಎಂ ಕಚೇರಿಯ ಯಾರೋ ಇಂತಹ ಆದೇಶ ಹೊರಡಿಸುತ್ತಿದ್ದಾರೆ..!

‘ಮುಖ್ಯಮಂತ್ರಿ ಅನುಮೋದನೆ ನೀಡಿದ್ದರೂ, ಬೆಸ್ಕಾಂ ನನ್ನನ್ನು ನಿರ್ದಿಷ್ಟ ಉಪವಿಭಾಗಕ್ಕೆ ನಿಯೋಜಿಸಿಲ್ಲ. ಆದ್ದರಿಂದ, ನನ್ನನ್ನು ಮುಖ್ಯಮಂತ್ರಿ ಸೂಚಿಸಿದಂತೆ ನಿಯೋಜನೆ ಮಾಡಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ‘ಮುಖ್ಯಮಂತ್ರಿ ಕಚೇರಿಯಿಂದ ಗ್ರೂಪ್ ‘ಬಿ’ ಹಾಗೂ ‘ಸಿ’ ವರ್ಗದ ನೌಕರರ ವರ್ಗಾವಣೆಗೆ ಹಲವು ಪತ್ರಗಳು ಬರುತ್ತಿರುವುದು ಹೈಕೋರ್ಟ್ ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತಿರುವ ಯಾರೋ ಒಬ್ಬರು ಯಾಂತ್ರಿಕವಾಗಿ ಇಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಆದ್ದರಿಂದ, ನೌಕರರು ದಿಗಿಲಿಗೆ ಒಳಗಾಗಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ 2024ರ ಸೆಪ್ಟೆಂಬರ್ 9ರಂದು ಅರ್ಜಿ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚೇತನ್ ಮೇಲ್ಮನವಿ ಸಲ್ಲಿಸಿದ್ದರು.

ವರ್ಗಾವಣೆ ದಂಧೆ: ಅಶೋಕ ಟೀಕೆ

‘ಮುಖ್ಯಮಂತ್ರಿಯಾದವರಿಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ ಎಂದು ಹೈಕೋರ್ಟ್ ಚಾಟಿ ಬೀಸಿರುವುದು ರಾಜ್ಯದಲ್ಲಿ ದುರಾಡಳಿತ, ವರ್ಗಾವಣೆ ದಂಧೆ ಎಷ್ಟು ತಾಂಡವವಾಡುತ್ತಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.

ಈ ಬಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ‘ಸರ್ಕಾರಕ್ಕೆ ಹೈಕೋರ್ಟ್ ಮತ್ತೊಮ್ಮೆ ಛೀಮಾರಿ ಹಾಕಿದೆ. ಒಂದು ಕಡೆ ಸಂಪೂರ್ಣವಾಗಿ ದಿವಾಳಿ ಆಗಿರುವ ಖಜಾನೆ, ಮತ್ತೊಂದು ಕಡೆ ಸದಾ ಅಲುಗಾಡುತ್ತಿರುವ ಕುರ್ಚಿ, ಇವೆರಡರ ಮಧ್ಯೆ ಸಿಲುಕಿಕೊಂಡು ದುರ್ಬಲರಾಗಿರುವ ‘ಹಲೋ ಅಪ್ಪ’ ಖ್ಯಾತಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಗಾವಣೆ ದಂಧೆಯನ್ನೇ ಮುಖ್ಯ ಕಾಯಕ ಮಾಡಿಕೊಂಡಿದ್ದಾರೆ’ ಎಂದು ದೂರಿದ್ದಾರೆ.

‘ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮಾರ್ಯದೆ ಇದ್ದರೆ, ಈ ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಕನ್ನಡಿಗರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
.ಹುಬ್ಬಳ್ಳಿ ಎನ್ಕೌಂಟರ್ ಪ್ರಕರಣ: ಫೆ.27ಕ್ಕೆ ಆದೇಶ ಪ್ರಕಟಿಸಲಿರುವ ಹೈಕೋರ್ಟ್.ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಾಳಜಿ ಚೆನ್ನಾಗಿ ಗೊತ್ತಿದೆ..!: ಕುಟುಕಿದ ಹೈಕೋರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.