ಬೆಂಗಳೂರು: ‘ಬಡ ಹಾಕಿ ಆಟಗಾರರನ್ನು ವಂಚಿಸಿದಂತೆ ಕ್ರಿಕೆಟಿಗರನ್ನೂ ವಂಚಿಸಲಿಕ್ಕಾಗುತ್ತದೆಯೇ’ ಎಂದು ಪ್ರಶ್ನಿಸಿರುವ ಹೈಕೋರ್ಟ್, ‘ಹಾಕಿ ಆಟಗಾರರನ್ನು ನಂಬಿಸಿ ವಂಚಿಸಿರುವ ಪ್ರಕರಣ ತನಿಖೆಗೆ ಯೋಗ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ‘ಗೇಮ್ ಹಾಕಿ ಕುಚ್ ನಹೀ ಬಾಕಿ’ (ಆಟವೇನೊ ಹಾಕಿ ಆದರೆ, ಉಳಿದಿಲ್ಲ ಏನೂ ಬಾಕಿ) ಎಂದು ಅರ್ಜಿದಾರರನ್ನು ಛೇಡಿಸಿದೆ.

ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ, ‘ಖೇಲೊ ಮಾಸ್ಟರ್ ಸಂಸ್ಥೆಯ ಖಜಾಂಜಿ ಎ.ಎನ್.ಸೋಮಯ್ಯ, ಅಧ್ಯಕ್ಷ ಎಚ್.ಎಂ.ಪ್ರಸನ್ನ, ಕಾರ್ಯದರ್ಶಿ ಎನ್.ಮಧು ಮತ್ತು ತಂಡದ ಮ್ಯಾನೇಜರ್ ಪಿ.ಕೆ.ತೇಜಶ್ರೀ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ದೂರುದಾರರ ಪರ ವಕೀಲರು, ‘ಆಟಗಾರರ ಹೆಸರಿನಲ್ಲಿ ಮತ್ತು ಪ್ರಾಯೋಜಕತ್ವದ ನೆಪದಲ್ಲೂ ಹಣ ಸಂಗ್ರಹಿಸಲಾಗಿದೆ. ಅದನ್ನು ಅರ್ಜಿದಾರರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಇದನ್ನು ಒಪ್ಪದ ಅರ್ಜಿದಾರರ ಪರ ವಕೀಲರು, ‘ಮೊದಲಿಗೆ ಕೊರಿಯಾದಲ್ಲಿ ನಡೆಯುವ ಹಾಕಿ ಟೂರ್ನಿಗೆ ಕರೆದೊಯ್ಯಲಾಗುವುದು ಎಂದು 15 ಆಟಗಾರರಿಂದ ತಲಾ ₹15 ಸಾವಿರ ವಸೂಲಿ ಮಾಡಲಾಗಿತ್ತು. ಆಟಗಾರರು ವೀಸಾಗೆ ಅಗತ್ಯ ದಾಖಲೆ ಒದಗಿಸಲು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಪ್ರವಾಸ ಸಾಧ್ಯವಾಗಲಿಲ್ಲ. ನಂತರ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಸಲಾಗುತ್ತದೆ ಎಂದು ಪ್ರತಿಯೊಬ್ಬ ಆಟಗಾರನಿಂದ ₹1.50 ಲಕ್ಷ ಸಂಗ್ರಹಿಸಲಾಗಿತ್ತು. ಅದಕ್ಕೂ ಆಟಗಾರರು ವೀಸಾ ಪಡೆಯಲು ದಾಖಲೆ ಒದಗಿಸಲು ವಿಫಲವಾದರು ಎಂದು ಕೈಬಿಡಲಾಯಿತು. ಆದರೆ, ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗೆ ಮಾತ್ರವೇ ಆಟಗಾರರನ್ನು ಕರೆದೊಯ್ಯಲಾಗಿತ್ತು’ ಎಂದುಸಮಜಾಯಿಷಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಭಾರತದಲ್ಲೇ ಕುಳಿತು ನೀವು ಲೋಕವನ್ನೆಲ್ಲಾ ದರ್ಶನ ಮಾಡಿಸಿದ್ದೀರಿ’ ಎಂದು ಅರ್ಜಿದಾರರನ್ನು ಕುಟುಕಿತಲ್ಲದೇ, ಪದಾಧಿಕಾರಿಗಳ ವಿರುದ್ದ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿತಲ್ಲದೆ, ‘ಇದು ತನಿಖೆ ನಡೆಯಲೇಬೇಕಾದ ಪ್ರಕರಣವಾಗಿದೆ. ಆಟವೇನೊ ಹಾಕಿ ಆದರೆ, ಏನೂ ಉಳಿದಿಲ್ಲ ಬಾಕಿ’ ಎಂದು ಅರ್ಜಿದಾರರನ್ನು ವ್ಯಂಗ್ಯ ಮಾಡಿತು.

‘ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಲ್ಪಿಸಿ, ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು’ ಎಂದು ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.