ಬೆಂಗಳೂರು: ‘ಶಾಲೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಪೂರಕ ಆದೇಶ ಹೊರಡಿಸಿ, ಕಾನೂನು ರೀತಿಯಲ್ಲಿ ರಾಜ್ಯ ಸರ್ಕಾರವೇ ವಿವಾದ ಹುಟ್ಟು ಹಾಕಿದೆ. ಇದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

‘ಶಾಲೆಗಳಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮನೋಭಾವ ಸೃಷ್ಟಿಗೆ ಕಾಂಗ್ರೆಸ್ ಸರ್ಕಾರವೇ ಅವಕಾಶ ನೀಡಿದ್ದು, ಇದರಿಂದ ಉದ್ಭವಿಸುವ ಸಮಸ್ಯೆಗಳಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ ಹೊರಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮುಸ್ಲಿಮರ ತುಷ್ಟೀಕರಣ ಕ್ಕೆಂದೇ ಸರ್ಕಾರ ಈ ಆದೇಶ ಮಾಡಿದೆ. 1980ರ ಶಾಲಾ ಸಮವಸ್ತ್ರ ಕಾನೂನು ಅಡಿಯಲ್ಲಿ ನಮ್ಮ ಸರ್ಕಾರ ಆದೇಶ ಮಾಡಿತ್ತು. ಅದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ನಲ್ಲೂ ಅದಕ್ಕೆ ವಿಭಜಿತ ತೀರ್ಪು ಬಂದಿತ್ತು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಇರುವಾಗಲೇ ಮಕ್ಕಳಲ್ಲಿ ಭೇದ–ಭಾವದ ಆತಂಕ ಮೂಡಿಸುವ ಕೆಲಸ ಸರ್ಕಾರ ಮಾಡುತ್ತಿದೆ’ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.

‘ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಯಾವುದೇ ಸ್ಪಷ್ಟವಾದ ನೀತಿ ಇಲ್ಲ. ಗುಣಮಟ್ಟದ ವಿದ್ಯಾರ್ಜನೆ ಆಗುತ್ತಿಲ್ಲ. ಶಿಕ್ಷಕರ ಕೊರತೆ ಇದೆ. ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂತಹ ಆದೇಶ ಮಾಡಿದ್ದಾರೆ. ಈ ಆದೇಶಕ್ಕೆ ತುಷ್ಟೀಕರಣದ ರಾಜಕಾರಣ ಬಿಟ್ಟರೆ ಬೇರೇ ಯಾವುದೇ ಕಾರಣವಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಜಗತ್ತಿನ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳು ಹಿಜಾಬ್ ತೊರೆದು ನಿತ್ಯ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಜಾಬ್ ಧರಿಸಲು ಆದೇಶ ಮಾಡಿರುವುದು ಸೂಕ್ತವಲ್ಲ. ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಧರ್ಮ ಆಚರಣೆಗೆ, ಶಿಕ್ಷಣ ಬದುಕಿಗೆ: ಮಹದೇವಪ್ಪ

‘ಶಾಲಾ ಕಾಲೇಜುಗಳಲ್ಲಿ ಜನಿವಾರ, ಶಿವದಾರ ಮತ್ತು ಹಿಜಾಬ್ ಹಾಕುವುದು ಅಪರಾಧವಲ್ಲ. ಎಲ್ಲ ಧರ್ಮಗಳಿಗೂ ಸಂವಿಧಾನ ಅವಕಾಶ ಕಲ್ಪಿಸಿದ್ದು, ಅದರ ಆಶಯಕ್ಕೆ ಪೂರಕವಾಗಿಯೇ ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು’ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

‘ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಧರ್ಮಾತೀತ ಮತ್ತು ಜಾತ್ಯತೀತ ಸ್ಥಳಗಳಾಗಿವೆ. ಶಿಕ್ಷಣ ಪಡೆಯುವ ಜಾಗದಲ್ಲಿ ಬಾಬಾ ಸಾಹೇಬರು ಹೇಳುವ ಹಾಗೆ ಜ್ಞಾನಾರ್ಜನೆಯೇ ಮೊದಲ ಆದ್ಯತೆ ಆಗಲಿ. ಧರ್ಮ ಆಚರಣೆಗೆ-ಶಿಕ್ಷಣ ಬದುಕಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎಂಬ ಸರಳ ಸತ್ಯ ಎಲ್ಲರಿಗೂ ಅರ್ಥವಾಗಲಿ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಶಿಕ್ಷಣ ಪಡೆದುಕೊಳ್ಳಬೇಕಾದ ಜಾಗದಲ್ಲಿ ಧಾರ್ಮಿಕ ಉಡುಪುಗಳನ್ನು ಹಾಕಬೇಕೇ ಅಥವಾ ಬೇಡವೇ ಎಂಬ ವಿಷಯಕ್ಕಿಂತ ಶಿಕ್ಷಣ ಪಡೆಯುವುದು ಮತ್ತು ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಜ್ಞಾನ ಸಂಪಾದನೆ ಮಾಡುವುದು ಆದ್ಯತೆ ಆಗಬೇಕು ಎಂದು ಮಹದೇವಪ್ಪ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ದೇಶದ ಸಂವಿಧಾನವನ್ನು ಒತ್ತೆ
ಇಡುವುದಕ್ಕೂ ಹೇಸುವುದಿಲ್ಲ. ಈಗ ಮತ್ತೆ ಹಿಜಾಬ್ ಧ್ಯಾನ ಆರಂಭಿಸಿದೆ. ಇಂಥ ಓಲೈಕೆ ರಾಜಕಾರಣದಿಂದ ದೇಶಾದ್ಯಂತ ಕಾಂಗ್ರೆಸ್ ‘ಕಸ’ವಾಗಿದೆ
ವಿ. ಸುನಿಲ್ ಕುಮಾರ್, ಬಿಜೆಪಿ ಶಾಸಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1754717229

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.