ಹಿರಿಯೂರು: ಮಕ್ಕಳ ಓದು, ಶಸ್ತ್ರಚಿಕಿತ್ಸೆ, ಮನೆ ನಿರ್ಮಾಣ, ಮದುವೆ, ನಾಮಕರಣ, ಹೆರಿಗೆ... ಹೀಗೆ ಒಂದಲ್ಲ ಒಂದು ಬೇಡಿಕೆಯೊಂದಿಗೆ ನಿತ್ಯ ಬರುತ್ತಿದ್ದ ನೂರಾರು ಜನರಿಗೆ ಸ್ಪಂದಿಸುತ್ತಿದ್ದ ನಾಯಕ ಡಿ.ಸುಧಾಕರ್.

ಯಾರನ್ನೂ ಬರಿಗೈಲಿ ಕಳುಹಿಸದ ಅವರು ಅಧಿಕಾರ ಇಲ್ಲದ ಸಮಯದಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಈ ಕಾರಣಕ್ಕೆ 2023ರಲ್ಲಿ ಹಿರಿಯೂರು ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕ್ಷೇತ್ರದಲ್ಲಿ ಸುಧಾಕರ್ ಅವರ ಜೈನ ಸಮುದಾಯದ ಮತಗಳು 50ರಷ್ಟೂ ಇಲ್ಲ. ಹೀಗಿದ್ದೂ ಪ್ರಬಲ ಜಾತಿಗಳಿಗೆ ಸೇರಿದ ಎದುರಾಳಿಗಳನ್ನು ದೊಡ್ಡ ಅಂತರದಿಂದ ಸೋಲಿಸಿದ್ದ ಹಿರಿಮೆ ಅವರದ್ದು. ಅವರು ಜಾತಿ, ವರ್ಗ, ಧರ್ಮಗಳನ್ನು ಮೀರಿದ್ದ ಅಪರೂಪದ ರಾಜಕಾರಣಿ.

2008ರಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ತಾಲ್ಲೂಕಿನ ದೇವರಕೊಟ್ಟ ಗ್ರಾಮದ ಸಮೀಪ 100 ಎಕರೆ ಜಾಗದಲ್ಲಿ 350 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಮೊರಾರ್ಜಿ ದೇಸಾಯಿ ಶಿಕ್ಷಣ ವಸತಿ ಸಮುಚ್ಚಯ ನಿರ್ಮಿಸಿದ್ದರು. ವಾಣಿವಿಲಾಸಪುರದ ಬೆಟ್ಟದ ಬುಡದಲ್ಲಿರುವ ವಸತಿ ಶಾಲೆ, ಐಮಂಗಲ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ವಸತಿ ಶಾಲೆ, ಬಬ್ಬೂರು ಸಮೀಪ ಇರುವ ತೋಟಗಾರಿಕೆ ಮಹಾವಿದ್ಯಾಲಯ, ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಸರ್ಕಾರಿ ಐಟಿಐ ಕಾಲೇಜುಗಳು, ಹಿರಿಯೂರು ನಗರದಲ್ಲಿ ಬಾಲಕಿಯರಿಗೆಂದೇ ಪ್ರತ್ಯೇಕ ಪಿಯು ಕಾಲೇಜು ನಿರ್ಮಿಸಿದ್ದರು. ಇವು ಸುಧಾಕರ್ ಅವರಿಗೆ ಶಿಕ್ಷಣದ ಬಗ್ಗೆ ಇದ್ದ ಕಾಳಜಿಗೆ ಸಾಕ್ಷಿಯಂತಿವೆ.

2017ರಲ್ಲಿ ರಾಜ್ಯದ 162 ತಾಲ್ಲೂಕುಗಳಲ್ಲಿ ಭೀಕರ ಬರ ಕಾಣಿಸಿಕೊಂಡಿತ್ತು. ದುಡ್ಡು ಕೊಟ್ಟರೂ ಜಾನುವಾರುಗಳಿಗೆ ಮೇವು ಸಿಗುತ್ತಿರಲಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ ಭತ್ತದ ಹುಲ್ಲು ಸಿಕ್ಕರೂ ಅದನ್ನು ಇಲ್ಲಿಯ ಜಾನುವಾರುಗಳು ತಿನ್ನುತ್ತಿರಲಿಲ್ಲ. ತಾಲ್ಲೂಕಿನ 40 ಸಾವಿರಕ್ಕೂ ಹೆಚ್ಚು ಹಸು–ಎಮ್ಮೆ, ಕುರಿ–ಮೇಕೆಗಳನ್ನು ಉಳಿಸುವುದು ಹೇಗೆ ಎಂಬ ಚಿಂತೆ ಸಚಿವರನ್ನು ಕಾಡುತ್ತಿತ್ತು. ಆಗ ಅವರಿಗೆ ಹೊಳೆದದ್ದು ಕೆರೆ ಅಂಗಳದಲ್ಲಿ ಮೇವು ಬೆಳೆಸುವ ಯೋಜನೆ.

ಪಶು ಇಲಾಖೆಯಿಂದ ಉಚಿತವಾಗಿ ಮೇವಿನ ಬೀಜ ಪಡೆದು, ತಾವೇ ₹ 70 ಲಕ್ಷದಿಂದ ₹80 ಲಕ್ಷ ಖರ್ಚು ಮಾಡಿ, ಉಡುವಳ್ಳಿ, ಕತ್ತೆಹೊಳೆ, ಮೇಟಿಕುರ್ಕೆ, ಕರಿಯಾಲ ಒಳಗೊಂಡಂತೆ ವಿವಿಧ ಗ್ರಾಮಗಳ ಕೆರೆ ಅಂಗಳದಲ್ಲಿ 450ಕ್ಕೂ ಅಧಿಕ ಎಕರೆ ವಿಸ್ತೀರ್ಣದಲ್ಲಿ ಮೇವು ಬೆಳೆಸಿ, ಹಳ್ಳಿ ಹಳ್ಳಿಗೆ ಒಯ್ದು ರಾಸುಗಳಿಗೆ ಹಂಚಿದರು. ಇದು ರಾಜ್ಯದಾದ್ಯಂತ ಸುದ್ದಿಯಾಯಿತು. ಸ್ವತಃ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮೇವು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಡಿಸಿದ್ದರು.

ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ

ನಗರದ ತಾಲ್ಲೂಕು ಕಚೇರಿ ಮುಂದೆ ವಾಣಿವಿಲಾಸ ಅಣೆಕಟ್ಟೆಗೆ ಯಾವುದಾದರೂ ಮೂಲದಿಂದ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಹೋರಾಟ 543 ದಿನ ದಾಟಿತ್ತು. ಅದು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಸಚಿವರನ್ನು ಹಿರಿಯೂರಿಗೆ ಬರುವಂತೆ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ಕೊಡಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ.

ಮಧ್ಯವರ್ತಿಗಳ ಅಗತ್ಯ ಇರಲಿಲ್ಲ

ಸುಧಾಕರ್ ಅವರನ್ನು ಭೇಟಿ ಮಾಡಲು ಮಧ್ಯವರ್ತಿಗಳು, ಮುಖಂಡರ ನೆರವು ಬೇಕಿರಲಿಲ್ಲ. ಜನಸಾಮಾನ್ಯರೂ ನೇರವಾಗಿ ಅವರಲ್ಲಿ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಪಡೆದುಕೊಳ್ಳುತ್ತಿದ್ದರು. ಜನರ ನಾಡಿ ಮಿಡಿತ ಅರಿತಿದ್ದರಿಂದ ಚಳ್ಳಕೆರೆಯಲ್ಲಿ ಒಮ್ಮೆ, ಹಿರಿಯೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗಿತ್ತು. ಬದುಕಿದ್ದ ಸಮಯದಲ್ಲಿ ಅವರು ಸಲ್ಲಿಸಿದ ಸೇವೆ, ನಡೆಸಿರುವ ಅಭಿವೃದ್ಧಿ ಕಾರ್ಯಗಳು ಚಿರಸ್ಮರಣೀಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-44-1394850045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.