ಹೊನ್ನಾಳಿ: ‘ಸ್ಪೃಶ್ಯ ಅಲೆಮಾರಿಗಳಿಗೆ ಶೇ 4.5 ಮೀಸಲಾತಿ ನಿಧರಿಸಿ ತೀರ್ಮಾನ ತೆಗೆದುಕೊಂಡಿರುವುದನ್ನು ರಾಜ್ಯದ ಲಂಬಾಣಿ ಜನಾಂಗ ಒಪ್ಪುವುದಿಲ್ಲ’ ಎಂದು ಬಣಜಾರ್ ಸಮಾಜದ ತಾಲ್ಲೂಕು ಘಟಕದ ಮುಖಂಡ ಮಿಥುನ್ ಚಕ್ರವರ್ತಿ ಹೇಳಿದರು.

ಅಲೆಮಾರಿಗಳನ್ನು ಪ್ರತ್ಯೇಕವಾಗಿ ವರ್ಗೀಕರಣ ಮಾಡಿ ಈ ಮೀಸಲಾತಿ ನೀಡಿದರೆ ಆಗ ಲಂಬಾಣಿ ಜನಾಂಗಕ್ಕೆ ಅನುಕೂಲವಾಗಲಿದೆ. ಇಲ್ಲದಿದ್ದರೆ ತಾಂಡಾ ಬಚಾಚೋ, ಕಾಂಗ್ರೆಸ್ ಹಠಾವೋ ಹೋರಾಟಕ್ಕೆ ಕರೆಕೊಡಬೇಕಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿರುವ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಿ ನಮಗೆ ಶೇ 4.5ರಷ್ಟು ಮೀಸಲಾತಿ ನೀಡಿದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ಸರ್ಕಾರದ ಈ ತೀರ್ಮಾನವನ್ನು ಬಲವಾಗಿ ವಿರೋಧಿಸುತ್ತೇವೆ ಎಂದರು.

ರಾಜ್ಯದಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ ಒಬ್ಬರೇ ಒಬ್ಬ ಸಚಿವರು ಇಲ್ಲ. ಇರುವ ಒಬ್ಬ ಶಾಸಕರನ್ನೂ ವಿಧಾನಪರಿಷತ್ತಿನ ಸಭಾಪತಿಯನ್ನಾಗಿ ಮಾಡಲಾಗಿದೆ. ನಮ್ಮ ಧ್ವನಿಯನ್ನು ಅಡಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಒಳಮೀಸಲಾತಿ ನೀತಿಗೆ ಅಂಟಿಕೊಂಡರೆ ನಾವು ನಿಮ್ಮನ್ನು ತಾಂಡಾದೊಳಕ್ಕೆ ಕಾಲಿಡಲು ಬಿಡುವುದಿಲ್ಲ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ಗೆ ವಿರುದ್ಧವಾಗಿ ಮತ ನೀಡುತ್ತೇವೆ ಎಂದು ಎಂದು ಓಂಕಾರನಾಯ್ಕ ಎಚ್ಚರಿಕೆ ನೀಡಿದರು.

ವೆಂಕಟೇಶ್ ನಾಯ್ಕ, ಅಣ್ಣಪ್ಪನಾಯ್ಕ, ಹಾಲೇಶ್ನಾಯ್ಕ, ಅಶೋಕ್ನಾಯ್ಕ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-43-1775316148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.