ಹುಬ್ಬಳ್ಳಿ: ‘ಕನ್ನಡ ನಾಡಿಗೆ ದುಡಿದವರ ಮತ್ತು ಮಡಿದವರ ಹೆಸರನ್ನು ಸದಾ ನೆನಪಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಕನ್ನಡಿಗ ಮಹಾಪುರುಷರ ಹೆಸರು ಇಡುವಂತೆ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ’ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದ ಹೋಟೆಲ್ವೊಂದರಲ್ಲಿ ಕನ್ನಡ ಮಹನೀಯರ ನಾಮಕರಣ ಚಳವಳಿ ಸಮಿತಿ ಸೋಮವಾರ ಆಯೋಜಿಸಿದ್ದ ‘ನಾಮಕರಣ ಚಳವಳಿಯ ಮುಂದಿನ ಹೋರಾಟದ ಪೂರ್ವಭಾವಿ ಸಭೆ ಹಾಗೂ ನಾಮಕರಣ ಚಳವಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ಇದೊಂದು ಉತ್ತಮ ಹೋರಾಟವಾಗಿದ್ದು, ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರಂಗವನ್ನೇ ಹುಬ್ಬಳ್ಳಿಗೆ ಕರೆಸಿ ಹೋರಾಟ ನಡೆಸಲು ಯೋಜಿಸಲಾಗಿದೆ. ಹುಬ್ಬಳ್ಳಿಯನ್ನು ಕೇಂದ್ರ ಸರ್ಕಾರದ ಶಕ್ತಿ ಕೇಂದ್ರ ಎಂದು ಹೇಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ಕೂರುವವರು ಇಲ್ಲಿಯೇ ಇದ್ದಾರೆ. ಆದರೂ, ಕನ್ನಡದ ಮಹಾಪುರುಷರ ಹೆಸರು ವಿಮಾನ ನಿಲ್ದಾಣಗಳಿಗೆ ಇಡಲು ಹೋರಾಟ ನಡೆಸುತ್ತಿರುವುದು ನೋವಿನ ಸಂಗತಿ’ ಎಂದರು.

‘ಹೋರಾಟ ಸಮಿತಿ ಮೇ 30ರಂದು ನಗರದಲ್ಲಿ ದೊಡ್ಡಮಟ್ಟದ ಹೋರಾಟ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರವನ್ನು ಎಚ್ಚರಿಸುವಂತಾಗಲಿ’ ಎಂದು ಹೇಳಿದರು.

ಕೆಜೆಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್ ಮಾತನಾಡಿದರು. ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಶಿವಾನಂದ ಮುತ್ತಣ್ಣವರ, ಚಂದ್ರಶೇಖರ ಜುಟ್ಟಲ್, ಅನಿಲಕುಮಾರ ಪಾಟೀಲ, ಅಡಿವೆಪ್ಪ ಶಿವಳ್ಳಿ, ಪ್ರೇಮನಾಥ ಚಿಕ್ಕತುಂಬಳ, ಇಮ್ರಾನ್ ಯಲಿಗಾರ, ರಾಜು ಜೋಸೆಫ್, ಸುನೀಲ ರೇವಣಕರ, ವಿಜಯಕುಮಾರ ಅಪ್ಪಾಜಿ, ಬಾಳಮ್ಮ ಜಂಗಿನವರ, ಅರ್ಜುನ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-24-77765078

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.